ನಾಟಕ ಇಂದು ಅಳಿವಿನಂಚಿನಲ್ಲಿದೆ: ಜಸ್ಟಿನ್ ಡಿಸೋಜಾ

ದಾವಣಗೆರೆ 

         ಪ್ರಸ್ತುತ ದಿನಮಾನಗಳಲ್ಲಿ ಟಿ.ವಿ ಮಾಧ್ಯಮಗಳ ಪ್ರಭಾವದಿಂದಾಗಿ ಜನರಲ್ಲಿ ನಾಟಕದ ಬಗೆಗಿನ ಆಸಕ್ತಿ ಕಡಿಮೆಯಾಗಿದ್ದು, ಸಾಂಸ್ಕತಿಕ ಕಲೆಗಳಲ್ಲಿ ಒಂದಾದ ನಾಟಕ ಇಂದು ಅಳಿವಿನಂಚಿನಲ್ಲಿದೆ ಎಂದು ಸಿದ್ದಗಂಗಾ ಪ್ರೌಢಶಾಲೆಯ ಪ್ರಾಂಶುಪಾಲರಾದ ಜಸ್ಟಿನ್ ಡಿಸೋಜಾ ಅವರು ಅಭಿಪ್ರಾಯಪಟ್ಟರು.

       ನಗರದ ಸಿದ್ದಗಂಗಾ ಶಾಲಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಬಾಲಭವನದ ವತಿಯಿಂದ ಏರ್ಪಡಿಸಲಾಗಿದ್ದ 2019ನೇ ಸಾಲಿನ ಜಿಲ್ಲಾ ಮಕ್ಕಳ ಅಭಿರಂಗ ಮಕ್ಕಳ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ನಾಟಕೋತ್ಸವದಿಂದ ಮಕ್ಕಳಲ್ಲಿ ಅಡಗಿರುವಂತಹ ಕಲಾತ್ಮಕ ಪ್ರತಿಭೆಗಳನ್ನು ಗುರುತಿಸಲು ಸಹಾಯಕವಾಗಿದೆ ಎಂದರು.

       ನಾಟಕ ಮತ್ತು ನಟನೆ ಎನ್ನುವುದು ಒಂದು ಶ್ರೇಷ್ಠವಾದ ಕಲೆ. ಇಂತಹ ಕಲೆಯ ಬಗ್ಗೆ ಮಕ್ಕಳಲ್ಲಿ ಇರುವಂತಹ ಅಭಿರುಚಿಯನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಅವರಲ್ಲಿನ ಸಾಂಸ್ಕøತಿಕ ಕಲೆಗಳ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ನಾಟಕಕ್ಕೆ ಅದರದ್ದೇ ಆದಂತಹ ಸ್ಥಾನ-ಮಾನ ಮತ್ತು ಚೌಕಟ್ಟುಗಳಿವೆ. ಮಕ್ಕಳು ನಾಟಕವನ್ನು ಆಸಕ್ತಿಯಿಂದ ಕಲಿಯಬೇಕು. ಎಳೆಯ ವಯಸ್ಸಿನ ಮಕ್ಕಳಲ್ಲಿ ನಾಟಕದ ಸದಭಿರುಚಿ ಮೂಡಿಸುವುದರಿಂದ ನಾಟಕದ ಉಳಿವಿಗೆ ಸಹಕಾರಿಯಾಗಲಿದೆ ಎಂದರು.

      ಕನ್ನಡ ಮತ್ತು ಸಂಸ್ಕತ ಇಲಾಖೆಯ ಸಹಾಕಯ ನಿರ್ದೇಶಕರಾದ ಕುಮಾರ್ ಬೆಕ್ಕೇರಿ ಅವರು ಮಾತನಾಡಿ, ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ನಾಟಕೋತ್ಸವ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ನಡೆಸಲಾಗುತ್ತಿದೆ. ವಿಜ್ಞಾನ, ಕ್ರೀಡೆ, ತಂತ್ರಜ್ಞಾನದ ಜೊತೆಗೆ ಕಲೆ ಮತ್ತು ಸಾಂಸ್ಕತಿಕ ಕ್ಷೇತ್ರದಲ್ಲಿ ಮಕ್ಕಳನ್ನು ಬೆಳೆಸಲು ನಾಟಕ ಸಹಕಾರಿಯಾಗಿದೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗೂ ರಂಗ ಪ್ರತಿಭೆಯ ಕುರಿತು ಹೆಚ್ಚಿನ ತಿಳುವಳಿಕೆ ಅಗತ್ಯ. ಅವರೂ ಕೂಡ ನಾಟಕದ ಅಭಿರುಚಿ ಬೆಳೆಸಿಕೊಳ್ಳಲಿ ಎಂಬುವುದರ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

        ಕನ್ನಡ ವಿಷಯ ಪರಿವೀಕ್ಷಕರಾದ ಕುಮಾರ್ ಹನುಮಂತಪ್ಪ ಸಾರಥಿ ಮಾತನಾಡಿ, ಶಾಲಾ ಮಟ್ಟದಲ್ಲಿ ಪ್ರತಿಭಾ ಕಾರಂಜಿ ಆಯೋಜಿಸಿ, ಆರು ತಂಡಗಳನ್ನು ಆಯ್ಕೆ ಮಾಡಿ ಜಿಲ್ಲಾ ಮಟ್ಟದಲ್ಲಿ ಪ್ರದರ್ಶನ ನಿಡಲಾಗುತ್ತಿದೆ. ಸಾಹಿತ್ಯ ಪ್ರಾಕಾರಗಳಲ್ಲಿ ನಾಟಕ ಹೆಚ್ಚು ಮನರಂಜಾತ್ಮಕವಾದ ಸಾಧನವಾಗಿದ್ದು, ಮಕ್ಕಳು ನಾಟಕದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಕೆ.ಹೆಚ್. ವಿಜಯಕುಮಾರ್, ನಾಟಕ ರಚನಕಾರ ಎಸ್.ಎಸ್. ಸಿದ್ದರಾಜು ಹಾಗೂ ಜಿಲ್ಲಾ ವಿವಿಧ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

          ನಾಟಕದಲ್ಲಿ ಪಾಲ್ಗೊಂಡ ತಂಡಗಳು ಮತ್ತು ಪ್ರಸಂಗ: ಮೊಬೈಲ್ ಬಳಕೆಯ ದುಷ್ಪಪರಿಣಾಮಗಳ ಕುರಿತಾಗಿ ನಗರದ ಸರ್ಕಾರಿ ಬಾಲಕರ ಬಾಲಮಂದಿರದ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು. ರಾಮಾಯಣದ ಶಬರಿ ಕಥಾ ಪ್ರಸಂಗ ಕುರಿತು ಹರಿಹರ ತಾಲೂಕು ಮಲೆಬೆನ್ನೂರಿನ ಶ್ರೀ ಬೀರಲಿಂಗೇಶ್ವರ ಬಾಲಕರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು. ಸಂಗೊಳ್ಳಿ ರಾಯಣ್ಣನ ಕುರಿತು ಚನ್ನಗಿರಿ ತಾಲೂಕಿನ ದೇವರಹಳ್ಳಿಯ ಶ್ರೀ ಲಕ್ಷ್ಮಿ ರಂಗನಾಥ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು.

           ನಂತರ ಅಭಿಮನ್ಯು ಚಕ್ರವ್ಯೂಹ ಭೇದಿಸುವ ಪ್ರಸಂಗವನ್ನು ಯಕ್ಷಗಾನದ ಮೂಲಕ ನಗರದ ವಿದ್ಯಾಸಾಗರ ಕಾನ್ವೆಂಟ್‍ನ ವಿದ್ಯಾರ್ಥಿಗಳಿಂದ ಪ್ರದರ್ಶನ ನಡೆಯಿತು. ಕಂಸನ ಸಂಹಾರ ಪ್ರಸಂಗದ ಕುರಿತು ತಾಲೂಕಿನ ಆನಗೊಡು ಗ್ರಾಮದ ಸಿದ್ದೇಶ್ವರ ಕಾನ್ವೆಂಟ್ ವಿದ್ಯಾರ್ಥಿಗಳಿಂದ ಪ್ರದರ್ಶನ, ಮುಗಿಯದ ಗೋಳು ಕುರಿತು ಹೊನ್ನಾಳಿ ಜೀನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗ ಳಿಂದ ಪ್ರದರ್ಶನ, ಸ್ಮಶಾನ ಕುರುಕ್ಷೇತ್ರ ಪ್ರಸಂಗ ಕುರಿತು ಜಗಳೂರು ತಾಲೂಕಿನ ದಿದ್ದಿಗೆ ಗ್ರಾಮದ ಆರ್.ಪಿ.ಎಸ್. ಶಾಲೆಯ ವಿದ್ಯಾರ್ಥಿಗ ಳಿಂದ ಪ್ರದರ್ಶನ, ಮಕ್ಕಳನ್ನು ದುಡಿಸಬಾರದು ಎಂಬ ಪ್ರಸಂಗದ ಕುರಿತಾಗಿ ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರದ ವಿದ್ಯಾರ್ಥಿನಿಯರಿಂದ ಪ್ರದರ್ಶನ ನಡೆಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link