ಬಳ್ಳಾರಿ
ಬಳ್ಳಾರಿ ಲೋಕಸಭಾ ಸದಸ್ಯರ ಕಚೇರಿಯನ್ನು ಸಂಸದ ವಿ.ಎಸ್.ಉಗ್ರಪ್ಪ ಅವರು ಸೋಮವಾರರಂದು ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದಲ್ಲಿರುವ ಜನಸ್ಪಂದನ ಕೇಂದ್ರದಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಭಾಗದ ಜನರ ಸೇವೆಗಾಗಿ ಈ ಕಚೇರಿ ತೆರೆಯಲಾಗಿದೆ. ಸರ್ಕಾರ ಮತ್ತು ಜನತೆಯ ಸೇತುವೆಯಾಗಿ ಕೆಲಸ ಮಾಡುವುದಕ್ಕೆ ಒಂದು ಕೇಂದ್ರ ಬಿಂದುವಂತೆ ಇಂದಿನಿಂದಲೇ ಕಾರ್ಯ ಪ್ರಾರಂಭಿಸುತ್ತೇನೆ. ಬಡತನ, ನಿರುದ್ಯೋಗ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಭಾಗದಲ್ಲಿ ಅನೇಕ ನೈಸರ್ಗಿಕ ಖನಿಜ ಸಂಪತ್ತು ಇದೆ. ಇದರ ಸದ್ಬಳಕೆಯನ್ನು ಕಾನೂನು ರೀತ್ಯ ಉಪಯೋಗಿಸಿದಲ್ಲಿ ಅಭಿವೃದ್ಧಿ ಮಾಡಬಹುದು ಎಂದರು. ಜಿಲ್ಲೆಯಲ್ಲಿ ಅಪೆರಲ್ ಪಾರ್ಕ್ ಮಾಡುವುದರ ಮೂಲಕ ಅಭಿವೃದ್ಧಿಗೆ ಒತ್ತು ನೀಡುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲು ಶ್ರಮಿಸುತ್ತೇನೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜನರ ಸಮಸ್ಯೆಗಳನ್ನು ಅಹವಾಲು ಸ್ವೀಕರಿಸಲು ಸಂಸದರ ಕಚೇರಿ ತೆರೆಯಲಾಗಿದೆ. ಈ ಕಚೇರಿ ಸುಗಮವಾಗಿ ತನ್ನ ಕೆಲಸ ಕಾರ್ಯಗಳನ್ನು ನಡೆಸಲು ಎಲ್ಲರೂ ಸಹಕಾರ ಹಾಗೂ ಬೆಂಬಲ ನೀಡಬೇಕು ಹಾಗೂ ಸಾರ್ವಜನಿಕರು ತಮ್ಮ ಕುಂದು ಕೊರೆತೆಗಳನ್ನು ಈ ಕಚೇರಿಗೆ ಭೇಟಿ ನೀಡಿ ಸಲ್ಲಿಸಬಹುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ