ಬೆಂಗಳೂರು:
ಮುಖ್ಯಮಂತ್ರಿ ಕುಮಾರಸ್ವಾಮಿ ರವರ ಪುತ್ರ ನಿಖಿಲ್ ಕುಮಾರ್ ನಟನೆಯ ‘ಸೀತರಾಮ ಕಲ್ಯಾಣ’ ಸಿನಿಮಾ ಪ್ರೀಮಿಯರ್ ಶೋ ನೋಡಲು ಪಕ್ಷಾತೀತವಾಗಿ ರಾಜಕೀಯ ಪ್ರಮುಖ ನಾಯಕರು ಒಂದೇ ಸ್ಥಳದಲ್ಲಿ ಕಾಣಿಸಿಕೊಂಡದ್ದು ವಿಶೇಷವೆನಿಸಿದೆ.
ಎ. ಹರ್ಷ ನಿರ್ದೇಶನದಲ್ಲಿ ಮೂಡಿಬಂದಿರುವ ಸಿಎಂ ಪುತ್ರ ನಿಖಿಲ್ ಗೌಡ ಮತ್ತು ರಚಿತಾ ರಾಂ ಅಭಿನಯದ ಸೀತಾರಾಮ ಕಲ್ಯಾಣ ಇಂದಿನಿಂದ ತೆರೆಗೆ ಬಂದಿದೆ. ಸಿನಿಮಾದ ಬಿಡುಗಡೆಗೂ ಮುನ್ನಾ ದಿನ ಬೆಂಗಳೂರಿನ ಒರಯಾನ್ ಮಾಲ್ ನಲ್ಲಿ ಗಣ್ಯರಿಗಾಗಿ ಪ್ರೀಮಿಯರ್ ಶೋನಲ್ಲಿ ವಿಶೇಷವಾಗಿ ಪ್ರದರ್ಶಿಸಲಾಯಿತು.
ಈ ಪ್ರೀಮಿಯರ್ ಶೋಗೆ ಸಿಎಂ ಕುಮಾರಸ್ವಾಮಿ ಜೊತೆಗೆ ಸಿದ್ದರಾಮಯ್ಯ, ಜಮೀರ್ ಅಹಮ್ಮದ್, ಡಾ. ಜಿ ಪರಮೇಶ್ವರ್, ಬಿಜೆಪಿ ನಾಯಕ ಈಶ್ವರಪ್ಪ, ಬಿ.ಸಿ ಪಾಟೀಲ್ ಸೇರಿದಂತೆ ರಾಜಕೀಯ ನಾಯಕರ ದಂಡೆ ಆಗಮಿಸಿತ್ತು. ಚಿತ್ರ ವೀಕ್ಷಣೆಗೆ ಬಂದಿದ್ದ ಎಲ್ಲರನ್ನೂ ಸ್ವತಃ ನಿಖಿಲ್ ಕುಮಾರಸ್ವಾಮಿ ಆತ್ಮೀಯವಾಗಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.
ಉಪ ಮುಖ್ಯಮಂತ್ರಿ @DrParameshwara, ಮಾಜಿ ಮುಖ್ಯಮಂತ್ರಿ @siddaramaiah, ಸಚಿವರಾದ @RV_Deshpande, @thekjgeorge, ಜಮೀರ್ ಅಹಮದ್ ಖಾನ್ , ಬಿಜೆಪಿ ಮುಖಂಡರು, ಶಾಸಕರಾದ @KSEBJP ನನ್ನ ಜೊತೆಗೂಡಿ ಸಿನೆಮಾ ವೀಕ್ಷಣೆ ಮಾಡಿದ್ದಕ್ಕೆ ವಂದನೆಗಳು. pic.twitter.com/zGXXl1PH8J
— H D Kumaraswamy (@hd_kumaraswamy) January 24, 2019
ಚಿತ್ರ ವೀಕ್ಷಿಸಿದ ಬಿಜೆಪಿಯ ನಾಯಕ ಕೆ.ಎಸ್. ಈಶ್ವರಪ್ಪ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ‘ಸೀತಾರಾಮ ಕಲ್ಯಾಣ’ ನಿಖಿಲ್ ಕುಮಾರ್ ಪ್ರತಿಭೆಯನ್ನು ಹೊರತಂದಿದೆ. ಸಿನಿಮಾದಲ್ಲಿ ಮನೋರಂಜನೆ ಇದೆ. ಹಾಗೆಯೇ ರೈತರಿಗೆ ಆದರ್ಶವಾಗಿದೆ. ಖಂಡಿತ ಈ ಸಿನಿಮಾ ಜನರಿಗೆ ಆದರ್ಶವಾಗುತ್ತದೆ ಎಂದು ಹೇಳಿದ್ದಾರೆ.
ಸಿಎಂ ಕುಮಾರಸ್ವಾಮಿ ಮಾತನಾಡಿ, ನಿಖಿಲ್ ಅಭಿನಯಕ್ಕೆ 100 ಕ್ಕೆ 100 ಅಂಕ ಕೊಡುತ್ತೇನೆ. ಎಲ್ಲ ರಾಜಕೀಯ ನಾಯಕರು ಪಕ್ಷಾತೀತವಾಗಿ ಸಿನಿಮಾ ನೋಡಿ ಮೆಚ್ಚಿದ್ದಾರೆ ಎಂದು ಹೇಳಿದ್ದಾರೆ.
ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಸ್ಯಾಂಡಲ್‍ವುಡ್ ಯುವರಾಜ್, ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣದ ಸಿನಿಮಾ ಸುಮಾರು 300ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ