ಬೆಂಕಿ ಕಾಯಿಸುವ ನೆಪದಲ್ಲಿ ಅಂಗಡಿಗೆ ಕನ್ನ ಹಾಕಿದ ಕಳ್ಳರು…!!!!

ಬೆಂಗಳೂರು:
 
         ಬರೀ ತಂತ್ರಜ್ಞಾನವಲ್ಲದೇ ಚಳಿಯಲ್ಲೂ ದಾಖಲೆಯ ಮಾಡುತ್ತಿರುವಂತಹ ಬೆಂಗಳೂರಿನಲ್ಲಿ ಕಳ್ಳರೂ ತಮ್ಮ ಹೊಸ ಕೈಚಳಕಗಳನ್ನು ಪ್ರಯೋಗಿಸ ತೊಡಗಿದ್ದಾರೆ.
        ಬೆಳಂಬೆಳಿಗ್ಗೆ ಬಟ್ಟೆ ಅಂಗಡಿ ಮುಂದೆ ಬೆಂಕಿ ಕಾಯಿಸಿಕೊಳ್ಳವ ನೆಪದಲ್ಲಿ ಹಳೆಯ ಬೆಡ್’ಶೀಟ್ ಹೊದ್ದು ಕುಳಿತಿದ್ದ 6 ಮಂದಿ ಮಹಿಳೆಯರ ಗ್ಯಾಂಗ್’ವೊಂದು ಶಟರ್ ಮುರಿದು ಕನ್ನ ಹಾಕಿರುವ ಘಟನೆ ಚಿಕ್ಕಪೇಟೆಯಲ್ಲಿ ನಡೆದಿದೆ. 
       ಚಿಕ್ಕಪೇಟೆಯ ಭೈರಪ್ಪ ಆ್ಯಂಡ್ ಸನ್ಸ್ ಸಿಲ್ಕ್ಸ್ ಬಟ್ಟೆ ಅಂಗಡಿಯಲ್ಲಿ ಜ.2 ರಂದು ಘಟನೆ ನಡೆದಿದ್ದು, ಲಕ್ಷಾಂತರ ರೂ  ದರೋಡೆಗೆ ನಡೆಸಲಾಗಿದೆ ಎಂದು ಸಿ.ಟಿ.ಮಾರುಕಟ್ಟೆ ಠಾಣೆಯಲ್ಲಿ ಅಂಗಡಿ ಮಾಲೀಕರು ದೂರು ನೀಡಿದ್ದಾರೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ