ನಕಲಿ ಆಧಾರ್ ಕಾರ್ಡ್ ತೋರಿಸಿ ಮಕ್ಕಳ ಸಾಗಾಟ

ರಾಜ್ಯ:

 ಈ ವರ್ಷ 244 ಮಕ್ಕಳ ರಕ್ಷಣೆ

ಮಾನವ ಕಳ್ಳಸಾಗಣೆದಾರರು  ಆಧಾರ್ ಕಾರ್ಡ್‌ನಲ್ಲಿನವಿವರಗಳನ್ನು ತಿರುಚಿ ಕೆಲಸಕ್ಕಾಗಿ ಅಪ್ರಾಪ್ತರನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿಯೇ ಈ ವರ್ಷ 244 ಪ್ರಕರಣಗಳನ್ನು ಸರ್ಕಾರಿ ರೈಲ್ವೆ ಪೊಲೀಸರು  ಪತ್ತೆ ಮಾಡಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ, ಜಿಆರ್‌ಪಿ, ಡಿ.ಆರ್. ಸಿರಿ ಗೌರಿ, ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸಿ, ಅದಕ್ಕೆ ಲ್ಯಾಮಿನೇಷನ್ ಮಾಡಿ ಮಕ್ಕಳ ಕೈಗೆ ನೀಡಲಾಗುತ್ತಿದೆ. 15 ರಿಂದ 16 ವರ್ಷದೊಳಗಿನ ಮಕ್ಕಳ ವಯಸ್ಸು ನಕಲಿ ಆಧಾರ್ ಕಾರ್ಡ್ ನಲ್ಲಿ 20 ವರ್ಷ ಎಂದು ನಮೂದಿಸಲಾಗಿರುತ್ತದೆ.

ಮೂಲ ಆಧಾರ್ ಕಾರ್ಡ್‌ಗಳಲ್ಲಿನ ವಯಸ್ಸಿನ ವಿವರಗಳನ್ನು ತಿದ್ದುಪಡಿ ಮಕ್ಕಳನ್ನು ರೈಲುಗಳ ಮೂಲಕ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಆಧಾರ್ ಕಾರ್ಡ್ ನಲ್ಲಿ ಎಲ್ಲ ಮಕ್ಕಳ ವಯಸ್ಸು 18 ವರ್ಷಕ್ಕಿಂತ ಹೆಚ್ಚು ಎಂದು ತೋರಿಸಲಾಗುತ್ತಿದೆ. ಮಕ್ಕಳನ್ನು ಪ್ರತ್ಯೇಕವಾಗಿ ಕರೆದು ವಿಚಾರಿಸಿದ್ರೆ, ಅವರು ಹೇಳುವ ವಯಸ್ಸು ಬೇರೆಯೇ ಆಗಿರುತ್ತದೆ.

ನಕಲಿ ಹೆಸರಿನಲ್ಲಿ ಆಧಾರ್ ಕಾರ್ಡ್

ನೆರೆಯ ದೇಶಗಳಿಂದ ಕರೆ ತರಲಾಗುವ ಮಕ್ಕಳಿಗೆ ನಕಲಿ ಹೆಸರಿನಲ್ಲಿ ಆಧಾರ್ ಕಾರ್ಡ್ ಮಾಡಿಸಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್‌ನ ಬೆಂಗಳೂರು ಘಟಕದ ಕಾರ್ಯಕ್ರಮ ನಿರ್ವಾಹಕರಾದ ಎಂ ಪಿ ರಶ್ಮಿ ಮಾತನಾಡಿ, ಈ ಕಾರ್ಡ್‌ಗಳನ್ನು ತ್ವರಿತವಾಗಿ ನೋಡಿದಾಗ ಅವು ನಕಲಿ ಎಂದು ತಿಳಿಯುತ್ತದೆ.

 ಇದಕ್ಕೆಲ್ಲಾ ಕಾರಣ ಆ ಇಬ್ಬರು, ಏನು ಮಾಡಬೇಕು ಸರ್ ಜೊತೆ ಸಿಎಂ ಬೊಮ್ಮಾಯಿ ರಹಸ್ಯ ಚರ್ಚೆ

ಎಲ್ಲ ಮಕ್ಕಳ ಹುಟ್ಟಿದ ದಿನಾಂಕ ಒಂದೇ

“ಹೆಚ್ಚಿನ ಪ್ರಕರಣಗಳಲ್ಲಿ ಜನ್ಮ ದಿನಾಂಕ ಮತ್ತು ತಿಂಗಳು ಎರಡನ್ನೂ ‘1’ ಎಂದು ನೀಡಲಾಗುತ್ತದೆ. ಅವರಲ್ಲಿ ಅನೇಕರು ಒಂದೇ ದಿನದಲ್ಲಿ ಹೇಗೆ ಹುಟ್ಟುತ್ತಾರೆ? ಎಂದು ಎಂ.ಪಿ.ರಶ್ಮಿ ಪ್ರಶ್ನೆ ಮಾಡುತ್ತಾರೆ.

ಉತ್ತರ ಭಾರತದ ರಾಜ್ಯಗಳಿಂದ ಮಕ್ಕಳ ಸಾಗಾಟ

ಅವರಲ್ಲಿ ಎಪ್ಪತ್ತು ಪ್ರತಿಶತ ಬಿಹಾರದವರು ನಂತರ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದವರು. ಕೆಲವರು ರಾಜಸ್ಥಾನ, ಒಡಿಶಾ, ಜಾರ್ಖಂಡ್ ಮತ್ತು ಕರ್ನಾಟಕದವರೂ ಇದ್ದರು. ಈ ಕಾರ್ಡ್‌ಗಳಲ್ಲಿ 14 ಅಥವಾ 15 ವರ್ಷ ವಯಸ್ಸಿನವರಿಗೆ 20 ವರ್ಷ ಎಂದು ತೋರಿಸಲಾಗಿದೆ, “ಎಂದು ಅವರು ಹೇಳಿದರು.

ಕಾರ್ಡ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಿರ್ದಿಷ್ಟ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಕಾರ್ಡ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ಬಾಸ್ಕೋದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ರೈಲ್ವೆ ಚೈಲ್ಡ್‌ಲೈನ್‌ನ ನಿರ್ದೇಶಕ ಫಾದರ್ ವರ್ಗೀಸ್ ಪಲ್ಲಿ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಏಕೈಕ ಮಾರ್ಗವೆಂದರೆ ಅದನ್ನು ಪ್ರಾರಂಭದ ಹಂತದಲ್ಲಿಯೇ ತಡೆಗಟ್ಟುವುದು ಎಂದು ಹೇಳುತ್ತಾರೆ.

32 ಯುವತಿಯರ ರಕ್ಷಣೆ

ವಿದೇಶದಲ್ಲಿ ವಿದ್ಯಾಭ್ಯಾಸ ಕೊಡಿಸುವ ನೆಪದಲ್ಲಿ ಅಕ್ರಮವಾಗಿ ಯುವತಿಯರನ್ನು ಬೇರೆ ದೇಶಕ್ಕೆ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, 32 ಯುವತಿಯರನ್ನು ರಕ್ಷಣೆ ಮಾಡಲಾಗಿತ್ತು. ಕೇರಳ ಮೂಲದ 32 ನರ್ಸ್​ಗಳನ್ನು ಮಾನವ ಕಳ್ಳಸಾಗಣೆಯಿಂದ ರಕ್ಷಿಸಲಾಗಿದೆ.

ಮಂಗಳೂರಿನಲ್ಲಿ ಶಿಕ್ಷಣ ಸಲಹಾ ಸಂಸ್ಥೆಯೊಂದನ್ನು ನಡೆಸುತ್ತಿದ್ದ ಟೋಮಿ ಟಾಮ್ ಈ 32 ನರ್ಸ್​ಗಳಿಗೆ ವಿದೇಶದಲ್ಲಿ ವಿದ್ಯಾಭ್ಯಾಸ ಕೊಡಿಸುವುದಾಗಿ ಹೇಳಿ ನಂಬಿಸಿದ್ದ. ಆತನ ಮಾತನ್ನು ನಂಬಿ ಅವರೆಲ್ಲರೂ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಿಂದ ಅಮೆರಿಕಕ್ಕೆ ಅವರನ್ನು ಸಾಗಾಟ ಮಾಡಲು ಟೋಮಿ ಸಂಚು ರೂಪಿಸಿದ್ದ. ಆದರೆ, ಅಷ್ಟೂ ಜನರು ಒಂದೇ ವಿಶ್ವವಿದ್ಯಾಲಯದಲ್ಲಿ ಕೋರ್ಸ್​ ಕಲಿಯಲು ಹೋಗುತ್ತಿರುವ ಬಗ್ಗೆ ಇಮಿಗ್ರೇಷನ್​ ಸಿಬ್ಬಂದಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಏರ್​ಪೋರ್ಟ್​ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಚಾರಣೆ ವೇಳೆ ಟೋಮಿ ತಪ್ಪೊಪ್ಪಿಕೊಂಡಿದ್ದನು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap