ಮಡುಗಟ್ಟಿದ ಸ್ನೇಹ ದಿನಾಚರಣೆಯ ಸಂಭ್ರಮ

ಹಾನಗಲ್ಲ

      ತಾಲ್ಲೂಕಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಸಂಭ್ರಮದ ೧೯ನೆಯ ವರ್ಷಿಕ ಸ್ನೇಹ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

        ಮಾಜಿ ಲೋಕೋಪಯೋಗಿ ಮಂತ್ರಿಗಳು ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ. ಸಿ. ಎಮ್. ಉದಾಸಿಯವರು ದೀಪ ಪ್ರಜ್ವಲಿಸುವುದರ ಮೂಲಕ ಸ್ನೇಹ ದಿನಾಚರಣೆಯನ್ನು ಉದ್ಘಾಟಿಸಿದರು.

        ನಮ್ಮ ಹಾವೇರಿ ಜಿಲ್ಲೆಯ ನೆಮ್ಮೆಯ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಅನೇಕ ಉನ್ನತ ಹುದ್ದೆಗಳಲ್ಲಿ ತಮ್ಮ ಅಮೂಲ್ಯವಾದ ಕೆಲಸಗಳನ್ನು ಸಮಾಜಕ್ಕೆ ಸಲ್ಲಿಸುತ್ತಿದ್ದಾರೆ. ನೀವೆಲ್ಲರೂ ಕೂಡಾ ಉತ್ತಮ ವಿದ್ಯಾರ್ಥಿಗಳಾಗಿ ನಾಡಿನ ಸೇವೆ ಮಾಡಬೇಕೆಂದರು.

        ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳ ಅಧ್ಯಾಪಕರ ಕ್ರೀಡಾ ಮತ್ತು ಶೈಕ್ಷಣೀಕ ಕ್ಷೇತ್ರದಲ್ಲಿಯ ಸಾಧನೆಯನ್ನು ಮುಕ್ತವಾಗಿ ಪ್ರಶಂಸಿದರು. ಹಾಗೂ ಪದವೀದರ ಕ್ಷೇತ್ರದ ಎಮ್.ಎಲ್.ಸಿ. ಗಳಾದ ಶ್ರೀ. ಸಂಕನೂರವರು ವಿದ್ಯಾಲಯದ ಅಟಲ್ ಥಿಂಕರಿಂಗ್ ಲ್ಯಾಬ್ ಗಾಗಿ ನೀಡಿದ ೨ ಲಕ್ಷ ರೂಪಾಯಿಗಳ ಧನ ಸಹಾಯವನ್ನು ಪಾಲಕರಾದ ಶ್ರೀ. ಕುಮಾರಣ್ಣವರು ವಿದ್ಯಾಲಯದ ಪ್ರಾಚಾರ್ಯರಿಗೆ ಶಾಸಕರ ಮೂಲಕ ಹಸ್ತಾಂತರಿಸಿದರು.

         ೮ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಕುಮಾರ ಸುಮಂತ ಎಮ್.ಕೆ. ಬರೆದ “”ಕಲಾಪ್ರಿಯ”” ಕವನ ಸಂಕಲನವನ್ನು ಹಾಗೂ ಕುಮಾರ ಪ್ರಜ್ವಲ ಪಿ.ಬಿ. ಬರೆದ “”ಮಿಡಿದ ಹೃದಯಗಳು”” ಕವನ ಸಂಕಲನ ಬಿಡುಗಡೆ ಮಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಕೊಂಡಾಡಿದರು. ಹಾಗೂ ಒವರ್ ಆಲ್ ಚಾಂಪಿಯನ್ ಹೌಸ್ ನೀಲಗಿರಿ ಸದನಕ್ಕೆ ಶೀಲ್ಡ್ ವಿತರಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಭರತನಾಟ್ಯ, ಕೂಚಿಪುಡಿ, ವೈವಿದ್ಯಮಯವಾದ ಜನಪದ ನೃತ್ಯಗಳು ನಾಟಕಗಳಿಂದ ನೆರೆದ ಹಾವೇರಿ ಜಿಲ್ಲೆಯ ಸಮಸ್ತ ಪಾಲಕ ಪೋಷಕರನ್ನು ರಂಜಿಸಿದರು.

         ಕಾರ್ಯಕ್ರಮದಲ್ಲಿ ವಿದ್ಯಾಲಯದ ಪ್ರಾಚಾರ್ಯರಾದ ಶ್ರೀ. ಕೆ. ರಾಮಿ ರೆಡ್ಡಿ ವರದಿ ವಾಚನ ಮಾಡಿದರು. ಉಪಪ್ರಾಚಾರ್ಯರಾದ ಶ್ರೀ. ಎಮ್. ಚೆಲ್ಲಪ್ಪ ಸ್ವಾಗತಿಸಿದರು. ಶ್ರೀ. ಸಿ. ಜಿ. ಚಲ್ಲಾಳ ವಂದಿಸಿದರು. ಶ್ರೀ. ಸಾಬು ಜೊಸ್, ಆರ್.ಬಿ. ಗೋಟೆ, ಅಜಯ ಸುರೇಶ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ಗಣಪತಿ, ರಣದೇವಿ, ದೇಶಪಾಂಡೆ, ಖಾನ್, ವಿಜಯ್, ಮಲ್ಲಪ್ಪ, ರಾಜೇಂದ್ರ ಹಾಗೂ ಶ್ರೀಮತಿಯರಾದ ಸಲ್ಮಾ, ಮಾಯಾ, ಅಂಬು, ವಿಜಯಲಕ್ಷ್ಮಿ, ಶೋಭಾ, ಸ್ವಪ್ನಾ, ಮುನೀಶ್ವರ, ಇಮ್ಯಾನುವಲ್, ಅನೂಜ ಮತ್ತು ಸೋನು ಸಿ೦ಗ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link