ಹಾವೇರಿ :
ವಿವಿಧ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶಾದ್ಯಂತ ಕಾರ್ಮಿಕರು ನಡೆಸುತ್ತಿರುವ ಅಖಿಲ ಭಾರತ ಮುಷ್ಕರಕ್ಕೆ ಬೆಂಬಲಿಸಿ ಹಾವೇರಿ ಜಿಲ್ಲಾ ಕೇಂದ್ರದಲ್ಲಿಯೂ ಕೂಡಾ ಎಸ್ಎಫ್ಐ ಕಾರ್ಯಕರ್ತರು ಶಾಲಾ-ಕಾಲೇಜು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಈ ಸಚಿದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಬೋವಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿದ್ಯಾರ್ಥಿ ಯುವಜನ ವಿರೋಧಿ ನೀತಿಗಳನ್ನು ಹಾಗೂ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿವೆ ಎಂದು ಆರೋಫಿಸಿದರು. ಉದ್ಯೋಗ ಸೃಷ್ಟಿ ಮಾಡಲು ಎರಡು ರಾಜ್ಯ ಸರ್ಕಾರಗಳು ಹಿಂದೇಟು ಹಾಕುತ್ತಿವೆ ಎಂದು ಆರೋಪಿಸಿದರು.
ಶಿಕ್ಷಣದ ವ್ಯಾಪಾರೀಕರಣ ,ಖಾಸಗೀಕರಣ, ಕೇಸರಿಕರಣದ ನಿಲ್ಲಿಸಬೇಕು, ಶಿಕ್ಷಣದ ಮೇಲೆ ದಾಳಿ ಮಾಡುವ ಶಿಕ್ಷಣ ವಿರೋಧಿಗಳ ಕಾಯ್ದೆರದ್ದತಿಗೊಳಿಸಬೇಕು, ಕೇಂದ್ರ ಬಜೆಟ್ ನಲ್ಲಿ10%, ಜಿ.ಡಿ.ಪಿ ಯಲ್ಲಿ 6% ,ರಾಜ್ಯ ಬಜೆಟ್ 30% ಶಿಕ್ಷಣಕ್ಕೆ ಹಣ ಮೀಸಲಿಡಲು ಒತ್ತಾಯಿಸಿದರು, ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಉಚಿತ ಪ್ರಯಾಣ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಜಾರಿಗೊಳಿಸಬೇಕು , ಖಾಸಗಿ ರಂಗದಲ್ಲಿನ ಮೀಸಲಾತಿಜಾರಿಯಾಗಬೇಕು, ವಿದ್ಯಾರ್ಥಿ ವೇತನ ಹೆಚ್ಚಿಸಬೇಕು, ಬಾಕಿ ಇರುವ ವೇತನ ಬಿಡುಗಡೆಯಾಗಬೇಕು, ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಆಹಾರ ಭತ್ಯೆ ಹೆಚ್ಚಿಸಬೇಕು, ಸರಕಾರಿ ಶಾಲೆಗಳ ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಮೋಹನ ಆರ್ಬಿ, ಅರುಣ ಕಡಕೋಳ, ಅಕ್ಬರ್, ಜ್ಯೋತಿ ದೊಡ್ಡಮನಿ, ಗುಡ್ಡಪ್ಪ, ಸೈಯ್ಯದ್, ಪ್ರದೀಪ ಹಾಗೂ ಮುಂತಾದವರು ಇದ್ದರು.