ಬೆಂಗಳೂರು
ಮೂವರು ಯುವಕರನ್ನು ಅಡ್ಡಗಟ್ಟಿ ಪೊಲೀಸರೆಂದು ಹೇಳಿಕೊಂಡು ಮಾವಿನ ತೋಪಿಗೆ ಎಳೆದೊಯ್ದು ಪೈಪ್‍ಗಳಿಂದ ಹಲ್ಲೆ ನಡೆಸಿ ಚಿನ್ನ, ಬೆಳ್ಳಿ ಆಭರಣಗಳು, ಮೊಬೈಲ್‍ಗಳನ್ನು ದೋಚಿದ್ದ ಐವರು ಸುಲಿಗೆ ಕೋರರನ್ನು ಕೊತ್ತನೂರು ಪೊಲೀಸರು ಬಂಧಿಸಿ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇನ್ನು ಮೂವರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ರಾಮಮೂರ್ತಿ ನಗರದ ಟಿಸಿ ಪಾಳ್ಯದ ಪುಗಳೇಂದಿ (38), ಅರಿವರಸನ್ (38) ಎನ್‍ಆರ್‍ಐ ಲೇಔಟ್‍ನ ಸೆಲ್ವರಾಜ್ (21) ಪೆರಿಯಸ್ವಾಮಿ (42), ನರಸಿಂಹಯ್ಯ ಲೇಔಟ್‍ನ ಮಹಾಲಿಂಗಂ (44) ಬಂಧಿತ ಆರೋಪಿಗಳಾಗಿದ್ದು ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇನ್ನು ಮೂವರಿಗಾಗಿ ತೀವ್ರ ಶೋಧ ನಡೆಸಲಾಗಿದೆ
ಆರೋಪಿಗಳಿಂದ ಮಾರುತಿ ಡಿಸೈರ್ ಕಾರು, 3 ಬೈಕ್‍ಗಳು, 1 ಚಿನ್ನದ ಚೈನು, 3 ಬೆಳ್ಳಿಯ ಉಂಗುರಗಳು, 3 ಮೊಬೈಲ್‍ಗಳು, ವಾಚು, ಬೆಳ್ಳಿಯ ಬ್ರೆಸ್‍ಲೈಟ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಕಳೆದ ಡಿ. 30ರಂದು ಸಂಜೆ 4ರ ವೇಳೆ ಮಾಲೊಂದರಲ್ಲಿ ಕೆಲಸ ಮಾಡುತ್ತಿದ್ದ ಸಲೀಂಪಾಷ ಮತ್ತವನ ಸ್ನೇಹಿತರಾದ ಸಿದ್ದಿಕ್ ಹಾಗೂ ಯಾಸಿನ್ ಷರೀಫ್ ಅವರು ಬಿಳಿ ಶಿವಾಲೆ ರಸ್ತೆಯಿಂದ ಹೋಗುತ್ತಿದ್ದಾಗ ಬಂಧಿತ ಆರೋಪಿಗಳೂ ಸೇರಿ ಎಂಟತ್ತು ಮಂದಿ ತಾವು .ಪೊಲೀಸರೆಂದು ಅಡ್ಡಗಟ್ಟಿ ಮಾವಿನ ತೋಪಿಗೆ ಎಳೆದೊಯ್ದು ಫೈಬರ್ ಪೈಪ್‍ಗಳಿಂದ ಹಲ್ಲೆ ಮಾಡಿ ಸುಲಿಗೆ ಮಾಡಿದ್ದರು.
ಬಂಧಿತ ಆರೋಪಿಗಳು ಪಿಗ್ಮಿ ಸಂಗ್ರಹ ಮಾಡುವುದು, ಹಣ ವಸೂಲಾತಿ ಮಾಡವ ಕೆಲಸ ಮಾಡುತ್ತಿದ್ದರು. ತಮ್ಮನ್ನು ಹಿಂಬಾಲಿಸಿ ಹಲ್ಲೆ ನಡೆಸಿ ಸುಲಿಗೆ ನಡೆಸಲಿದ್ದಾರೆ ಎಂಬ ಅನುಮಾನವನ್ನು ಇಬ್ಬರು ಯುವಕರ ಮೇಲೆ ಹೊಂದಿದ್ದು, ಅದೇ ಕಾರಣಕ್ಕಾಗಿ ಸುಲಿಗೆ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಕೊತ್ತನೂರು ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಕೊಂಡಾಗ ಸುಲಿಗೆ ಮಾಡಿದ ವ್ಯಕ್ತಿಗಳು ನಮ್ಮನ್ನೇ ಸುಲಿಗೆ ಮಾಡುವ ಸಂಚು ರೂಪಿಸಿದ್ದ ಸಂಶಯದ ಮೇಲೆ ಈ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ ಆರೋಪಿಗಳೆಲ್ಲರೂ ಮೊದಲ ಬಾರಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು,ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








