ಚಿನ್ನಾಭರಣ ನಗದು ದೋಚಲು ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ

ಬೆಂಗಳೂರು

          ಮಾರಕಾಸ್ತ್ರಗಳನ್ನು ಹಿಡಿದು ಒಂಟಿಯಾಗಿ ಓಡಾಡುವವ ಚಿನ್ನಾಭರಣ ನಗದು ದೋಚಲು ಹೊಂಚು ಹಾಕುತ್ತಿದ್ದ ನಾಲ್ವರು ರೌಡಿಗಳು ಸೇರಿ ಐವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

         ಕಾಮಾಕ್ಷಿಪಾಳ್ಯದ ವಿನಯ್‍ಕುಮಾರ್, ಕಾವೇರಿಪುರದ ವಿಷ್ಣು ನೂತನ್, ಸಂಜಯ್ ಹಾಗೂ ಸಂಜಯ್ ಬಂಧಿತ ಆರೋಪಿಗಳಾಗಿದ್ದಾರೆ,ಬಂಧಿತರಿಂದ ಕಬ್ಬಿಣದ ರಾಡ್, ಲಾಂಗ್, ದೊಣ್ಣೆ, ಕ್ರಿಕೆಟ್ ಸ್ಟಂಪ್ಸ್ ಹಾಗೂ ಕಾರದಪುಡಿ ಪ್ಯಾಕೆಟ್‍ಗಳನ್ನು ವಶಕ್ಕೆ ಪಡೆಯಲಾಗಿದೆ.

            ಬಂಧಿತ ಆರೋಪಿಗಳಲ್ಲಿ ನಾಲ್ವರು ಕಾಮಾಕ್ಷಿಪಾಳ್ಯ ಹಾಗೂ ಬಸವೇಶ್ವರ ಠಾಣೆಗಳ ವಿವಿಧ ಪ್ರಕರಣಗಳ ರೌಡಿಶೀಟರ್‍ಗಳಾಗಿದ್ದಾರೆ.ಐವರು ಆರೋಪಿಗಳು ಜ.21ರಂದು ರಾತ್ರಿ 7 ಗಂಟೆ ಸುಮಾರಿಗೆ ಶ್ರೀನಿವಾಸನಗರದ ಪೈಪ್‍ಲೈನ್ ರಸ್ತೆಯ ಮೆಟ್ರೋ ಕ್ವಾಟ್ರಸ್ ಕಾಂಪೌಂಡ್ ಮರೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಹೊಂಚು ಹಾಕುತ್ತಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಕಾರ್ಯಾಚರಣೆ ವೇಳೆ ಕೂಡಾ ಆರೋಪಿಗಳು ಕಾಂಪೌಂಡ್ ಮರೆಯಲ್ಲಿ ನಿಂತು ರಸ್ತೆಯಲ್ಲಿ ಸಂಚರಿಸುವವರನ್ನು ಅನುಮಾನಾಸ್ಪಾದ ರೀತಿಯಲ್ಲಿ ಇಣುಕಿ ನೋಡುತ್ತಿದ್ದರು.

        ಕೂಡಲೇ ಐವರನ್ನು ಬಂಧಿಸಿದಾಗ, ಅವರ ಬಳಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ವಿಚಾರಣೆ ವೇಳೆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರನ್ನು ಅಡ್ಡಗಟ್ಟಿ ಹಣ ಹಾಗೂ ಚಿನ್ನಾಭರಣ ಸುಲಿಗೆ ಮಾಡಲು ಸಂಚು ರೂಪಿಸಿರುವುದಾಗಿ . ಈ ಸಂಬಂಧ ಬಂಧಿತರ ವಿರುದ್ಧ ದರೋಡೆಗೆ ಸಂಚು ರೂಪಿಸಿದ ಪ್ರಕರಣದಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link