ಹಾವೇರಿ :
ಸ್ವಾಮಿ ವಿವೇಕಾನಂದರ 156ನೇ ಜಯಂತಿ ಪ್ರಯುಕ್ತ ಸಮೃದ್ಧ ಭಾರತ್ಕಕಾಗಿ ಪ್ರತಿಯೊಬ್ಬರೂ ಕಡ್ಡಾಯ ತಮದಾನ, ಅಂಧರ ಬಾಳಿಗೆ ಬೆಳಕಾಗುವುದಕ್ಕೆ ನೇತ್ರದಾನ ಸೇರಿದಂತೆ ಉತ್ತಮನಾಗು ಉಪಕಾರಿಯಾಗು ಎನ್ನುವ ಸದುದ್ದೇಶವನ್ನು ಇಟ್ಟುಕೊಂಡು, ರಾಷ್ಟ್ರೀಯ ಯುವದಿನದ ಅಂಗವಾಗಿ ದಿ. 12 ರಿಂದ 26 ರವರೆಗೆ ವಿವೇಕ್ ಬ್ಯಾಂಡ್ ಅಭಿಯಾನವನ್ನು ಮಾಡಲಾಗುತ್ತಿದೆ ಎಂದು ವಿವೇಕ್ ಬ್ಯಾಂಡ್ ಜಿಲ್ಲಾ ಸಂಚಾಲಕ ಡಾ.ಸಂತೋಷ ಆಲದಕಟ್ಟಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವೇಕ್ ಬ್ಯಾಂಡ್ನ್ನು ದಿ.11 ರಂದು ಜಿಲ್ಲಾ ಗುರುಭವನದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮುಖ್ಯ ಅಥಿತಿಗಳಾಗಿ ಜಿ.ಪಂ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಮುಖ್ಯ ವಕ್ತಾರರಾಗಿ ಎಬಿವಿಪಿ ನಿಕಟಪೂರ್ವ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ವಿನಯ ಬಿದರಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ವರ್ಷದ ಅಭಿಯಾನದಲ್ಲಿ ಪರೋಪಕಾರಿ ಆಗುವುದಕ್ಕೆ ರಕ್ತದಾನವನ್ನು ಮಾಡಬೇಕು, ಅಂಧರ ಬಾಳಿಗೆ ಬೆಳಕಾಗುವುದಕ್ಕೆ ನೇತ್ರದಾನವನ್ನು ಮಾಡಬೇಕು ಹಾಗೂ ಸ್ವಾಭಿಮಾನಿ, ಸಮೃದ್ಧ ನಾಡ ನಿರ್ಮಾಣಕ್ಕೆ ಸಸಿ ನೆಡುವುದು ಮತ್ತು ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕೆ ಸ್ವದೇಶಿ ವಸ್ತುಗಳನ್ನು ಬಳಸಬೇಕೆಂಬ ವಿಶೇಷ ದೃಷ್ಟಿಕೋನದಿಂದ ಈ ಅಭಿಯಾನವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಕಳೆದ ವರ್ಷ 8.5 ಸಾವಿರ ಜಿಲ್ಲೆಯ ಯುವಕ, ಯುವತಿಯರು ವಿವೇಕ್ ಬ್ಯಾಂಡನ್ನು ಕೈಗೆ ಧರಿಸಿದ್ದರು. ಈ ವರ್ಷ 20 ಸಾವಿರಕ್ಕೂ ಅಧಿಕ ಯುವಕ, ಯುವತಿಯರು ಕೈಗೆ ವಿವೇಕದದ ಬ್ಯಾಂಡ್ ಧರಿಸಿಕೊಳ್ಳುವಂತೆ ಪ್ರೇರೆಪಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ವಿವೇಕ್ ಬ್ಯಾಂಡ್ ಅಭಿಯಾನವನ್ನು ಯಶಸ್ವಿಗೊಳಿಸುವದಕ್ಕೆ ಪ್ರತಿ ತಾಲೂಕಿನಲ್ಲಿ ವಿವೇಕ್ ಬ್ಯಾಂಡ್ ತಂಡ ಶಾಲಾ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸಲು ಉದ್ದೇಶಿಸಿದೆ. ಸ್ವದೇಶಿ ವಿಚಾರವುಳ್ಳ ಈ ಅಭಿಯಾನದಲ್ಲಿ ಜಿಲ್ಲೆಯ ಎಲ್ಲ ಯುವಕ ಯುವತಿಯರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು.
ಸಮರ್ಥ ಭಾರತ ಸಂಘಟನೆಯಿಂದ ಕಳೆದ ಐದು ವರ್ಷಗಳಿಂದ ವಿವೇಕ್ ಬ್ಯಾಂಡ್ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಮಾಡಲಾಗುತ್ತಿದೆ. ದಿ.26 ರಂದು ಬೃಹತ್ ಸಾರ್ವಜನಿಕ ಸಭೆಯನ್ನು ಆಚರಿಸಲಾಗುವುದು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ವಿದೇಶಿ ಸಂಸ್ಕತಿಯ ಕಾರ್ಯಕ್ರಮಗಳನ್ನು ಬಿಟ್ಟು ಸ್ವದೇಶಿ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜನೆ ಮಾಡುವುದಕ್ಕೆ ವಿದ್ಯಾರ್ಥಿಗಳಿಗೆ ಪ್ರೇರೇಪಣೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿವೇಕ್ ಬ್ಯಾಂಡ್ನ ಸ್ಟಿಕರ ಹಾಗೂ ಕರಪತ್ರಗಳನ್ನಿ ಬಿಡುಗಡೆ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಕಿರಣ ಕೋಣನವರ, ಪ್ರಶಾಂತ ಗಾಣಿಗೇರ, ಪ್ರವೀಣ ಅಮಗರಗಟ್ಟಿ ಹಾಗೂ ಆನಮದ ಕಾಸಿನಿಸ್ಸೀಮಪ್ಪನವರ ಪಾಲ್ಗೊಂಡಿದ್ದರು.