ಹಾವೇರಿ
ಬಿಜೆಪಿ ಪಕ್ಷದ ವತಿಯಿಂದ ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ತೆರಿಗೆ ಹೆಚ್ಚಳ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲಿಕಿರುವ ಸಚಿವ ಪುಟ್ಟರಂಗಶೆಟ್ಟಿಯವರ ರಾಜೀನಾಮೆಗೆ ಒತ್ತಾಯಿಸಿ ಕಾರ್ಯಕರ್ತರು ಸಿದ್ದಪ್ಪ ಸರ್ಕಲಿನಲ್ಲಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿಯಾದ ಸಿದ್ದರಾಜ ಕಲಕೋಟಿ ಮಾತನಾಡಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ವ್ಯಾಪಕ ಪ್ರಮಾಣದ ಭಷ್ಟಾಚಾರ ನಡೆಯುತ್ತಿದೆ. ಮೋಹನ್ ಎಂಬ ವ್ಯಕ್ತಿ ಮಂತ್ರಿಯಾದ ಪುಟ್ಟರಂಗಶೆಟ್ಟಿ ತಲುಪಿಸುವ 26.50 ಲಕ್ಷ ರೂ. ಗಳೊಂದಿಗೆ ಸಿಕ್ಕಿಬಿದ್ದಿರುವುದು ಅತ್ಯಂತ ನಾಚಿಗೆಡಿನ ಸಂಗತಿ ರಾಜ್ಯದ ಘನತೆಯ ಪ್ರತೀಕವಾಗಿರುವ ವಿಧಾನಸೌದ ಕಾಂಗ್ರೇಸ್ ಮತ್ತು ಜೆಡಿಎಸ್ ಅಧಿಕಾರ ಅವಧಿಯಲ್ಲಿ ದುರ್ಬಳಿಕೆ ಆಗುತ್ತಿದೆ ಎಂದು ಹೇಳಿದರು.
ಶಾಸಕರಾದ ನೆಹರು ಓಲೇಕಾರ ಮಾತನಾಡಿ ಪುಟ್ಟರಂಗಶೆಟ್ಟಿಯವರು ಮಂತ್ರಿಯಾದ ನಂತರ ಭ್ರಷ್ಟಾಚಾರದಲ್ಲಿ ತೊಡಗಿರುವುದು ಸಾಬಿತಾಗಿದೆ, ವಿಧಾನಸೌದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತನ್ನ ಘನತೆಗೌರವವನ್ನು ಕಳೆದುಕೊಂಡಿದೆ. ಕಾರಣ ವಿಧಾನಸೌದದಲ್ಲಿಯೆ ಪುಟ್ಟರಂಗಶೆಟ್ಟಿಯವರ ಆಪ್ತ ಮೋಹನ್ ಎಂಬ ವ್ಯಕ್ತಿ 26.50 ಲಕ್ಷ ರೂ ತೆಗೆದುಕೊಂಡು ಹೊಗುವ ಸಂದರ್ಭದಲ್ಲಿ ಹಣದೊಂದಿಗೆ ಸಿಕ್ಕಿಬಿದ್ದಿರುವುದು ತಕ್ಷಣವೆ ರಾಜೀನಾಮೆ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಡೀಜೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡಿದರು ಸಹ ರಾಜ್ಯ ಸರ್ಕಾರ ಅವುಗಳ ಮೇಲಿನ ತೆರಿಗೆಗಳನ್ನು ಹೆಚ್ಚುಮಾಡಿರುವುದು ಅತ್ಯಂತ ವಿಷಾದಕಾರಿ ಸಂಗತಿ ತೆರಿಗೆಯನ್ನು ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ ಮಾತನಾಡಿ ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಹೆಚ್ಚಾದಾಗ ಕೇಂದ್ರ ಸರ್ಕಾರಕ್ಕೆ ಬೊಟ್ಟು ಮಾಡುತ್ತಿದ್ದ ರಾಜ್ಯ ಸರ್ಕಾರ ಇಂದು ತೈಲ ಬೆಲೆಯನ್ನು ಜಾಸ್ತಿ ಮಾಡಿರುವುದು ರಾಜ್ಯ ಸರ್ಕಾರದ ಜನವಿರೋದಿ ನೀತಿಯನ್ನು ತೊರುಸುತ್ತದೆ. ತಕ್ಷಣವೇ ರಾಜ್ಯ ಸರ್ಕಾರ ಡಿಸೇಲ್ ಮತ್ತು ಪೆಟ್ರೋಲ್ ತೆರಿಗೆಯನ್ನು ರದ್ದುಪಡಿಸಬೇಕು. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸರ್ಕಾರದ ಮಂತ್ರಿಗಳೆ ನೇರವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಇಂತಹ ಸರ್ಕಾರದಿಂದ ರಾಜ್ಯದ ಅಭಿವೃದ್ದಿ ಅಸಾಧ್ಯ ಎಂದರು.
ಈ ಸಂದರ್ಭದಲ್ಲಿ ನಗರಘಟಕದ ಅಧ್ಯಕ್ಷರಾದ ನಿರಂಜನ ಹೆರೂರ, ಪ್ರಧಾನ ಕಾರ್ಯದರ್ಶಿಗಳಾದ ಸಂಗೂರ ಈರಣ್ಣ, ನೀಲಪ್ಪ ಚಾವಡಿ, ಡಾ. ಸಂತೋಷ ಆಲದಕಟ್ಟಿ, ಪ್ರಭಣ್ಣ ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ಪ್ರಶಾಂತ ಗಾಣಗೇರ, ನಾಗರಾಜ ಹುಳ್ಳಿಕೊಪ್ಪಿ, ಆನಂದ ಮಿಸಿಹೊನ್ನಪ್ಪನವರ, ರಮೇಶ ಪಾಲನಕರ, ಶಂಕರಗೌಡ್ರ ಹಟ್ಟಿ, ನೀಲಪ್ಪ ಈಟೇರ, ಚನ್ನಮ್ಮ ಬ್ಯಾಡಗಿ, ಕವಿತ ಯಲವಿಗಿಮಠ, ಚನ್ನಮ್ಮ ಪಾಟೀಲ, ರೇಣುಕಾ ಮೇಲ್ಮುರಿ, ಲಲಿತಾ ಗುಂಡೇನಹಳ್ಳಿ, ಪಾರ್ವತಿ ಪಾಟೀಲ, ಕೋಟೆಪ್ಪ ಕಂಬಳಿ, ಬಸವರಾಜ ಬ್ಯಾಡಗಿ, ಅಡವೆಯ್ಯ ಯಲವಿಗಿಮಠ, ಮಾಲತೇಶ ಗೌರಮ್ಮನವರ, ಶಿವಬಸಪ್ಪ ಹಲಗಲಿ, ಚಿಕ್ಕಪ್ಪ ದೊಡ್ಡತಳವಾರ, ಜಗದೀಶ ಮಲಗೋಡ, ನಜೀರ ನದಾಫ್, ಬಾಬುಸಾಬ ಮೋಮಿನಗಾರ, ಹನುಮಂತಪ್ಪ ದಾಸರ, ನಿಂಗನಗೌಡ ಹನಮಗೌಡ್ರ, ಮಂಜುನಾಥ ಇಟಗಿ, ಅಶೋಕ ಬಣಕಾರ ಮತ್ತು ಕಾರ್ಯಕರ್ತರು, ಮುಖಂಡರು, ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ