ಕೊರಟಗೆರೆ :
ಸಸ್ಯ ಸಂಜೀವಿನಿ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ಸಿದ್ದರಬೆಟ್ಟದಲ್ಲಿ ಪ್ಲಾಸ್ಟಿಕ್ ಎಂಬ ಮಹಾಮಾರಿ ಮಿತಿಮೀರಿ ತುಂಬಿಕೊಳ್ಳುತ್ತದೆ. ಸ್ವಚ್ಛತೆಯ ಬಗ್ಗೆ ಅರಣ್ಯ ಇಲಾಖೆಯ ಉದಾಸೀನತೆ ಎದ್ದು ಕಾಣುತ್ತಿದೆ.
ಸಿದ್ದರಬೆಟ್ಟ ಕ್ಷೇತ್ರವು ತುಮಕೂರಿನ ಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ಟ್ರಕಿಂಗ್ ಗೆ ಎಂದು ವಾರಾಂತ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಭಕ್ತಾದಿಗಳು ಈ ಸ್ಥಳಕ್ಕೆ ಆಗಮಿಸುತ್ತಾರೆ. ಅವರು ತರುವಂತಹ ಆಹಾರದ ಪೊಟ್ಟಣಗಳು, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಇತರ ವಸ್ತುಗಳನ್ನು ಎಲ್ಲೆಂದರಲ್ಲಿ ಮನಬಂದಂತೆ ಎಸೆಯುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಇಲ್ಲಿ ಸರಿಯಾದ ಕಸದ ಬುಟ್ಟಿಗಳ ವ್ಯವಸ್ಥೆ ಇಲ್ಲ.
ಇರುವ ಒಂದೆರಡು ಕಸ್ತ ಬುಟ್ಟಿಗಳು ತುಂಬಿಹೋಗಿ ತಿಂಗಳುಗಳೇ ಕಳೆದಿವೆ. ಬೆಟ್ಟದ ತುಂಬಿಲ್ಲ ಪ್ಲಾಸ್ಟಿಕ್ ಹರಡಲು ಪ್ರಾರಂಭಿಸಿದೆ. ಬೆಟ್ಟವನ್ನು ಏರುವಂತಹ ಪ್ರವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಇದು ಒಂದು ಕಡೆಯಾದರೆ, ಇನ್ನೂ ನಮ್ಮ ಅರಣ್ಯ ಇಲಾಖೆಯಂತೂ ಸ್ವಚ್ಛತೆಯನ್ನು ಕಾಪಾಡಿ ಎಂಬ ಬಿತ್ತಿ ಚಿತ್ರಗಳನ್ನು ಬರೆಸುವುದಷ್ಟೇ ಅದರ ಕೆಲಸವಾಗಿದೆ. ಸ್ವಚ್ಛತೆಯ ಕೆಲಸ ಮಾತ್ರ ಮಾಡುತ್ತಿಲ್ಲ.
ಬಂಡೆಗಳ ನಡುವೆ ಪ್ಲಾಸ್ಟಿಕ್ ರಾಶಿ ರಾಶಿಯಾಗಿ ಬಿದ್ದಿದೆ. ಅರಣ್ಯ ಇಲಾಖೆಯವರು ಈ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಧಾರ್ಮಿಕ ದತ್ತಿ ಇಲಾಖೆಯು ಆದಾಯವನ್ನು ಬೊಕ್ಕಸೆಯಲ್ಲಿ ತುಂಬಿಕೊಂಡು ಅಭಿವೃದ್ಧಿಯನ್ನು ಮರೆತಂತ್ತಿದೆ. ಪರಿಸರವನ್ನು ರಕ್ಷಿಸುವ ಮನಸ್ಸು ಪ್ರವಾಸಿಗರಿಗೂ ಇಲ್ಲ, ಅರಣ್ಯ ಇಲಾಖೆಯವರಿಗಂತೂ ಮೊದಲೇ ಇಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
