ಕಾಯಕದಲ್ಲಿ ಕೈಲಾಸ
ಕಾಣಿರೆಂದರು ಬಸವಣ್ಣರು,
ಅರಿಯದೆ ತತ್ವವ
ಕೈಕಟ್ಟಿ ಕುಳಿತಿವೆ
ದುಡಿವ ಕೈಗಳು
ಪ್ರಕೃತಿಯ ಸೃಷ್ಟಿಯೊಳು
ಮುಳುಗಿವೆ ಎಲ್ಲವೂ
ಕಾಯದೆ ಅನ್ಯರಿಗೆ
ತಮ್ಮದೇ ಕಾಯಕದಲಿ
ತಿಳಿಯದ ಮನುಜ
ತಿದ್ದಿಕೊಳ್ಳದೆ ತನ್ನನು
ತುಳಿದು ನಿಲ್ಲಲೆತ್ನಿಸುತಿರುವ
ಕಾಯಕದ ಮಹತ್ವವನೊದ್ದು
ಬೇಡಿ ತಿನ್ನೋ ಬರವನಟ್ಟಿ
ನೀಡಿ ತಿನ್ನೆಂಬ ವರನುಡಿಗೆ
ದುಡಿಮೆಯೊಂದೆ ದಾರಿಯಲ್ಲವೆ?
ಕಾಣುವರಲ್ಲವೆ ಕೈಲಾಸ…