ಮತ್ತೆ ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ : ಕೇಂದ್ರ ಸರ್ಕಾರಕ್ಕೆ ಮುಖಭಂಗ!!

ನವದೆಹಲಿ: 

      ಕೇಂದ್ರ ಸರ್ಕಾರದಿಂದ ಕಡ್ಡಾಯ ರಜೆ ಮೇರೆಗೆ ಮನೆಗೆ ಕಳುಹಿಸಿದ್ದ ಮೂರು ತಿಂಗಳ ಬಳಿಕ ಕೇಂದ್ರದ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂ ಮತ್ತೆ ಸಿಬಿಐ ನಿರ್ದೇಶಕನನ್ನಾಗಿ ವರ್ಮಾರನ್ನು ನೇಮಿಸಿ ಆದೇಶ ನೀಡಿದೆ.

      ಸುಪ್ರೀಂ ಕೋರ್ಟ್‌ ಇಂದು ಮಂಗಳವಾರ ಕೇಂದ್ರ ಸರಕಾರದ ಅಕ್ಟೋಬರ್‌ 23ರ ಆದೇಶವನ್ನು ಅನೂರ್ಜಿತಗೊಳಿಸಿ ಸಿಬಿಐ ನಿರ್ದೇಶಕರನ್ನಾಗಿ ಆಲೋಕ್‌ ಕುಮಾರ್‌ ವರ್ಮಾ ಅವರನ್ನು ಹುದ್ದೆಯಲ್ಲಿ ಪುನಃಸ್ಥಾಪಿಸಿದೆ. 

      ಸಿಬಿಐ ಆಂತರಿಕ ಕಚ್ಚಾಟ ಹಾಗೂ ನಿರ್ದೇಶಕ ಅಲೋಕ್ ವರ್ಮಾ ಕಡ್ಡಾಯ ರಜೆ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಸಿಬಿಐ ನಿರ್ದೇಶಕರಾಗಿ ಅಲೋಕ್‌ ವರ್ಮಾ ಮುಂದುವರಿಯುವಂತೆ ಸೂಚನೆ ನೀಡಿದೆ.

      ಸಿಬಿಐ ನಿರ್ದೇಶಕರು ಮತ್ತು ವಿಶೇಷ ನಿರ್ದೇಶಕರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ರಾತ್ರೋ ರಾತ್ರಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್‌ನಲ್ಲಿ ಭಾರಿ ಮುಖಭಂಗ ಅನುಭವಿಸಿದೆ.

      ವರ್ಮಾ ವಿರುದ್ಧ  ಸಿವಿಸಿ ನಡೆಸುತ್ತಿರುವ ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ತನಿಖೆಯನ್ನು ಮುಗಿಸುವ ತನಕ ಈ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 
 

 

 

Recent Articles

spot_img

Related Stories

Share via
Copy link