ಹಾಸ್ಟೇಲ್‍ಗಳಲ್ಲಿ ಮಕ್ಕಳಿಗೆ ಗೌರವದಿಂದ ಕಾಣಬೇಕು

ಚಿತ್ರದುರ್ಗ

          ಮನೆಯಲ್ಲಿನ ಸಮಸ್ಯೆಯಿಂದ ಸರ್ಕಾರದ ವಸತಿ ನಿಲಯಕ್ಕೆ ವಿದ್ಯಾಭ್ಯಾಸಕ್ಕಾಗಿ ಬಂದಿರುವ ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ನೋಡಿಕೊಂಡು ಆವರಿಗೆ ಮನೆಯ ವಾತಾವರಣವನ್ನು ನಿರ್ಮಾಣ ಮಾಡುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ರೂಪಾನಾಯ್ಕ್ ಕೆ.ಬಿ. ಕರೆ ನೀಡಿದ್ದಾರೆ.

          ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಂಯುಕ್ತಾಶ್ರಯದಲ್ಲಿ ಜಿ.ಪಂ. ಸಭಾಂಗಣದಲ್ಲಿ ವಸತಿ ನಿಲಯಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ರಕ್ಷಣಾ ನೀತಿಗೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

        ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಈ ರೀತಿಯಾದ ವಸತಿ ನಿಲಯಗಳನ್ನು ನಿರ್ಮಾಣ ಮಾಡಿ ವಿದ್ಯಾಭ್ಯಾಸವನ್ನು ನೀಡುತ್ತಿದೆ, ಇಲ್ಲಿ ಕೆಲಸ ಮಾಡುವವರು ಅಲ್ಲಿಗೆ ಬರುವ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ಅವರಿಗೆ ಬೇಕಾದ ಸೌಲಭ್ಯವನ್ನು ನೀಡುವುದರ ಮೂಲಕ ಅವರ ಪ್ರಗತಿಗೆ ನೆರವಾಗಬೇಕಿದೆ, ಇದಕ್ಕೆ ಬೇಕಾದ ಸೌಲಭ್ಯವನ್ನು ಸಹಾ ಸರ್ಕಾರ ನೀಡುತ್ತಿದೆ ಆದರ ಉಪಯೋಗವಾಗಬೇಕಿದೆ ಎಂದು ತಿಳಿಸಿದರು.

         ನಾನು ಇತ್ತಿಚೇಗೆ ವಸತಿ ನಿಲಯಯೊಂದಕ್ಕೆ ಭೇಟಿ ನೀಡಿದಾಗ ಅಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿತ್ತು, ಅದಕ್ಕೆ ತಕ್ಕಂತೆ ಆಹಾರದ ವಸ್ತು ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಸಹಾ ನೀಡಲಾಗಿತ್ತು, ಆದರೆ ವಾಸ್ತವಾಗಿ ಅಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು ಹೆಚ್ಚಾಗಿದೆ ಎಂದು ಸರ್ಕಾರದ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಇದರ ಬಗ್ಗೆ ದೂರು ಸಹಾ ನೀಡಲಾಗಿತ್ತು ಆದರೆ ಇದುವರೆವಿಗೂ ಏನಾಯಿತೂ ಗೊತ್ತಿಲ್ಲ ಇದರ ಬಗ್ಗೆ ಗಮನ ನೀಡುವುದರ ಮೂಲಕ ಪರೀಶಿಲನೆಯನ್ನು ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ಕೊಡಿಸುವ ಕೆಲಸವನ್ನು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ರೂಪಾನಾಯ್ಕ್ ನೀಡಿದರು.

          ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ವಸತಿ ನಿಲಯಗಳ ಮೇಲೆ ನಿಗಾವನ್ನು ಇರಿಸುವುದರ ಮೂಲಕ ಗಮನಹರಿಸುತ್ತಿದೆ, ಇತ್ತಿಚೇಗೆ ನ್ಯಾಯಾಧೀಶರು ಸಹಾ ವಸತಿ ನಿಲಯಗಳಲ್ಲಿ ಸರಿಯಾದ ರೀತಿಯಲ್ಲಿ ಸೌಕರ್ಯ ಸಿಗುತ್ತಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ, ಆದ್ದರಿಂದ ಇಲ್ಲಿ ಕೆಲಸ ಮಾಡುವವರು ಸರಿಯಾದ ರೀತಿಯಲ್ಲಿ ತಮ್ಮ ಮನೆ ತಮ್ಮ ಮಕ್ಕಳನ್ನು ನೋಡಿಕೊಳ್ಲುವ ರೀತಿಯಲ್ಲಿ ಕೆಲಸವನ್ನು ಮಾಡುವುದರ ಮೂಲಕ ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳಿ, ಕೆಲವೊಂದು ಮಕ್ಕಳು ಹಠ ಮಾಡುತ್ತಾರೆ

         ಅವರಿಗೆ ಸರಿಯಾದ ರೀತಿಯಲ್ಲಿ ನೋಡಿಕೊಂಡು ಅವರು ಎಲ್ಲರಂತೆ ಆಗುವಂತೆ ಮಾಡುವಲ್ಲಿ ನಿಮ್ಮಗಳ ಪಾತ್ರ ಅಗತ್ಯವಾಗಿದೆ ಇಲ್ಲವಾದಲ್ಲಿ ಮುಂದೆ ಆಗ ಬೇರೆ ಕೆಲಸಗಳಿಗೆ ತೊಡಗಿ ಸಮಾಜಕ್ಕೆ ಕಂಟಕನಾಗುತ್ತಾನೆ ಇದಕ್ಕೆ ಅವಕಾಶ ನೀಡಬಾರದೆಂದು ತಿಳಿಸಿದರು.
ಇಂದಿನ ದಿನಮಾನದಲ್ಲಿ ಸರ್ಕಾರಿಯ ಶಾಲೆಯ ಸೂಚ್ಯಂಕ ಅತಿ ಕಡಿಮೆ ಇದ್ದು ಖಾಸಗಿ ಶಾಲೆಗಳನ್ನು ಸೇರುವವರು ಸಂಖ್ಯೆ ಹೆಚ್ಚಾಗಿದೆ, ಇದರ ಬಗ್ಗೆಯೂ ಸಹಾ ಆಲೋಚನೆ ಮಾಡಬೇಕಿದೆ, ಸರ್ಕಾರದಿಂದ ಉಚಿತವಾಗಿ ಸೌಲಭ್ಯ ನೀಡಿದರು ಸಹಾ ಬಾರದಿರುವ ಮಕ್ಕಳು ಮತ್ತು ಪೋಷಕರು ಲಕ್ಷಗಟ್ಟಲೆ ಹಣವನ್ನು ನೀಡಿ ಖಾಸಗಿಯಾಗಿ ಸೇರುತ್ತಿದ್ದಾರೆ, ಇದೇ ರೀತಿ ಬೆಳವಣಿಗೆಯಾದರೆ ಕಷ್ಟವಾಗುತ್ತದೆ ಎಂದು ಹೇಳಿ, ರಾಜ್ಯದಲ್ಲಿ ಶೇ.72 ರಷ್ಟು 5ನೇ ತರಗತಿಯ ಮಕ್ಕಳಿಗೆ ಭಾಗಕಾರ ಬರುತ್ತಿಲ್ಲ, ಹಾಗೇಯೇ ಶೇ.57.10 ರಷ್ಟು 3ನೇ ತರಗತಿಯ ಮಕ್ಕಳಿಗೆ ಗುಣಕಾರ ಬರುತ್ತಿಲ್ಲ ಎಂದು ಬೇಸರದಿಂದ ನುಡಿದರು.

           ಜಿಲ್ಲಾ ರಕ್ಷಣಾಧಿಕಾರಿ ಡಾ: ಅರುಣ್ ಕೆ ನಾವು ಸಹಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡುವುದರ ಮೂಲಕ ಮಕ್ಕಳಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಕಾನೂನಿನ ಬಗ್ಗೆ ಅರಿವನ್ನು ಮೊಡಿಸಲಾಗುತ್ತಿದೆ, ಈಗ ವಸತಿ ನಿಲಯಗಳಲ್ಲಿಯೂ ಸಹಾ ಮುಂದಿನ ದಿನಗಳಲ್ಲಿ ಭೇಟಿ ನೀಡುವುದರ ಮೂಲಕ ಆಲ್ಲಿಯೂ ಸಹಾ ಜಾಗೃತಿಯನ್ನು ಮೂಡಿಸಲಾಗುತ್ತದೆ ಎಂದರು.

          ಮಕ್ಕಳಿಗೆ ಉತ್ತಮವಾದ ಶಿಕ್ಷಣ ಸಿಕ್ಕಲ್ಲಿ ಅವರು ಉತ್ತಮವಾದ ಪ್ರಜೆಗಳಾಗುತ್ತಾರೆ ಇಲ್ಲವಾದಲ್ಲಿ ಕೆಟ್ಟ ದಾರಿಯನ್ನು ಚಿಕ್ಕ ವಯಸ್ಸಿನಲ್ಲಿಯೇ ಹಿಡಿದರೆ ದೇಶ ದ್ರೋಹಿಗಳಾಗುತ್ತಾರೆ ಈ ರೀತಿ ಆಗದಂತೆ ಎಚ್ಚರವಹಿಸಿ ಕೆಲಸ ಮಾಡಿ ಎಂದು ಕರೆ ನೀಡಿದರು.

         ಚಿತ್ರದುರ್ಗ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ: ಪ್ರಭಾಕರ್ ಆರ್. ಮಾತನಾಡಿ ಇತ್ತಿಚಿನ ದಿನಮಾನದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದೆ ಇದರ ನಿರ್ಮೂಲನೆ ಎಲ್ಲರ ಸಹಾಯ ಮತ್ತು ಸಹಕಾರ ಅಗತ್ಯವಾಗಿದೆ, ಇದೇ ರೀತಿ ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿಲ್ಲ ಇದರ ಬಗ್ಗೆಯೂ ಸಹಾ ಸಂಬಂಧಪಟಟ್ ಲಾಖೆಯ ಅಧಿಕಾರಿಗಳು ಗಮನ ನೀಡಬೇಕಿದೆ ಎಂದರು.

          ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಉದ್ಘಾಟಿಸಿದರು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ ಅಧ್ಯಕ್ಷತೆ ವಹಿಸಿದ್ದರು ಸಂಪನ್ಮೂಲ ವ್ಯಕ್ತಿಯಾಗಿ ಕೊಪ್ಪಳದ ಯುನಿಸೆಫ್‍ನ ಪ್ರಾದೇಶಿಕ ಸಂಯೋಜಕ ರಾಘವೇಂದ್ರ ಭಟ್ ಕೆ ಪಾಲ್ಗೊಂಡಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಜಾನಾಯ್ಕ್ ಸ್ವಾಗತಿಸಿದರೆ ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯ ಅಧಿಕಾರಿ ವೈಶಾಲಿ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link