ಐ.ಡಿ.ಹಳ್ಳಿ
ಗ್ರಾಮದಲ್ಲಿ ಸಾರ್ವಜನಿಕ ರುದ್ರಭೂಮಿ ಇಲ್ಲಾ ಎಂದು ಪ್ರಜಾಪ್ರಗತಿ ಕನ್ನಡದಿನ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ತಿಳಿದ ತಹಶಿಲ್ದಾರ್ ಅಧಿಕಾರಿ ಹೊಸದಾಗಿ ಬಂದಿರುವ ನಂದೀಶ್ ರವರು ಐ.ಡಿ.ಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರೀಶಿಲಿಸಿದರು.
ತಹಸಿಲ್ದಾರ್ ನಂದೀಶ್ ರವರು ಸ್ಥಳಕ್ಕೆ ಭೇಟಿ ನೀಡಿದಾಗ ಸಾರ್ವಜನಿಕ ರುದ್ರಭೂಮಿ ಜಮೀನಿನಲ್ಲಿ ಶ್ರೀನಿವಾಸ್ ರೆಡ್ಡಿ ಎಂಬುವ ವ್ಯಕ್ತಿ ಅನುಭವದಲ್ಲಿದ್ದು. ಇವರ ಕಾಟದಿಂದ ಸುಮಾರು ವರ್ಷಗಳ ಹಿಂದೆಯೇ ಆಗಬೇಕಾದ ರುದ್ರಭೂಮಿ ಜಾಗದಲ್ಲಿ ಇವರು ಉಳುಮೆ ಮಾಡುತ್ತಾ ಬಂದಿದ್ದು ಹಿಂದೆ ಇವರು ರೆವಿನ್ಯೂ ಉಪ ತಹಶಿಲ್ದಾರ್ ರವರು ರುದ್ರಭೂಮಿಯ ಫೈಲ್ ಪುಟ್ ಅಪ್ ಮಾಡಿ ಕಳಿಸಿರುವ ಫೈಲ್ಗಳು ಜಿಲ್ಲಾ ಕಚೇರಿಯಲ್ಲಿಯು ಮಾಯಾ ಹಗಿದೆ. ಇಲ್ಲಿನ ಅಧಿಕಾರಿಗಳಿಗೂ ರುದ್ರಭೂಮಿ ಫೈಲ್ ಸಿಗದಂತೆ ಬಚ್ಚಿಟ್ಟಿದ್ದಾರೆ ಎಂಬುದು ಬೆಳಕಿಗೆ ಬಂದಿದ್ದು ಮುಂದೆ ಏನಾಗ ಬಹುದು ಕಾದು ನೋಡಬೇಕಾಗಿದೆ.
ಹೊಸದಾಗಿ ಬಂದಿರುವಂತಹ ತಹಸಿಲ್ದಾರ್ ಅಧಿಕಾರಿಗಳು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಗಂಭೀರವಾಗಿ ಚರ್ಚಿಸಿ ಸ್ಥಳಕ್ಕೆ ಭೇಟಿ ನೀಡಿದಾಗ ಶ್ರೀನಿವಾಸ್ ರೆಡ್ಡಿ ಎಂಬವರು ರುದ್ರಭೂಮಿಯ ಜಮೀನಿನಲ್ಲಿ ಉಳುಮೆ ಮಾಡಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ತಿಳಿದ ಕೂಡಲೇ ತಹಸಿಲ್ದಾರ್ ನಂದೀಶ್ ರವರು ರೆವಿನ್ಯು ಅಧಿಕಾರಿಗಳಿಗೆ ಮೊದಲು ಪಹಣಿಯಲ್ಲಿ ರುದ್ರಭೂಮಿ ಎಂದು ಹೆಸರು ಬರುವ ಹಾಗೆ ಮಾಡಿ ಈ ಸ್ಥಳದಲ್ಲಿ ಒತ್ತುವರಿ ಮಾಡಿಕೊಂಡಿರುವನಿಗೆ ನೋಟಿಸ್ ಕೊಡಿ ಹಾ ನೋಟಿಸ್ ನಲ್ಲಿ ಸರ್ಕಾರಿ ಜಮೀನನ್ನು ರುದ್ರಭೂಮಿ ಎಂದು ತೇಗೆದ ಹಾ ಜಾಗವನ್ನು ನೀವು ಒತ್ತುವರಿ ಮಾಡಿಕೊಂಡಿರುವುದರಿಂದ ಈಗ ಗ್ರಾಮದ ಜನರಿಗೆ ರುದ್ರ ಭೂಮಿ ಇಲ್ಲದೆ ಪರದಾಡುತ್ತಿದ್ದಾರೆ ಆದ್ದರಿಂದ ಈ ಜಮೀನನ್ನು ಬಿಟ್ಟುಕೊಡಬೇಕು ಬಿಟ್ಟು ಕೊಡದಿದ್ದರೆ 10 ವರ್ಷ ಜೈಲು ವನವಾಸ ಬೇಕು ಅಥವಾ ಭೂಮಿ ಬೇಕು ಎಂದು ನೋಟಿಸ್ ನೀಡಿ ಎಂದು ರೆವಿನ್ಯು ಅಧಿಕಾರಿ ನಾರಾಯಣಪ್ಪ ನಿಗೆ ತಹಶಿಲ್ದಾರ್ ಸೂಚನೆ ನೀಡಿದರು.
ನಂದೀಶ್ ಅವರು ಗ್ರಾಮಸ್ಥರ ಬಳಿ ಮಾತನಾಡಿ ನೀವೇನು ತೊಂದರೆ ಪಡುವ ಅವಶ್ಯಕತೆ ಇಲ್ಲಾ.ಏಕೆಂದರೆ ಮುಖ್ಯವಾಗಿ ಪ್ರತಿ ಹಳ್ಳಿಗಳಲ್ಲಿಯೂ ರುದ್ರ ಭೂಮಿ ಮಾಡಬೇಕಾಗಿದೆ.ಆದ್ದರಿಂದ ಈ ಗ್ರಾಮ ದೊಡ್ಡ ಮಟ್ಟದ ಹೋಬಳಿ ಹಾಗಿದ್ದೂ ಇಲ್ಲಿನ ಜನರಿಗೆ ಮುಖ್ಯವಾಗಿ ರುದ್ರಭೂಮಿ ಬೇಕಾಗಿದೆ.ಆದ್ದರಿಂದ ನಾನು ಈ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿ ಕೂಡಲೇ ಶೀಘ್ರದಲ್ಲಿ ನಿಮ್ಮ ಗ್ರಾಮಕ್ಕೆ ಸಾರ್ವಜನಿಕ ರುದ್ರ ಭೂಮಿಗೆ ಜಮೀನು ಮಾಡಿ ಕೊಡಲಾಗುವುದು ಎಂದರು.
ರೆವಿನ್ಯೂ ಅಧಿಕಾರಿ ರವಿ ಮಾತನಾಡಿ ನಾವು ಸುಮಾರು ಐದು ವರ್ಷಗಳ ಹಿಂದೆ ಇಲ್ಲಿನ ರುದ್ರಭೂಮಿಯನ್ನು ಪರಿಶೀಲಿಸಿ ಸರ್ವೆಯನ್ನು ಮಾಡಿಸಿ ಜಿಲ್ಲಾ ಕಚೇರಿಗೆ ಒಟ್ಟು ತಾಲೂಕಿನಿಂದ 15 ರುದ್ರಭೂಮಿಯ ಫೈಲ್ಗಳನ್ನು ಕಳಿಸಿದ್ದೇವೆ ಆದರೆ ಮಂಜುರಾಗಿ 14 ರುದ್ರಭೂಮಿಯ ಫೈಲ್ಗಳು ಬಂದಿದ್ದು ವ್ಹೈ ಐ ಡಿ ಹಳ್ಳಿ ಗ್ರಾಮದ ರುದ್ರಭೂಮಿಯ ಫೈಲ್ ಜಿಲ್ಲಾ ಕಚೇರಿಯಲ್ಲಿ ಉಳಿದಿದೆ ಕಾರಣ ಏನು ಎಂದು ತಿಳಿದಿಲ್ಲ ಎಂದು ತಹಸೀಲ್ದಾರ್ ರವರಿಗೆ ಹೇಳಿದರು.
ಗ್ರಾಮದ ಸಾರ್ವಜನಿಕರಾದ ಬಾಲಚಂದ್ರಚಾರಿ ಮತ್ತು ರಮೇಶ್ ಬಾಬು ಹಾಗೂ ಗ್ರಾಮಸ್ಥರು ಮಾತನಾಡಿ ಈ ಸರ್ಕಾರಿ ಜಮೀನಿನ ಪಾಹಣಿಯಲ್ಲಿ ಸರ್ಕಾರಿ ಗುಂಡು ತೋಪು ಎಂದು ಬರುತ್ತಿದ್ದು. ಸುಮಾರು ವರ್ಷಗಳ ಹಿಂದೆ ಮುಸ್ಲಿಮರಿಗೆ ಹಾಗೂ ಹಿಂದೂಗಳಿಗೆ ಅಕ್ಕಪಕ್ಕದಲ್ಲಿ ರುದ್ರಭೂಮಿಯನ್ನು ಸರ್ಕಾರದಿಂದ ಮಾಡಿಕೊಟ್ಟಿದ್ದಾರೆ. ಆದರೆ ಮುಸ್ಲಿಮರಿಗೆ ರುದ್ರಭೂಮಿ ಇದೆ ಬಂದೋಬಸ್ತ್ ಮಾಡಿಕೊಂಡಿದ್ದಾರೆ.
ಆದರೇ ಹಿಂದುಗಳಿಗೆ ನೀಡಿರುವ ರುದ್ರಭೂಮಿಯ ಜಮೀನಿನಲ್ಲಿ ಸಣ್ಣಪುಟ್ಟ ಜಾತಿಯವರನ್ನು ಎದುರಿಸಿ ಈ ಜಮೀನನ್ನು ಸುಮಾರು ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದಾರೆ ಆದ ಕಾರಣದಿಂದ ಈ ಜಮೀನು ರುದ್ರಭೂಮಿಗೆ ಊರಿನ ಪಕ್ಕದಲ್ಲಿದೆ ಹಾಗೂ ಚೆನ್ನಾಗಿದಯು ಇದೆ ಅದ್ದರಿಂದ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡು ಈ ಜಮೀನಿನಲ್ಲಿ ಸಾರ್ವಜನಿಕ ರುದ್ರಭೂಮಿ ಎಂದು ಫಲಕ ಹಾಕಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾಡ ಕಚೇರಿಯ ಮುಂಭಾಗ ಗ್ರಾಮದ ಯುವಕರು ಎಲ್ಲರೂ ಸೇರಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ನಂದೀಶ್, ರೆವಿನ್ಯೂ ಅಧಿಕಾರಿ ನಾರಾಯಣಪ್ಪ, ನಾಡಕಚೇರಿಯ ಸಿಬ್ಬಂದಿಗಳಾದ ಗರಣಿ ಗ್ರಾಮ ಲೆಕ್ಕಾಧಿಕಾರಿ ರವಿ, ಗ್ರಾಮ ಲೆಕ್ಕಾಧಿಕಾರಿ ತನುಜ, ಗ್ರಾಮ ಸಹಾಯಕರ ನರಸನಾಯಕ, ಊರಿನ ಗ್ರಾಮಸ್ಥರಾದ ಬಾಲಕೃಷ್ಣ ಚಾರಿ, ಗುರೂಜಿ,ಯುವರಾಜ್ ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ