ಕೊಟ್ಟೂರು
ಸಂಸ್ಕಾರ ಮತ್ತು ಸಂಸ್ಕತಿಯನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪಗೊಳ್ಳಬೇಕು ಎಂದು ಉಪನ್ಯಾಸಕ ಪರುಶುರಾಮ್ ದೊಡ್ಮನಿ ಹೇಳಿದರು.
ಪಟ್ಟಣದ ಗೊರ್ಲಿಶರಣಪ್ಪ ಸರಕಾರಿ ಪದವಿ ಪೂರ್ವ ಕಾಲೇಜ್‍ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ನೀವು ಚಿಕ್ಕ ಮಕ್ಕಳೂ ಅಲ್ಲ, ತೀರ ದೊಡ್ಡವರೂ ಅಲ್ಲ. ನಿಮ್ಮ ಬದುಕಿನಲ್ಲಿ ಇದು ಬದಲಾವಣೆ ಕಾಲ. ವ್ಯಾಸಂಗದ ಕಡೆ ಹೆಚ್ಚು ಗಮನಹರಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕೇವಲ ಒಬ್ಬ ವಿದ್ಯಾರ್ಥಿಗಳಿಂದ ಆರಂಭವಾದ ಈ ಕಾಲೇಜ್ ಕೇಲವೇ ವರ್ಷಗಳಲ್ಲಿ 800 ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದಕ್ಕೆ ಇಲ್ಲಿನ ಉತ್ತಮ ಗುಣಮಟ್ಟದ ಶಿಕ್ಷಣವೇ ಕಾರಣ ಎಂದರು.
ಮತ್ತೊಬ್ಬ ಉಪನ್ಯಾಸಕ ಗೋವಿಂದಪ್ಪ, ನಿಮಗೆ ನಿಮ್ಮ ಶಿಕ್ಷಕರು, ತಂದೆ ತಾಯಿಗಳು ಆದರ್ಶವಾಗಬೇಕೆ ಹೊರತು. ಥಳಕು ಬಳುಕಿನ ಸಿನಿಮಾನಟರಲ್ಲ ಎಂದು ಹೇಳಿದರು.ನಿಮ್ಮ ತಂದೆ ತಾಯಿ, ನಮ್ಮ ಮಕ್ಕಳು ಚನ್ನಾಗಿ ಓದಲಿ, ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಲಿ ಎಂದು ಆಸೆ ಕನಸುಹೊತ್ತು ಕಾಲೇಜ್‍ಗೆ ಕಳುಹಿಸುತ್ತಾರೆ. ಅವರ ಆಸೆಯನ್ನು ಈಡೇರಿಸದಿದ್ದರೆ ಹೆತ್ತವರಿಗೆ ಮೋಸ ಮಾಡಿದಂತ್ತಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ಕಾಲೇಜ್‍ನ ಪ್ರಗತಿ ವರದಿವಾಚನ ಮಾಡಿದ ಉಪನ್ಯಾಸಕ ಮುನೇಗೌಡ, ಕಳೆದ ಅಲ್ಪ ಅಂಕೆಗಳ ಅಂತರದಿಂದ ನಮ್ಮ ಕಾಲೇಜ್‍ಗೆ ರ್ಯಾಂಕ್ ತಪ್ಪಿತು. ಈ ಸಾರಿ ನಮ್ಮ ವಿದ್ಯಾರ್ಥಿಗಳು ರ್ಯಾಂಕ್ ಬಂದೇ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಪ್ರಾಚಾರ್ಯರರಾದ ಶ್ರೀಮತಿ ಕೊತ್ಲಮ್ಮ ಮಾತನಾಡಿದರು.ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕಾಲೇಜ್‍ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಯಿತು.ವೇದಿಕೆಯಲ್ಲಿ ಉಪನ್ಯಾಸಕರಾದ ಕೆ.ಎಂ. ರೇಣುಕಾಸ್ವಾಮಿ, ಚಿತ್ರರಂಜನ್, ವಿಜಯಲಕ್ಷ್ಮಿ, ಮಂಜುನಾಥ್, ಜೆಸಿಐ ಅಧ್ಯಕ್ಷ ಗುರುಬಸವರಾಜ್ ಅರಮನಿ, ಕವಿ ವಾಸಪ್ಪ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ