ರಸ್ತೆ ಅಗಲೀಕರಣಕ್ಕೆ ಶೀಘ್ರವೇ ಚಾಲನೆ;ತಿಪ್ಪಾರೆಡ್ಡಿ

ಚಿತ್ರದುರ್ಗ;

       ಬಹುದಿನಗಳ ನಿರೀಕ್ಷೆಯ ರಸ್ತೆ ಅಗಲೀಕರಣಕ್ಕೆ ಅತೀ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆಇಲ್ಲಿನ ಜೆಸಿಆರ್ ಬಡಾವಣೆಯಲ್ಲಿ ಬುಧವಾರ ನಗರೋತ್ಥಾನ 3ನೇ ಹಂತದ ಯೋಜನೆಯಡಿ ಸುಮಾರು 60 ಲಕ್ಷ ರೂಪಾಯಿ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು

          ನಗರದ ಚಳ್ಳಕೆರೆ ಗೇಟ್ ನಿಂದ ಪ್ರವಾಸಿ ಮಂದಿರದ ವರೆಗಿನ ರಸ್ತೆ ಆಗಲಿಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ, ಇದಕ್ಕೆ ಬೇಕಾದ ಅನುದಾನ 19 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಲಿದೆ ಎಂದರು ರಸ್ತೆ ಅಗಲೀಕರಣ ಕುರಿತು ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳಿವೆ. ಅತೀ ತುರ್ತಾಗಿ ಸಾರ್ವಜನಿಕರೊಂದಿಗೆ ಚರ್ಚಿಸಿ ಈ ಸಂಬಂಧದ ಗೊಂದಲ ನಿವಾರಣೆ ಮಾಡಲಾಗುವುದು. ಜೆಸಿಆರ್ ಮುಖ್ಯ ರಸ್ತೆಯನ್ನು ಸಹ ಆಗಲ ಮಾಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಿಂದ ಆರ್.ಟಿ.ಓ.ಕಚೇರಿಯವರೆಗೂ ರಸ್ತೆಯನ್ನು ಆಗಲ ಮಾಡಿ ಸಿಮೆಂಟ್ ಡಬ್ಬಲ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ, ಇದಕ್ಕಾಗಿ 5 ಕೋಟಿ ರೂ. ಮೀಸಲಿರಿಸಲಾಗಿದೆ. ಇಲ್ಲಿಂದ ಮುಂದೆ ಚಿತ್ರದುರ್ಗ ಜಿಲ್ಲೆಯ ಗಡಿ ಪ್ರದೇಶದವರೆಗೂ 18 ಕಿ.ಮೀ. ರಸ್ತೆಯನ್ನು ನಿರ್ಮಾಣ ಮಾಡಲು 30 ಕೋಟಿ ರೂ.ಗಳನ್ನು ಎಸ್.ಎಚ್.ಡಿ.ಪಿ.ಯೋಜನೆಯಡಿ ನೀಡಲಾಗಿದೆ ಎಂದರು.

        ಪ್ರಧಾನ ಮಂತ್ರಿಗಳ ವಿವಿಧ ಯೋಜನೆ, ನಗರೋತ್ತಾನ 3ನೇ ಹಂತ ಹಾಗೂ ಶಾಸಕರ ನಿಧಿ ಸೇರಿದಂತೆ ಸುಮಾರು 300 ರಿಂದ 400 ಕೋಟಿ ರೂ.ಗಳ ಕಾಮಗಾರಿ ಚಿತ್ರದುರ್ಗ ನಗರದಲ್ಲಿ ನಡೆಯುತ್ತಿದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

        ನಗರದಲ್ಲಿ ಹದಗೆಟ್ಟ ರಸ್ತೆಗಳನ್ನು ಕೆಲವಡೆ ಸಿಮೆಂಟ್ ಮತ್ತೇ ಕೆಲವೆಡೆ ಡಾಂಬರೀಕರಣ ಮಾಡಲಾಗುತ್ತಿದೆ ಈಗಗಾಲೇ ಕಾಮಗಾರಿಗಳು ನಡೆಯುತ್ತಿದ್ದು ಮುಂದಿ ಜೂನ್ ವೇಳೆಗೆ ಪೂರ್ಣವಾಗಲಿದ್ದು ಈಗಾಗಲೇ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ, ತಹಶೀಲ್ದಾರ್ ಕಛೇರಿ ಬಳಿ, ಅಂಬೇಡ್ಕರ್ ವೃತ್ತ, ಗುರುಭವನದಿಂದ ನ್ಯಾಯಾಲಯದವರೆಗೆ ಸಿಮೆಂಟ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಹಂತÀದಲ್ಲಿದೆ ಎಂದರು.

          ಮನೆಗೆ ಗ್ಯಾಸ್ ಸಂಪರ್ಕ : ಕೇಂದ್ರ ಸರ್ಕಾರದ ಬಹು ಮುಖ್ಯ ಯೋಜನೆಯಾದ ಗೇಲ್ ಇಂಡಿಯಾದಡಿಯಲ್ಲಿ ಮನೆಗಳಿಗೆ ಪೈಪ್ ಲೈನ್ ಮೂಲಕ ಗ್ಯಾಸ್ ಸರಬರಾಜು ಮಾಡುವ ಯೋಜನೆಗೆ ಚಿತ್ರದುರ್ಗ ನಗರ ಆಯ್ಕೆಯಾಗಿದ್ದು ಇದರ ಕಾಮಗಾರಿಯೂ ಸಹಾ ನಡೆಯುತ್ತಿದೆ

         ಮುಂದಿನ ದಿನಮಾನದಲ್ಲಿ ಮತ್ತೇ ರಸ್ತೆಗಳನ್ನು ಆಗೆಯುವ ಅನಿವಾರ್ಯ ಉಂಟಾಗುತ್ತದೆ ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದ್ದು, ಅಮೃತ್ ಯೋಜನೆಯಡಿ ನಗರ ಆಯ್ಕೆಯಾಗಿದ್ದು 140 ಕೋಟಿ ರೂ.ಗಳಲ್ಲಿ ಕುಡಿಯುವ ನೀರಿಗಾಗಿ 122 ಕೋಟಿ ರೂ.ಗಳನ್ನು ವ್ಯಯ ಮಾಡಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.

          ಜೂನ್ ವೇಳೆಗೆ ಪೂರ್ಣ : ನಗರದ ವಿವಿಧ ಭಾಗದಲ್ಲಿ ಪ್ರಾರಂಭವಾಗಿರುವ ರಸ್ತೆ ಕಾಮಗಾರಿಗಳು ಪೂರ್ಣ ಪ್ರಮಾಣದಲ್ಲಿ ಜೂನ್ ವೇಳೆಗೆ ಆಗಲಿದೆ. ಈಗಾಗಲೇ ಶೇ.50 ರಷ್ಟು ಕಾಮಗಾರಿಗಳು ನಡೆಯುತ್ತಿದ್ದು ಇನ್ನು ಹಲವಾರು ಕಡೆಗಳಲ್ಲಿ ಕಾಮಗಾರಿಗಳು ಪ್ರಾರಂಭವಾಗಬೇಕಿದೆ, ಮತ್ತೇ ಕೆಲವು ಡಾಂಬರ್ ರಸ್ತೆಯನ್ನು ಮಾಡಬೇಕಿದೆ, ಬುರುಜನಹಟ್ಟಿ, ಸರಸ್ವತಿ ಪುರಂ, ಬಸವಮಂಟಪ, ಗುರುಭವನದಿಂದ ಮಸೀದಿ, ಬುದ್ದ ನಗರ, ಸೇರಿದಂತೆ ಇತರೆ ಕಡೆಗಳಲ್ಲಿ ರಸ್ತೆ ಕಾಮಗಾರಿಗಳು ನಡೆಯಬೇಕಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರದ ಭೀಮಸಮುದ್ರ ರಸ್ತೆಯ ಸರ್ಕಾರಿ ಪೆಟ್ರೋಲ್ ಬಂಕ್ ಬಳಿ ಸಿಮೆಂಟ್ ರಸ್ತೆ, ಸಿಹಿ ನೀರಿನ ಹೊಂಡದ ಏರಿ ಮೇಲಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಇದ್ದು ಬೇರೆ ಕಡೆಯಿಂದ ನೀರಿನ ವ್ಯವಸ್ಥೆಯನ್ನು ಪೈಪ್ ಲೈನ್ ಮೂಲಕ ಮಾಡಿದ್ದು ಅದನ್ನು ಸಹಾ ಉದ್ಘಾಟನೆ ಮಾಡಲಾಯಿತು.

          ಈ ಸಮಯದಲ್ಲಿ ನಗರಸಭಾ ಸದಸ್ಯರಾದ ಶ್ರೀಮತಿ ಅನುರಾಧ, ಹರೀಶ್, ಮಾಜಿ ಸದಸ್ಯರಾದ ಸುನೀತಾ, ಶ್ಯಾಮಲ. ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ ಸೇರಿದಂತೆ ಬಡಾವಣೆಯ ಗ್ರಾಮಸ್ಥರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link