ಜ 08-09 ರಂದು ಸಾರ್ವತ್ರಿಕ ಮುಷ್ಕರ

ಹಾವೇರಿ :

        ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ ನೇತೃತ್ವದ ಸರ್ಕಾರ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ದೇಶವ್ಯಾಪಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಜ 08-09 ರಂದು ಸಾರ್ವತ್ರಿಕ ಮುಷ್ಕರ ಜರುಗಲಿದ್ದು, ಜಿಲ್ಲೆಯ ಬಹುತೇಕ ಕಾರ್ಮಿಕ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ಸಿಐಟಿಯು ಸಂಚಾಲಕ ವಿನಾಯಕ ಕುರುಬರ ಹೇಳಿದರು.

         ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತಮಾಡಿದ ಅವರು ದೇಶದಲ್ಲಿ 1991 ರಿಂದ ಜಾರಿಗೆ ಬಂದ ಹೊಸ ಆರ್ಥಿಕ ನೀತಿಯಿಂದ ರೈತರು, ಕೃಷಿ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು ಸೇರಿದಂತೆ ದುಡಿಯುವ ವರ್ಗ ಗಂಭೀರ ಪರಸ್ಥಿತಿಯನ್ನು ಅನುಭವಿಸುವಂತಾಗಿದೆ. ಜನರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬದುಕು ಕಂಗಾಲಾಗಿದೆ. ರೈತರಿಗೆ ಸ್ವಾಮಿನಾಥನ್ ಆಯೋಗ ಜಾರಿಯಾಗಬೇಕು.

        ದುಡಿಯುವ ಎಲ್ಲ ವರ್ಗದ ಜನರಿಗೆ ಕನಿಷ್ಠ ವೇತನ ಜಾರಿಗಾಗಿ ದೇಶದ ಎಲ್ಲ ಭಾಗದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಸಾರ್ವತ್ರಿಕ ಮುಷ್ಕರದ ಹೋರಾಟಕ್ಕೆ ಮುಂದಾಗಿವೆ. ಜಿಲ್ಲೆಯಲ್ಲಿ ದಿ,08 ರಂದು ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಬೃಹತ್ ಮೆರೆವಣೆಗೆಯ ಮೂಲಕ ಸಿದ್ದಪ್ಪ ಸರ್ಕಲಿನಲ್ಲಿ ಬಹಿರಂಗ ಸಭೆಯ ಜರುಗುವುದು. ದಿ,09 ರಂದು ತಾಲೂಕಿನ ಎಲ್ಲ ಕೇಂದ್ರ ಸ್ಥಳಗಳಲ್ಲಿ ಹೋರಾಟ ಮಾಡುವ ಮೂಲಕ ಕೇಂದ್ರ ಸರ್ಕಾರದ ಜನವಿರೋಧಿ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಲಾಗುವುದು. ಸರ್ಕಾರ ದುಡಿಯುವ ವರ್ಗದ ಪರವಾಗಿ ಕೆಲಸ ಮಾಡಬೇಕಾಗುತ್ತದೆ.

         ಜಿಲ್ಲೆಯ ವಿವಿಧ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸಾರ್ವಜನಿಕರು ಈ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ವಿನಾಯಕ ಕುರುಬರ ತಿಳಿಸಿದರು. ನಂತರ ಮಾತನಾಡಿದ ಕಾರ್ಮಿಕ ಸಂಘಟನೆಯ ರಾಜ್ಯ ಮುಖಂಡ ಹೊನ್ನಪ್ಪ ಮರೆಮ್ಮನವರ ಮಾತನಾಡಿ ಕೇಂದ್ರ ಸರ್ಕಾರ ದುಡಿಯುವ ವರ್ಗದ ಹಿತ ಕಾಯದೇ ಉಳ್ಳವರ ಪರ ಕೆಲಸ ಮಾಡುತ್ತಿದೆ. ಹೊಸ ಕಾರ್ಮಿಕ ನೀತಿಯನ್ನು ಜಾರಿಗೆ ತರುವ ಮೂಲಕ ದುಡಿಯುವ ವರ್ಗದ ಬದುಕನ್ನೆ ಬುಡಮೇಲು ಮಾಡುವ ವಿರೋಧಿ ನೀತಿ ಅನುಕರಣೆ ಮಾಡುವಂತಾಗಿದೆ ಎಂದರು. 

          ಅಹೋರಾತ್ರಿ ಧರಣಿಗೆ ಕರೆ : ಬಿಸಿಯೂಟ ತಯಾರಕರ ಕನಿಷ್ಠ ವೇತನ ಜಾರಿಗಾಗಿ ಹಾಗೂ ಖಾಯಂ ಮಾಡುವಂತೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಇಡೇರಿಕೆಗಾಗಿ ನಗರದ ಸಂಸದ ಶಿವಕುಮಾರ ಉದಾಸಿಯವರ ಕಛೇರಿ ಮುಂದೆ ನಾಳೆ (ದಿ,07) ಮಧ್ಯಾಹ್ನ 3 ಘಂಟೆಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಮಕ್ಕೆ ಕರ್ನಾಟಕ ಅಕ್ಷರ ದಾಸೋಹ ಬಿಸಿಯೂ ತಯಾರಕರ ಫೆಡರೇಷನ್ ಕರೆ ನೀಡಲಾಗಿದೆ. ಕಳೆದ ಬಾರಿ ದಿಲ್ಲಿಯಲ್ಲಿ ಹೋರಾಟ ಮಾಡಿದಾಗ ಕೇಂದ್ರ ಸರ್ಕಾರ ಆಶ್ವಾಸನೆ ನೀಡಿತ್ತು.ಆದರೆ ಈವರಿಗೂ ಯಾವುದೇ ಕ್ರಮ ಕೈಗೊಂಡಿಲ್ಲ.

        ಹೋರಾಟದ ಈ ಸ್ಥಳಕ್ಕೆ ಸ್ವಂತಃ ಸಂಸದರು ಬಂದು ನಮ್ಮ ಮನವಿ ಸ್ವೀಕರಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಬೇಡಿಕೆ ಇಡೇರಿಸಲು ಮುಂದಾಗಬೇಕು. ದಿ,07 ರಂದು ಮಧ್ಯಾಹ್ನ ಊಟದ ಕೆಲಸ ಮುಗಿಸಿಕೊಂಡು ಬರುವಂತಾಗಬೇಕು 08 ಸಾರ್ವತ್ರಿಕ ಮುಷ್ಕರ ಇರುವುದರಿಂದ 1 ದಿನ ಅಡುಗೆ ಬಂದ ಮಾಡಿ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವರು. ದಿ, 08 ರಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ಮುಷ್ಕರದಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ತಮ್ಮ ಬೇಡಿಕೆಗಳಿಗಾಗಿ ಅಹೋರಾತ್ರಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

          ಈ ಎಲ್ಲ ಹೋರಾಟಗಳ ಮೂಲಕ ಕಾರ್ಮಿಕ ವರ್ಗದ ಬೇಡಿಕೆಗೆ ಸರ್ಕಾರ ಮುಂದಾಗಬೇಕು ಇಲ್ಲವಾದರೆ ಉಗ್ರ ಹೋರಾಟ ಮುಂದುವರಿಯುವುದು ಎಂದು ಸರ್ಕಾರಗಳಿಗೆ ಹೊನ್ನಪ್ಪ ಮರೆಮ್ಮನವರ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಡಿಸಿ ಪೂಜಾರ.ಸುನಂದಮ್ಮ ರೇವಣ್ಣಕರ.ವಾಣಿಶ್ರೀ ಜೀವಣ್ಣನವರ.ಮಂಜುಳಾ ರೊಡ್ಡಣ್ಣನವರ.ಎಸ್‍ಎಫ್‍ಐ ಮುಖಂಡ ಬಸವರಾಜ ಭೋವಿ ಇತರರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link