ಹರಪನಹಳ್ಳಿ:
ತಾಲ್ಲೂಕು ಮೀನು ಉತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ನಿಟ್ಟೂರು ತಿಮ್ಮಣ್ಣ ಚುನಾಯಿತರಾಗಿದ್ದಾರೆ.
ಪಟ್ಟಣದ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಗೆ ನಿಟ್ಟೂರು ತಿಮ್ಮಣ್ಣ, ಮಾಜಿ ಅಧ್ಯಕ್ಷ ತೋಗರಿಕಟ್ಟಿ ಗಂಗಪ್ಪ ನಾಮಪತ್ರ ಸಲ್ಲಿಸಿದ್ದರು. ಒಟ್ಟು ಎಂಟು ಸದಸ್ಯರಲ್ಲಿ ಗಂಗಪ್ಪ ಮೂರು ಮತ ಪಡೆದರೆ, ತಿಮ್ಮಣ್ಣ ಐದು ಮತ ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಸಂಘದ ಸಿಇಒ ಗೋಪಾಲ ಘೋಷಿಸಿದರು.ತಾಲ್ಲೂಕಿನ ಒಟ್ಟು 28 ಕೆರೆಗಳಲ್ಲಿ ಅಲ್ಮರಸಿಕೆರೆ, ನಾರಾಯಣಪುರ ಕೆರೆ, ಅಯ್ಯನಕೆರೆ ಮೂರು ಕೆರೆಗಳು ಈ ಸಂಘದ ವ್ಯಾಪ್ತಿಯಲ್ಲಿ ಬರುತ್ತವೆ.
ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ಸಣ್ಣಹಾಲಪ್ಪ, ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಆರ್.ಲೋಕೇಶ್, ಸಂಘದ ಸದಸ್ಯರಾದ ಪಿ.ಜಗದೀಶ್, ಶಕುಂತಲಮ್ಮ, ರೂಪ್ಲಿಬಾಯಿ, ಹನುಮಂತಪ್ಪ, ಡಿ.ನಾಗಪ್ಪ, ಮುಖಂಡರಾದ ಮರಿಕೆಂಚಪ್ಪ, ರೊಕ್ಕಪ್ಪ, ನಿಟ್ಟೂರು ಸುರೇಶ್, ದ್ಯಾಮಜ್ಜಿ ಆನಂದ, ನಿಟ್ಟೂರು ದೊಡ್ಡಹಾಲಪ್ಪ, ಮ್ಯಾಕಿ ಸಣ್ಣಹಾಲಪ್ಪ, ಕಮ್ಮಾರ ಹಾಲಪ್ಪ, ಆರ್.ಶಿಂಗರಾಯಪ್ಪ, ಉಚ್ಚೆಂಗೆಪ್ಪ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








