ಸಿದ್ಧರಾಮೇಶ್ವರರ 846 ನೇ ಜಯಂತ್ಯೋತ್ಸವ

ಹಾನಗಲ್ಲ :

          ಶಿವಯೋಗಿ ಸಿದ್ಧರಾಮೇಶ್ವರರು ಸಮಾಜಮುಖಿ ಚಿಂತನೆಗಳ ಮೂಲಕ ಜನಜಾಗೃತಿಯ ಮಹಾಪರ್ವವನ್ನೇ ನಡೆಸಿ ತಮ್ಮ ತತ್ವ ಸಂದೇಶಗಳನ್ನು ಜಗಕ್ಕೆ ನೀಡಿದ್ದಾರೆ ಎಂದು ಶಾಸಕ ಸಿ.ಎಂ.ಉದಾಸಿ ನುಡಿದರು.

           ಶುಕ್ರವಾರ ಹಾನಗಲ್ಲಿನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ, ಪುರಸಭೆ, ಭೋವಿವಡ್ಡರ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರರ 846 ನೇ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ವೈಚಾರಿಕ ಚಿಂತನೆಯನ್ನು ಮೂಡಿಸುವ ಮಹಾನ್‍ವ್ಯಕ್ತಿಗಳು ಬೇಕಾಗಿದ್ದಾರೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಲು ಸಮುದಾಯಗಳ ಮುಂದಾಗಬೇಕು.

           ವಿದ್ಯಾವಂತರಾಗಿ ದೇಶ ಸಮಾಜಕ್ಕಾಗಿ ಮೌಲ್ಯಯುತ ಜೀವನ ನಡೆಸುವ ಸತ್ಪ್ರಜೆಗಳು ಹೊರಹೊಮ್ಮಬೇಕಾಗಿದೆ. ಶಿವಯೋಗಿ ಸಿದ್ಧರಾಮೇಶ್ವರರ ಆದರ್ಶಗಳು ಸಮಾಜದ ಪ್ರತಿಯೊಬ್ಬನನ್ನು ತಲುಪಿ ಅವರ ಆದರ್ಶಗಳ ಜಾಗೃತಿ ಮೂಡಿಸಬೇಕಾಗಿದೆ. ಸಿದ್ಧರಾಮೇಶ್ವರರ ಚರಿತ್ರೆ ಇಂದಿನ ಯುವಪೀಳಿಗೆಗೆ ಮುಟ್ಟಬೇಕಾಗಿದೆ ಎಂದರು.

           ತಾಲೂಕು ತಹಶೀಲ್ದಾರ ಎಂ.ಗಂಗಪ್ಪ ಮಾತನಾಡಿ, ಎಲ್ಲ ಸಮುದಾಯಗಳು ಒಳ್ಳೆಯ ಸಂಘಟನೆಯಾಗಲಿ. ಆ ಮೂಲಕ ಸಮಾಜಕ್ಕೆ ಒಳಿತನ್ನು ನೀಡುವಂತಾಗಲಿ. ಮಹಾತ್ಮರನ್ನು ಅವರ ದಿನಾಚರಣೆಯ ಒಂದು ದಿನಕ್ಕೆ ಸೀಮಿತಗೊಳಿಸದೆ ನಿರಂತರವಾಗಿ ಅವರ ಚಿಂತನೆಗಳು ಸಮಾಜದಲ್ಲಿ ಒಳ್ಳೆಯ ವಿಚಾರಗಳನ್ನು ಬಿತ್ತುವಂತಾಗಲಿ. ವಿದ್ಯಾರ್ಥಿ ಯುವಕರಿಗೆ ಸಿದ್ಧರಾಮೇಶ್ವರರ ಚಿಂತನೆಗಳು ತಲುಪಬೇಕು ಎಂದರು.

          ಎಪಿಎಂಸಿ ಅಧ್ಯಕ್ಷ ಶೇಕಪ್ಪ ಮಹರಾಜಪೇಟ, ಸದಸ್ಯ ಭೋವಿವಡ್ಡರ ಸಮಾಜದ ತಾಲೂಕು ಅಧ್ಯಕ್ಷ ನಿಂಗಪ್ಪ ಹೊಸೂರ, ಉಪಾದ್ಯಕ್ಷ ರಾಮಣ್ಣ ಕರೆಕ್ಯಾತನಹಳ್ಳಿ, ಕಾರ್ಯದರ್ಶಿ ನಾಗರಾಜ ಗಾಜೀಪೂರ, ಜಗದೀಶ ಗಂಟನವರ, ಶಿವಲಿಂಗಪ್ಪ ತಲ್ಲೂರ, ಹನುಮಂತಪ್ಪ ಯಳ್ಳೂರ, ಸಂಗಮೇಶ ಹಕ್ಲಪ್ಪನವರ, ಬಿ.ಎಂ.ಬೇವಿನಮರದ ಅತಿಥಿಗಳಾಗಿದ್ದರು. ಚಿಕ್ಕಾಂಶಿ ಹೊಸೂರಿನ ಉಪನ್ಯಾಸಕ ಡಿ.ರಾಮಪ್ಪ ಉಪನ್ಯಾಸ ನೀಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link