ಬೆಂಗಳೂರು
ಪಾನಮತ್ತರಾಗಿ ವಾಹನ ಚಲಾಯಿಸುವ ಚಾಲಕರ ವಿರುದ್ಧ ನಗರದ ವಿವಿದೆಢೆಯ ರಸ್ತೆಗಳು ಜಂಕ್ಷನ್‍ಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡ ನಗರ ಸಂಚಾರ ಪೆÇಲೀಸರು 577 ಮಂದಿ ಪಾನಮತ್ತ ಚಾಲಕರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ.
ನಗರದ ಸಂಚಾರ ವಿಭಾಗದ ಪೂರ್ವ, ಪಶ್ಚಿಮ ಹಾಗೂ ಉತ್ತರ ವಿಭಾಗದ ವಿವಿಧ ಪೆಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹೊಸವರ್ಷದ ಸಂಭ್ರಮದ ಭಾನುವಾರ ರಾತ್ರಿ 8 ರಿಂದ ಮುಂಜಾನೆವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೆಲೀಸರು, ಪಾನಮತ್ತರಾಗಿ ವಾಹನ ಚಲಾಯಿಸುತ್ತಿದ್ದವರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ.
ಪಾನಮತ್ತ ಚಾಲಕರ ವಾಹನ ಹಾಗೂ ಚಾಲನಾ ಪರವಾನಗಿ ಪತ್ರವನ್ನು ವಶಪಡಿಸಿಕೊಳ್ಳಲಾಗಿದ್ದು, ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆಗೆ ಕಳುಹಿಸಲಾಗಿದೆ.
ಪೂರ್ವ ವಿಭಾಗದಲ್ಲಿ 112, ಪಶ್ಚಿಮ ವಿಭಾಗದಲ್ಲಿ 367 ಹಾಗೂ ಉತ್ತರ ವಿಭಾಗದಲ್ಲಿ 188 ಪ್ರಕರಣ ದಾಖಲಿಸಲಾಗಿದೆ. ದೇವನಹಳ್ಳಿ ಬಳಿಯೇ 95 ಪ್ರಕರಣ ದಾಖಲಿಸಿರುವುದು ವಿಶೇಷ ಎಂದು ಹೆಚ್ಚುವರಿ ಪೆಲೀಸ್ ಆಯುಕ್ತ (ಸಂಚಾರ) ಹರಿಶೇಖರನ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







