ಪಾವಗಡ
ಪುರಸಭೆಯ ವ್ಯಾಪ್ತಿಯ 2 ನೇ ವಾರ್ಡ್ನಲ್ಲಿ 2-3 ತಿಂಗಳಿಂದ ನೀರಿಗಾಗಿ ಪರದಾಟವಾಗಿದ್ದು,ಅಧಿಕಾರಿಗಳ ಗಮನಕ್ಕೂ ತಂದರು ಗಮನ ಹರಿಸುತ್ತಿಲ್ಲ ಎಂದು ವಾರ್ಡ್ನ ಸಾರ್ವಾಜನಿಕರು ಆರೋಪಿಸಿದ್ದಾರೆ.
ಸೋಮವಾರ ಪುರಸಭೆ ಕಛೇರಿಯ ಮುಂದೆ ವಾರ್ಡ್ನ ಸಾರ್ವಜನಿಕರು ಮುತ್ತಿಗೆ ಹಾಕಿದ ನಂತರ ಅನುಪೂರ್ಣಮ್ಮ ಮಾತನಾರೀ ವಾರ್ಡ್ನಲ್ಲಿ ವಿದ್ಯುತ್ ಸೌಕರ್ಯ ಬಿಟ್ಟರೆ ಸ್ವಚ್ಚೆತೆಯಿಲ್ಲ,ಕಸದ ವಾಹನ ಬರುತ್ತಿಲ್ಲ,ಚರಂಡಿ ವ್ಯವಸ್ಥೆಯಿಲ್ಲಿ 2 ತಿಂಗಳಾದರು ಕುಡಿಯುವ ನೀರು ಬಿಡುತ್ತಿಲ್ಲ,ಕಛೇರಿಗೆ ಬಂದರೆ ಒಬ್ಬ ಅಧಿಕಾರಿ ಇಲ್ಲ ಯಾರಿಗೆ ನಾವು ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ವಾರ್ಡ್ನ ಪಕ್ಕದಲ್ಲಿ ಪೈಪು ಲೈನ್ ಹಾದು ಹೋಗಿದ್ದರು ಸಹ ಕುಡಿಯುವ ನೀರು ಬಿಡುತ್ತಿಲ್ಲ,ಒಂದು ವಾರಕ್ಕಾದರು ಒಂದು ಸಲ ಟ್ಯಾಂಕ್ ನೀರು ಕಳಿಸುತ್ತಿಲ್ಲ,ಇಲ್ಲಿ ಜನಪ್ರತಿನಿಧಿಗಳಿಗೆ ಮತಬೇಕು,ಇಲ್ಲಿನ ಸಮಸ್ಯೆ ಬಗೆ ಹರಿಸಲು ಯಾರು ಮುಂದೆ ಬರುತ್ತಿಲ್ಲ ಎಂದು ವಾರ್ಡ್ನ ಸಾರ್ವಜನಿಕರು ಆರೋಪಿಸಿದರು.
ಕಛೇರಿಯಲ್ಲಿ ಅಧಿಕಾರಿಗಳು ಇಲ್ಲದ ಕಾರಣ ಈ ವಾರ್ಡ್ನ ವಾಟರ್ ಮ್ಯಾನ್ ಜಗನಾಥ್ ಮನವಿಯನ್ನು ಸ್ವೀಕರಿಸಿ ಮಾತನಾಡಿ ಒಂದು ವಾರದೊಳಗೆ ನೀರಿನ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಹರೀಶ್,ಪಾತಣ್ಣ,ಜಮೀರ್,ಜಯಮ್ಮ ,ಮುರಳಿ,ಶ್ರೀರಾಮ್ ,ಈಶ್ವರಮ್ಮ,ಯಶ್ವಂತರಾವ್ ,ಮಾರುತೇಶ್,ದುರ್ಗಮ್ಮ, ಈರಚಿಕ್ಕಪ್ಪ, ಮಾಲತಿ,ಚಿಕ್ಕಮ್ಮ,ಮಾರುತಿ,ಅಧಿಲಕ್ಷ್ಮಮ್ಮ ,ಸುಜಾತಮ್ಮ,ರಮೇಶ್ ಹಾಜರಿದ್ದರು.