Social Media ನಲ್ಲಿ ವೈರಲ್ ಆಯ್ತು ರಾಹುಲ್ ಗಾಂಧಿ Fake News!!!

ಬೆಂಗಳೂರು:

      ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂಯುಕ್ತ ಅರಬ್ ಸಂಯುಕ್ತ ಸಂಸ್ಥಾನಕ್ಕೆ (ಯುಎಇ) ಭೇಟಿ ನೀಡಿದ್ದಾಗ ದುಬೈ ನಗರದಾದ್ಯಂತರಾಹುಲ್ ಪೋಸ್ಟರ್‌ಗಳು ರಾರಾಜಿಸುತ್ತಿರುವ ಫೋಟೊಗಳನ್ನು ಕಾಂಗ್ರೆಸ್ ಬೆಂಬಲಿಗರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು. 

       ಇದೇ ರೀತಿಯ ಚಿತ್ರಗಳನ್ನು ಆಲ್ ಇಂಡಿಯಾ ಪ್ರೊಫೆಷನಲ್ಸ್ ಕಾಂಗ್ರೆಸ್ ಅಧ್ಯಕ್ಷೆ ರುಕ್ಶ್ಮನಿ ಕುಮಾರಿ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‍ನಲ್ಲಿಯೂ ಶೇರ್ ಮಾಡಲಾಗಿತ್ತು. Indian Overseas Congress UK ಟ್ವಿಟರ್ ಹ್ಯಾಂಡಲ್‍ನಲ್ಲಿಯೂ ಈ ಚಿತ್ರ ಶೇರ್ ಆಗಿತ್ತು.

 ಟ್ವಿಟರ್ ಮಾತ್ರವಲ್ಲದೆ ಫೇಸ್‍ಬುಕ್‍ನಲ್ಲಿಯೂ ಇಂಥದ್ದೇ ಚಿತ್ರ ಶೇರ್ ಆಗಿದೆ.

श्री राहुल गांधी जी का दुबई मे स्वागत के बेनर से पूरी दुबई सजी ..जय हो राहुल गांधी

K.P. Banna Badodiya यांनी वर पोस्ट केले बुधवार, ९ जानेवारी, २०१९

         Photofunia ಎಂಬ ಫೋಟೊ ಎಡಿಟಿಂಗ್ ವೆಬ್‍ಸೈಟ್‍/ ಆ್ಯಪ್ ನಲ್ಲಿ ಹಲವಾರು ಟೆಂಪ್ಲೇಟ್ಸ್ ಲಭ್ಯವಾಗಿದ್ದು. ಇದರಲ್ಲಿ ಫೋಟೊಗಳನ್ನು ಎಡಿಟ್ ಮಾಡಬಹುದಾಗಿದೆ. ಜಾಹೀರಾತು ಫಲಕದಲ್ಲಿ ರಾಹುಲ್ ಗಾಂಧಿ ಚಿತ್ರ ಇದೇ ರೀತಿ ಎಡಿಟ್ ಮಾಡಿದ್ದಾಗಿದೆ. ರಾಹುಲ್ ಗಾಂಧಿಯ ಚಿತ್ರಗಳನ್ನು ಎಡಿಟಿಂಗ್ ಸಾಫ್ಟ್‌ವೇರ್ ಬಳಸಿ ಮಾಡಲಾಗಿದೆ ಎಂದು ಬೂಮ್‌ಲೈವ್ fact check ನಡೆಸಿ, ವರದಿ ಮಾಡಿದೆ  

 

 

       Photofunia ಬಳಸಿ ಈ ರೀತಿ ಚಿತ್ರಗಳನ್ನು ಎಡಿಟ್ ಮಾಡಬಹುದು.

 
 

Recent Articles

spot_img

Related Stories

Share via
Copy link