ಬೆಂಗಳೂರು
ನೃತ್ಯ ಕಲಿಯಲು ಬಂದ ಯುವತಿಯ ಮೇಲೆ ಗೂಳಿಹಟ್ಟಿ ಚಿತ್ರದ ಸಹನಟ ಕರಣ್ ಮಹಾದೇವ್ ಅಲಿಯಾಸ್ ಮಂಜುನಾಥ್ ಅತ್ಯಾಚಾರ ನಡೆಸಿ ಬ್ಲಾಕ್‍ಮೇಲ್ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ.
ಡ್ಯಾನ್ಸ್ ಮಾಸ್ಟರ್ ಕೂಡ ಆಗಿದ್ದ ಮಂಜುನಾಥ್ ನೃತ್ಯ ಕಲಿಸುತ್ತೇನೆ ಎಂದು ಸ್ನೇಹ ಬೆಳೆಸಿ ಬಳಿಕ ಅತ್ಯಾಚಾರ ಎಸಗಿ ನನ್ನ ಜೊತೆ ವಿವಾಹ ನಿಶ್ಚಯವಾಗಿದ್ದ ಯುವಕನಿಗೆ ಸರಸ ಸಲ್ಲಾಪದ ದೃಶ್ಯಾವಳಿಯನ್ನು ಕಳುಹಿಸಿ ಮುದುವೆ ಮುರಿದಿದ್ದಾನೆ ಎಂದು ಸಂತ್ರಸ್ಥ ಯುವತಿ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿರುವ ಜ್ಞಾನಭಾರತಿ ಪೊಲೀಸರು ಪ್ರಕರಣ ದಾಖಲಿಸಿ ಮಂಜುನಾಥ್‍ನನ್ನು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ದೂರಿನ ವಿವರ: ಕರಣ್ ನನಗೆ ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದನು. ಬಳಿಕ ಮಾತನಾಡಬೇಕು ಎಂದು ಉಲ್ಲಾಳ ಉಪನಗರಕ್ಕೆ ಕರೆಸಿಕೊಂಡು ಮನೆಯ ಮೇಲಿನ ಸ್ಟುಡಿಯೋ ಇಟ್ಟುಗೊಂಡಿದ್ದೇನೆ. ನಿನಗೆ ಸಂಗೀತ ಹೇಳಿಕೊಡುತ್ತೇನೆ ಎಂದು ಹೇಳಿದ್ದ ಅವನ ಮಾತು ನಂಬಿ ನಾನು ಪ್ರತಿದಿನ ಸಂಗೀತ ಕಲಿಯಲು ಹೋಗುತ್ತಿದ್ದೆ. ಒಂದು ದಿನ ಸಲುಗೆಯಿಂದ ನನ್ನ ಹತ್ತಿರ ಬಂದು ಅಸಭ್ಯವಾಗಿ ನಡೆದುಕೊಂಡನು. ಆಗ ನಾನು ಈ ರೀತಿ ಮಾಡುವುದು ತಪ್ಪು ಎಂದು ಹೇಳಿದ್ದೆ. ಅದಕ್ಕೆ ನಿನ್ನ ಬಗ್ಗೆ ಅಪಪ್ರಚಾರ ಮಾಡುತ್ತೇನೆ, ನಿನ್ನ ತಂದೆ-ತಾಯಿಯನ್ನು ಬಿಡುವುದಿಲ್ಲ ಎಂದು ಬೆದರಿಸಿ ಅತ್ಯಾಚಾರ ಎಸಗಿದನು. ಬಳಿಕ ನಾನು ಆತನ ಸ್ಟುಡಿಯೋಗೆ ಹೋಗುವುದನ್ನು ನಿಲ್ಲಿಸಿದೆ.
ಅಷ್ಟೇ ಅಲ್ಲದೇ ಲೈಂಗಿಕ ಸಂಪರ್ಕ ಹೊಂದಿರುವುದನ್ನು ಪೆÇೀಷಕರಿಗೆ ಹೇಳುತ್ತೇನೆ ಎಂದು ಬೆದರಿಸಿ ಮತ್ತೆ ಕರೆಸಿಕೊಂಡು ಅತ್ಯಾಚಾರ ಎಸಗಿದನು. ಬಳಿಕ ನನಗೆ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿದ್ದರು. ಈ ಬಗ್ಗೆ ತಿಳಿದ ಕರಣ್, ನೀನು ಯಾರನ್ನೂ ಬೇಕಾದರೂ ಮದುವೆಯಾಗು ಆದರೆ ನಾನು ಕರೆದಾಗೆಲ್ಲಾ ಬಂದು ಲೈಂಗಿಕ ಕ್ರಿಯೆಗೆ ಸಹಕರಿಸಬೇಕು. ಇಲ್ಲವಾದರೆ ನೀನು ಮದುವೆಯಾಗುವ ಹುಡುಗ ಮತ್ತು ಆತನ ಮನೆಯವರಿಗೆ ಹೇಳುತ್ತೇನೆ ಎಂದು ಬೆದರಿಕೆ ಒಡ್ಡುವ ಮೂಲಕ ನನ್ನನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದನು.
ಮುರಿದುಬಿದ್ದ ವಿವಾಹ
ನಾನು ಗರ್ಭಿಣಿಯಾದೆ, ಬಳಿಕ ಅವನು ಮನೆಯ ಬಳಿ ಇರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಾವಿಬ್ಬರು ಗಂಡ-ಹೆಂಡತಿ, ನಮಗೆ ಇಷ್ಟುಬೇಗ ಮಗು ಬೇಡ ಎಂದು ಗರ್ಭಪಾತ ಮಾಡಿಸಿದನು. ಬಳಿಕ ನಾನು ಆತನ ಜೊತೆ ಹೋಗುವುದನ್ನು ನಿಲ್ಲಿಸಿದೆ.ಈ ವೇಳೆ ನೀನು ಬರದೆ ಇದ್ದರೂ ನಿನ್ನ ಬಾಳನ್ನು ಹಾಳು ಮಾಡುತ್ತೇನೆ ಎಂದು ಹೇಳಿ ನಿಶ್ಚಿತಾರ್ಥವಾಗಿದ್ದ ಹುಡುಗನಿಗೆ ನಾವಿಬ್ಬರೂ ಸಲಿಗೆಯಿಂದ ಇದ್ದ ವಿಡಿಯೋ, ಆಡಿಯೋವನ್ನು ತೋರಿಸಿದ್ದಾನೆ. ಅವರು ನಮ್ಮ ಮನೆ ಬಳಿ ಬಂದು ಗಲಾಟೆ ಮಾಡಿ ಮದುವೆಯನ್ನು ಮುರಿದುಕೊಂಡು ಹೋಗಿದ್ದಾರೆ. ಇದಕ್ಕೆಲ್ಲಾ ಕರಣ್ ಮಹಾದೇವ್ ಕಾರಣನಾಗಿದ್ದು, ಆತನ ವಿರುದ್ಧ ಸೂಕ್ತ ಕ್ರಮಕೊಳ್ಳಬೇಕು ಎಂದು ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
