ಹಾವೇರಿ
ಎಲ್ಲಾ ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ಸೇವೆ ಒದಗಿಸುವ ಕರ್ನಾಟಕ ಒನ್ ಯೋಜನೆಯ ಸೇವಾ ಕೇಂದ್ರಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಹಜ್ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಚಾಲನೆ ನೀಡಿದರು.
ಗುರುವಾರ ನಗರದ ಗುರುಭವನದ ಹತ್ತಿರ ನಗರಸಭೆ ವಾಣಿಜ್ಯ ಸಂಕೀರ್ಣದಲ್ಲಿ ಕರ್ನಾಟಕ-1 ಸಮಗ್ರ ನಾಗರೀಕ ಸೇವಾ ಕೇಂದ್ರದ ಉದ್ಘಾಟನೆ ನೆರವೇರಿಸಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು.
ಕರ್ನಾಟಕ ಒನ್ ಕೇಂದ್ರ ಹಾವೇರಿ ನಗರದ ನಾಗರಿಕರಿಗೆ ವಿವಿಧ 15 ಇಲಾಖೆಗಳ 48 ಸೇವೆಗಳನ್ನು ಒದಗಿಸಲಿದ್ದು, ಹಂತ ಹಂತವಾಗಿ ಸೇವಾ ಕ್ಷೇತ್ರವನ್ನು ವಿಸ್ತರಿಸಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಗಾಂಧಿ ಜಯಂತಿ, ಕಾರ್ಮಿಕರ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಚುನಾವಣೆ ಮತ ಚಲಾಯಿಸುವ ದಿನ ಹೊರತುಪಡಿಸಿ ಭಾನುವಾರದ ರಜಾ ದಿನಗಳು ಸೇರಿದಂತೆ ಉಳಿದ ದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೆ ವರ್ಷದ ಎಲ್ಲಾ ದಿನಗಳು ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಹಾಗೂ ನಿರ್ವಾಹಣಾ ಪಾಲುದಾರರು, ಬ್ಯಾಂಕಿಂಗ್ ಪಾಲುದಾರರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಗರಸಭೆಗಳು ಈ ಯೋಜನೆಯ ಮುಖ್ಯ ಸಹಭಾಗಿತ್ವದಲ್ಲಿ ಜನರಿಗೆ ಸೇವೆ ಒದಗಿಸುತ್ತಿವೆ ಎಂದು ವಿವರಿಸಿದರು.
ಯಾವ ಯಾವ ಸೇವೆ: ವಿದ್ಯುತ್ ಸರಬರಾಜು ಕಂಪನಿ ವಿದ್ಯುತ್ ಬಿಲ್ಲುಗಳ ಪಾವತಿ, ಹೆಚ್ಚುವರಿ ಭದ್ರತಾ ಠೇವಣಿ ಪಾವತಿ, ಬಿ.ಎಸ್.ಎನ್.ಎಲ್. ಲ್ಯಾಂಡ್‍ಲೈನ್ ಬಿಲ್ ಪಾವತಿ, ಸೆಲ್‍ಒನ್ ಮೊಬೈಲ್ ಬಿಲ್ ಪಾವತಿ, ಪೊಲೀಸ್ ಇಲಾಖೆಯ ಪೊಲೀಸ್ ವೆರೀಪಿಕೇಷನ್, ಕ್ಲೀಯರೆನ್ಸ್, ಪ್ರಮಾಣಪತ್ರಕ್ಕಾಗಿ ಶುಲ್ಕ ಪಾವತಿ, ಧ್ವನಿವರ್ಧಕ ವ್ಯವಸ್ಥೆ ಅಳವಡಿಸಲು ಶುಲ್ಕ ಪಾವತಿ, ವಾಹನಗಳ ವಿಚರಣಾ ವರದಿಗಾಗಿ ಶುಲ್ಕ ಪಾವತಿ, ಪಿ.ಯು.ಸಿ.ಯ ಉತ್ತರ ಪತ್ರಿಕೆ ಫೋಟೋಕಾಪಿಗಾಗಿ ಅರ್ಜಿ, ಮರು ಎಣಿಕೆಗಾಗಿ ಅರ್ಜಿ, ಮರು ಮೌಲ್ಯ ಮಾಪನಕ್ಕಾಗಿ ಅರ್ಜಿ, ಪಿ.ಯು.ಸಿ.ಫಲಿತಾಂಶ, ಬೆಂಗಳೂರು ವಿಶ್ವವಿದ್ಯಾಲಯದ ಕರೆಸ್ಪಾಂಡೆನ್ಸ್ ಕೋರ್ಸಗಳಿಗಗಿ ಅರ್ಜಿಶುಲ್ಕ ಪಾವತಿ, ಕರೆಸ್ಪಾಂಡೆನ್ಸ್ ಕೋರ್ಸಗಳಿಗಗಿ ಅರ್ಜಿ ವಿತರಣೆ, ಪಾಸ್ ಪೋರ್ಟ ಇಲಾಖೆಯ ಪಾಸ್‍ಪೋರ್ಟ್‍ಗಾಗಿ ಆನ್‍ಲೈನ್ ಅರ್ಜಿ ಸಲ್ಲಿಕೆ(ವಾಕ್‍ಇನ್ ಅರ್ಜಿದಾರರಿಗೆ) ಮಾತ್ರ, ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರಕ್ಕಾಗಿ ಆನ್‍ಲೈನ್ ಅರ್ಜಿ ಸಲ್ಲಿಕೆ, ಸಾರಿಗೆ ಇಲಾಖೆಯ ಆರ್.ಸಿ.ಎಕ್ಸ್‍ಟ್ರಾಕ್ಟ ವಿತರಣೆ, ಡಿ.ಎಲ್.ಎಕ್ಸಟ್ರಾಕ್ಟ ವಿತರಣೆ.
ಆಧಾರ ಕುರಿತು ಇ-ಆಧಾರ್ ಮುದ್ರಿಸುವುದು, ಆಧಾರ ನೋಂದಣಿ, ಆಧಾರನಲ್ಲಿ ಇರುವ ವಿವರಗಳ ಬದಲಾವಣೆಗಾಗಿ ಅರ್ಜಿ ಸಲ್ಲಿಕೆ, ಸರ್ಕಾರದ ವಿವಿಧ ಇಲಾಖೆಗಳ ಅರ್ಜಿಗಳನ್ನು ಮುದ್ರಿಸುವುದು, ಆಹಾರ ಮತ್ತು ನಾಗಹರಿಕ ಸರಬರಾಜು ಇಲಾಖೆಯ ಪಡಿತರ ಚೀಟಿಗಾಗಿ ಅರ್ಜಿ, ಪಡಿತರ ಚೀಟಿಯೊಂದಿಗೆ ಆಧಾರ್ ಮತ್ತು ಮತದಾರರ ಚೀಟಿಯ ವಿವರಗಳನ್ನು ಜೋಡಿಸಲು ಅರ್ಜಿ, ಪಡಿತರ ಚೀಟಿಯಲ್ಲಿ ಕುಟುಂಬದ ಸದಸ್ಯರ ವಿವರಗಳನ್ನು ಸೇರಿಸಲು ಅರ್ಜಿ, ಪಡಿತರ ಆದ್ಯತೆ ಪಟ್ಟಿಯಿಂದ ಕೈವಿಡಲು ನೋಂದಣಿ, ಎಸ್.ಎಸ್.ಎಲ್.ಸಿ. ಉತ್ತರ ಪತ್ರಿಕೆ ನಕಲು ಪ್ರತಿಗಾಗಿ ಅರ್ಜಿ, ಮರು ಎಣಿಕೆಗಾಗಿ ಅರ್ಜಿ, ಮರುಮೌಲ್ಯಪಾನಕ್ಕಾಗಿ ಅರ್ಜಿ, ಹೊಸಬೆಳಕು ಯೋಜನೆಯಡಿ ಎಲ್.ಇ.ಡಿ.ಬಲ್ಬ್‍ಗಳ ಮಾರಾಟ, ಕಂದಾಯ ಇಲಾಖೆಯ ಜನಸಂಖ್ಯೆ ಪ್ರಮಾಣಪತ್ರ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣಪತ್ರ(ಪ್ರವರ್ಗ-ಎ), ಜಾತಿ ಪ್ರಮಾಣಪತ್ರ(ಎಸ್ಸಿ/ಎಸ್ಟಿ), ಓಬಿಸಿ ಪ್ರಮಾಣಪತ್ರ(ಕೇಂದ್ರದ), ವಸತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಗೇಣಿ ರಹಿತ ಪ್ರಮಾಣಪತ್ರ, ವಿಧವಾ ಪ್ರಮಾಣಪತ್ರ, ಜೀವಂತ ಪ್ರಮಾಣಪತ್ರ, ಕೃಷಿ ಕುಟುಂಬ ಸದಸ್ಯ ಪ್ರಮಾಣಪತ್ರ, ಮರುವಿವಾಹ ರಾಹಿತ್ಯ ಪ್ರಮಾಣಪತ್ರ, ಭೂಮಿ ರಾಹಿತ್ಯ ಪ್ರಮಾಣಪತ್ರ, ಬದುಕಿರುವ ಕುಟುಂಬ ಸದಸ್ಯ ಪ್ರಮಾಣಪತ್ರ, ನಿರುದ್ಯೋಗ ಪ್ರಮಾಣಪತ್ರ, ಸರಕಾರಿ ಹುದ್ದೆಯಲ್ಲಿರದ್ದಕ್ಕೆ ಪ್ರಮಾಣಪತ್ರ, ಸಣ್ಣ/ಅತಿಸಣ್ಣ ಕೃಷಿಕರ ಪ್ರಮಾಣಪತ್ರ, ಕೃಷಿ ಕಾರ್ಮಿಕ ಪ್ರಮಾಣಪತ್ರ ಸೇರಿದಂತೆ ವಿವಿಧ 15 ಇಲಾಖೆಯ 48 ಸೇವೆಗಳು ಈ ಕರ್ನಾಟಕ್ ಓನ್ ಸೇವಾ ಕೇಂದ್ರದಿಂದ ಪಡೆಯಬಹುದಾಗಿದೆ. ನಗರದ ಅಕ್ಕಮಹಾದೇವಿ ಹೊಂಡದ ನಗರಸಭೆ ವಾಣಿಜ್ಯ ಸಂಕೀರ್ಣದಲ್ಲಿ ಆರಂಭಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಮಾಜಿ ಸಚಿವ ರುದ್ರಪ್ಪ ಲಮಾಣಿ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
