ಕೊಟ್ಟೂರು 
ಪರಿಸರ ರಕ್ಷಣೆ ನಮ್ಮೆಲ್ಲಲಾರ ಹೊಣೆ, ಅ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಚ್ಚತೆಗಾಗಿ ಶ್ರಮಿಸಬೇಕಿದೆ ಎಂದು ವಲಯ ಮೇಲ್ವಿಚಾರಕ ನಾಗಯ್ಯ ಹಿರೇಮಠ್ ಹೇಳಿದರು
ತಾಲ್ಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಭಾನುವರ ಶ್ರೀ ಧರ್ಮಸ್ಥಳ ಗ್ರಾಮಿಣಾಭೀವೃದ್ದಿ ಸಂಸ್ತೆಯ ವತಿಯಿಂದ ‘ಶ್ರದ್ದಾ ಕೇಂದ್ರ’ ಯೋಜನೆಯಡಿ ಕಲ್ಲೇಶ್ವರ ಹಾಗೂ ಮಾರಮ್ಮ ದೇವಸ್ಥಾನಗಳನ್ನು ಸ್ವಚ್ಚಗೊಳಿಸಿ ಮಾತನಾಡಿದರು.
ಸ್ವಚ್ಚೆತೆಯ ಕಡೆ ಪ್ರತಿಯೊಬ್ಬರು ಹೆಚ್ಚು ಗಮನ ಹರಿಸಬೇಕಿದೆ, ಸ್ಚಚ್ಚತೆಯಿಂದ ಸುಂದರ ಸಮಾಜ ಕಟ್ಟುವ ಕಡೆ ನಮ್ಮ ನಡೆ ಆಗಬೇಕಿದೆ, ಮೊದಲು ನಮ್ಮ ಮನೆಗಳಿಂದಲೆ ಸ್ವಚ್ಚತೆ ಆರಂಭವಾಗ ಬೇಕು ಆಗಾದಾಗ ಮಾತ್ರ ಪರಿಸರ ಸ್ನೇಹಿ ಗ್ರಾಮ ನಿರ್ಮಾಣ ಸಾಧ್ಯ ಎಂದರು.
ಸೇವಾ ಪ್ರತಿನಿಧಿ ತಿಪ್ಪಮ್ಮ ಮಾತನಾಡಿ, ಕೆವಲ ಸ್ವಚ್ಚತೆ ಅಷ್ಠೆ ಅಲ್ಲದೆ, ಮರ ಗಿಡಗಳನ್ನು ಬೆಳೆಸುವ ಜತೆಗೆ ಸುಂದರ ಪರಿಸರ ನಿರ್ಮಾಣ ಮಾಡಬೇಕಿದೆ. ಪ್ರತಿ ಮನೆಯ ಮುಂದೆ ಮರ ಬೆಳಸಿ, ಮನೆಗೊಂದು ಮರ ಮರ ಊರಿಗೊಂದ ವನ ಎಂಬ ನಿಯುಕ್ತಿಯ ಅಶಯ ಪೂರ್ಣಗೋಳಿಸಬೇಕು ಎಂದರು ಒಕ್ಕೂಟದ ಅಧ್ಯಕ್ಷೆ ವಿಶಲಾಕ್ಷಿ, ಸಂಘ ಸಂಸ್ಥೆಗಳ ಸದಸ್ಯರು ಹಾಗೂ ದೇವಸ್ಥಾನದ ಜೀರ್ಣೊಧಾರ ಸಮಿತಿಯ ಸದಸ್ಯರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








