ಹೊಸಪೇಟೆ:
ಶಬರಿಮಲೈ ಶ್ರೀ ಅಯ್ಯಪ್ಪ ಸನ್ನಿಧಿಗೆ ನಾರಿಯರ ಪ್ರವೇಶ ನನಗೆ ಅತೀವ ನೋವು ಉಂಟು ಮಾಡಿದ್ದು, 800 ವರ್ಷಗಳ ಶಬರಿಮಲೈಯ ಧಾರ್ಮಿಕ ಆಚಾರ-ವಿಚಾರಗಳಿಗೆ ಧಕ್ಕೆ ಉಂಟಾಗಿದೆ ಎಂದು ನಗರದ ನೆಹರೂ ಕಾಲೋನಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಆರ್ಚಕ ಶಂಕರನ್ ನಂಬೂದರಿ ಬೇಸರ ವ್ಯಕ್ತಪಡಿಸಿದ್ದಾರೆ.
ಶಬರಿಮಲೈ ಅಯ್ಯಪ್ಪ ದೇಗುಲಕ್ಕೆ ಇಬ್ಬರು ಮಹಿಳೆಯರು ಪ್ರವೇಶ ಮಾಡಿರುವ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಲಿಂಗ ತಾರತ್ಯಮ ನೀತಿಗೆ ಕಡಿವಾಣ ಹಾಗೂ ಮಹಿಳೆಯರಿಗೆ ಸಮಾನತೆ ಸಾರುವ ದೃಷ್ಠಿಯಿಂದ ಸುಪ್ರಿಂ ಕೋರ್ಟು ಶಬರಿಮೈಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಆದೇಶ ನೀಡಿರುವುದನ್ನು ನಾನು ಗೌರವಿಸುತ್ತೇನೆ. ಪ್ರತಿಯೊಬ್ಬರು ಗೌರವಿಸಬೇಕು. ಆದರೆ, ಈ ಹಿಂದೆ ಸುಪ್ರಿಂ ಕೋರ್ಟು ಪ್ಲಾಸ್ಟಿಕ್ ಬಳಿಕೆ ನಿಷೇಧ ಕುರಿತು ನೀಡಿರುವ ಆದೇಶವನ್ನು ಇಂದು ನಾವು ನಿವೆಲ್ಲರೂ ಎಷ್ಟರಮಟ್ಟಿಗೆ ಪಾಲನೆ ಮಾಡುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಆಡಳಿತರೂಡ ಸರ್ಕಾರಗಳು ಸುಪ್ರಿಂ ಕೋರ್ಟು ಆದೇಶವನ್ನು ಎಷ್ಷರ ಮಟ್ಟಿಗೆ ಪಾಲನೆ ಮಾಡುತ್ತಿವೆ. ಒಂದೊಮ್ಮೆ ಸುಪ್ರಿಂಕೋರ್ಟು ಆದೇಶ ಪಾಲನೆ ಮಾಡಿದ್ದರೆ,ದೇಶದಲ್ಲಿ ಪ್ಲಾಸ್ಟಿಕ್ ಬಳಿಕೆ ನಿಲ್ಲಬೇಕಿತ್ತು. ಪ್ಲಾಸ್ಟಿಕ್ ಬಳಿಕೆ ಸಂರ್ಪೂಣ ಬಂದ್ ಆಗಿದಿಯಾ? ಎಂಬುದನ್ನು ಪ್ರಜ್ಞಾವಂತರು ಚಿಂತನೆ ಮಾಡಬೇಕಿದೆ ಎಂದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಸುಪ್ರಿಂಕೋರ್ಟ್ ಆದೇಶ ಪಾಲನೆ ಮಾಡುವ ನೆಪದಲ್ಲಿ ಶಬರಿಮಲೈ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ. ಸರ್ಕಾರ ಮನಸ್ಸು ಮಾಡಿದ್ದರೆ ಇದನ್ನು ತಡೆಯಬಹುದಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತಡೆಯುವ ಮನಸ್ಸಿಲ್ಲದೇ ಶಬರಿಮಲೈ ಪ್ರದೇಶದಲ್ಲಿ 144 ಸೆಕ್ಸನ್ ಜಾರಿ ಮಾಡಿದ್ದಾರೆ. ಯಾತ್ರಾರ್ಥಿಗಳಿಗೆ ಇರುವ ಮೂಲಭೂತ ಸೌಲಭ್ಯಗಳನ್ನು ಸಿಗದಂತೆ ಮಾಡಿದ್ದಾರೆ. ಈ ಮೂಲಕ ಧಾರ್ಮಿಕ ಆಚರಣೆ, ಭಕ್ತರ ನಂಬಿಕೆಗಳನ್ನು ಗಾಳಿ ತೂರಿದ್ದಾರೆ. ಅಯ್ಯಪ್ಪ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
