ಕಡಿಮೆ ದರದಲ್ಲಿ ಕೈಗೆಟುಕುವ ಮನೆ….!!!!

ಬೆಂಗಳೂರು:

      ಸತತ ಎರಡು ವರ್ಷಗಳ ಕಾಯುವಿಕೆಯ ಬಳಿಕ, ಕೇಂದ್ರದ ಮಹತ್ವಾಕಾಂಕ್ಷೆಯ ಕೈಗೆಟುಕುವ ದರದ ವಸತಿ ಯೋಜನೆ ಕರ್ನಾಟಕದಲ್ಲಿ ಸಂಪೂರ್ಣಗೊಳ್ಳುತ್ತಿದೆ. ಕೇಂದ್ರವು ರಾಜ್ಯಕ್ಕೆ 3.4 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ. ಇದು ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಅತಿ ಹೆಚ್ಚು ಮನೆಗಳಾಗಿವೆ.

       ಅಂತೆಯೇ ಹೆಬ್ರನ್ ಪ್ರಾಪರ್ಟೀಸ್, ಪೂರ್ವ ಬೆಂಗಳೂರಿನ ರಾಮಮೂರ್ತಿ ನಗರದ ತಂಬುಚೆಟ್ಟಿ ಪಾಳ್ಯದಲ್ಲಿ ಕೈಗೆಟುಕುವ ದರದ ವಸತಿ ಯೋಜನೆಯನ್ನು ಆರಂಭಿಸಿದೆ. “ಇತ್ತೀಚೆಗೆ ನಾವು 448 ಘಟಕಗಳನ್ನು ರೂ. 30 ಲಕ್ಷ ಮೌಲ್ಯಕ್ಕೆ ಬಿಡುಗಡೆ ಮಾಡಿದ್ದೇವೆ ಎಂದು ಹೆಬ್ರನ್ ಪ್ರಾಪರ್ಟೀಸ್ ಸಿಇಒ ಪ್ರೀನಾಂದ್ ಪ್ರೇಮಚಂದ್ರನ್ ತಿಳಿಸಿದ್ದಾರೆ. ಬಿಡಿಎ ಅನುಮೋದಿಸಿದ ಈ ಯೋಜನೆಯು 4.08 ಎಕರೆ ಭೂಮಿಯಲ್ಲಿ ನಿರ್ಮಾಣಗೊಂಡಿದೆ. ಡೆವಲಪರ್ಸ್ ಮತ್ತು ರಿಯಲ್ ಎಸ್ಟೇಟ್ ತಜ್ಞರು ಈ ವಲಯಕ್ಕೆ ಪೆÇೀತ್ಸಾಹ ನೀಡುತ್ತಿದ್ದಾರೆ, ಆದರೆ ಖಾಸಗಿ ವಲಯ ತೊಡಗಿಸಿಕೊಳ್ಳುವ ಅಗತ್ಯತೆ ಮತ್ತು ಮಹತ್ವಾಕಾಂಕ್ಷೆಯ ಯೋಜನೆಯ ಯಶಸ್ಸಿಗೆ ಸಬ್ಸಿಡಿ ನೀಡುವ ಅಗತ್ಯವನ್ನು ಒತ್ತಿ ಹೇಳಿದರು.

        ಈ ಮನೆಗಳು ಕಡಿಮೆ ಆದಾಯದ ಗುಂಪುಗಳಿಗೆ ರೂ 9.95 ಲಕ್ಷಕ್ಕೆ ಲಭ್ಯವಿವೆ. ಮಧ್ಯಮ ಆದಾಯದ ಗುಂಪುಗಳಿಗೆ (ಎಂಐಜಿ) ರೂ.14 ಲಕ್ಷ ಮೌಲ್ಯದ ಮನೆಗಳಿವೆ. ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಯೋಜನೆಯಿಂದ ಖರೀದಿದಾರರು ಇಎಂಐ ಅನ್ನು 2,500 ರೂಪಾಯಿಗೆ ಇಳಿಸಿಕೊಳ್ಳಬಹುದು. ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಹಾಗೂ ಗುಣಮಟ್ಟವನ್ನು ಹೊಂದಿರುವ ಈ ಮನೆಗಳನ್ನು ಕೊಳ್ಳುವುದರಿಂದ ನಿಮ್ಮ ಹಣದ ಮೌಲ್ಯಕ್ಕೆ ಸರಿಯಾದ ಬೆಲೆ ಸಿಗುತ್ತದೆ ಎಂದು ಫೆಲಿಸಿಟಿ ಅಡೋಬ್ ಎಲ್‍ಎಲ್‍ಪಿ ನಿರ್ದೇಶಕ ಪ್ರಣವ್ ಶರ್ಮಾ ತಿಳಿಸಿದ್ದಾರೆ. ಯೋಜನೆಯು ಕೋಲಾರ ಮತ್ತು ದೊಡ್ಡಬಳ್ಳಾಪುರದಲ್ಲಿ ಆರಂಭಗೊಳ್ಳಲಿದೆ. ರೂ 14 ಲಕ್ಷ ಮೌಲ್ಯದ ಮನೆಯಲ್ಲಿ ಕ್ಲಬ್, ಈಜುಕೊಳ, ಲಿಫ್ಟ್, ಮಕ್ಕಳ ಪ್ಲೇ ಪ್ರದೇಶ ಮತ್ತು ಪಾರ್ಕಿಂಗ್ ಸೌಲಭ್ಯಗಳಿವೆ.

       ಜೂನ್ ತಿಂಗಳಲ್ಲಿ 3.4 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದ್ದು, ಈ ಪೈಕಿ 44,636 ಮನೆಗಳು ಸಿದ್ಧವಾಗಿವೆ. 53,625 ಮನೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ ಎಂದು ಕರ್ನಾಟಕದ ಕೈಗೆಟುಕುವ ದರದ ವಸತಿ ಮತ್ತು ನಗರ ಬಡತನ ನಿವಾರಣೆ (ಹೌಸಿಂಗ್ ಮತ್ತು ಅರ್ಬನ್ ಪವರ್ಟಿ ಅಲಿವಿಯೇಷನ್ (ಹುಪಾ) ಸಚಿವಾಲಯವು ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲ ಮತ್ತು ಮಧ್ಯಮ ವರ್ಗಗಳಿಗೆ 3.4 ಲಕ್ಷ ಮನೆಗಳನ್ನು ನಿರ್ಮಿಸುವ 1.075 ಯೋಜನೆಗಳನ್ನು ಕಳೆದ ಜೂನ್ ತಿಂಗಳಿನಲ್ಲಿ ಅನುಮೋದಿಸಿದ್ದು 30 ಜಿಲ್ಲೆಗಳ 271 ನಗರಗಳಲ್ಲಿ ಮನೆ ನಿರ್ಮಾಣಗೊಳ್ಳಲಿದೆ.

        ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿ.ಡಿ.ಎ) ಮತ್ತು ಕರ್ನಾಟಕ ಹೌಸಿಂಗ್ ಬೋರ್ಡ್ (ಕೆಎಚ್ ಬಿ) ಯಂತಹ ವಿವಿಧ ಗೃಹನಿರ್ಮಾಣ ಅಭಿವೃದ್ಧಿ ಪ್ರಾಧಿಕಾರಗಳ ಜೊತೆ ಖಾಸಗಿ ಕಟ್ಟಡ ತಯಾರಕರಿಂದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬೆಂಗಳೂರು ಮತ್ತು ತುಮಕೂರಿನಲ್ಲಿ ಖಾಸಗಿ ತಯಾರಕರು ಅಭಿವೃದ್ಧಿಪಡಿಸಿದ ಎರಡು ಮಾದರಿ ಕೈಗೆಟುಕುವ ವಸತಿ ಯೋಜನೆಗಳು ಪೂರ್ಣಗೊಳುತ್ತಿದೆ. ಫೆಲಿಸಿಟಿ ಅಡೋಬ್ ಎಲ್‍ಎಲ್‍ಪಿ ಪ್ರಧಾನಮಂತ್ರಿ ಆವಾಸ್ ಯೋಜನಾದಡಿ ಅನ್ನನಹಳ್ಳಿ ಕೈಗಾರಿಕಾ ಪ್ರದೇಶ, ವಸಂತ ನರಸಾಪುರ, ತುಮಕೂರಿನಲ್ಲಿ ಸ್ವರ್ಣ ಗೃಹದ ಮೊದಲ ಅಪಾರ್ಟ್ ಮೆಂಟ್ ಯೋಜನೆಯನ್ನುಅಭಿವೃದ್ಧಿಪಡಿಸುತ್ತಿದೆ. ಪ್ರಿ ಪ್ಯಾಬ್ರಿಕೇಶನ್ ತಂತ್ರಜ್ಞಾನವನ್ನು ಬಳಸಿ 268 ಘಟಕಗಳನ್ನು ನಿರ್ಮಿಸಲಾಗಿದೆ.

         ಕ್ರೆಡೈ ಬೆಂಗಳೂರಿನ ಉಪಾಧ್ಯಕ್ಷ ಸುರೇಶ್ ಹರಿ, “ಬೆಂಗಳೂರು ನಗರದಲ್ಲಿ ಅಂತರವನ್ನು ಕುಗ್ಗಿಸುವ ವಿಷಯಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ರಾಜ್ಯದಲ್ಲಿ ರಾಷ್ಟ್ರೀಯ ಯೋಜನೆಯ ಯಶಸ್ಸಿಗೆ ತ್ವರಿತ ಒಪ್ಪಿಗೆಗಳು ಮತ್ತು ಭೂಮಿ ಮತ್ತು ನಿರ್ಮಾಣ ಸಾಮಗ್ರಿಗಳ ಲಭ್ಯತೆ ಕಡಿಮೆ ವೆಚ್ಚದಲ್ಲಿ ದೊರೆಯುವುದು ಅತ್ಯಗತ್ಯವಾಗಿದೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link