ಮಧುಗಿರಿ :
ಪಟ್ಟಣದ ರಾಮೆಗೌಡನ ಗಲ್ಲಿಯ ಮನೆಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಮನೆಯ ಸಾಮಗ್ರಿಗಳು ಹಾಗೂ ನಗದು 50 ಸಾವಿರ ಹಣ ಹಾಗೂ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಅಂಗನವಾಡಿ ಕಾರ್ಯಕರ್ತೆ ಕಾಮಾಕ್ಷಿ ಎಂಬುವವರ ಮನೆಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಮಂಚ, ಬೀರು, ಬಟ್ಟೆ, ಫ್ರ್ರಿಡ್ಜ್, ದಿನಸಿ ವಸ್ತುಗಳು, ಮನೆಯ ಕಿಟಕಿಗಳು ಸೇರಿದಂತೆ ಅನೇಕ ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಈ ಮನೆಯ ಆವರಣದಲ್ಲಿ ಭಾನುವಾರ ತಾನೇ ಬಟ್ಟೆಯನ್ನು ಸುಟ್ಟಿದ್ದು ಆಗಾಗ್ಗೆ ಕಿಡಿಗೇಡಿಗಳು ಮಾಟ ಮಂತ್ರ ಮಾಡಿಸುವುದು ಸಾಮಾನ್ಯವಾಗಿತ್ತು. ಈ ಬಗ್ಗೆ ಕಾಮಾಕ್ಷಿ ತಮ್ಮ ಅಳಲು ತೋಡಿಕೊಂಡರು. ಮಧುಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
