ತಿಪಟೂರು :
ದೇಶದಲ್ಲಿ 30ರಾಜ್ಯ, 6 ಕೇಂದ್ರಾಡಳಿತ ಪ್ರದೇಶ, 1 ರಾಷ್ಟ್ರಿಯ ರಾಜಧಾನಿ ಭೂ ಪ್ರದೇಶ, ಸಾಕಷ್ಟು ಧರ್ಮ, ಜಾತಿ, ಭಾಷೆ, ಆಚಾರ, ವಿಚಾರ ಸಂಸ್ಕತಿಯನ್ನು ಒಳಗೊಂಡ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುತ್ತದೆ ಭ್ಯವ್ಯ ಗಣತಂತ್ರ ಭಾರತವಾಗಿದೆ ಎಂದು ಉಪವಿಭಾಗಾಧಿಕಾರಿ ಪೂವಿತ ತಿಳಿಸಿದರು.
ನಿಮ್ಮ ಸಂಸ್ಕತಿಯಲ್ಲಿ ಜೀವಿಸು ಅನ್ಯ ಸಂಸ್ಕತಿಯನ್ನು ಪ್ರೀತಿಸಿ, ನಮ್ಮ ಸಂವಿಧಾನದಲ್ಲಿರುವ ನಮ್ಮ ಮೂಲಭೂತ ಕರ್ತವ್ಯಗಳಲ್ಲಿರುವ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಲಾಂಛನಗಳನ್ನು, ಗೌರವಿಸಿ ಭ್ಯವ ಭಾರತವನ್ನು ವಿಶ್ವದಲ್ಲಿ ಅಗ್ರಗಣ್ಯರಾಷ್ಟ್ರವನ್ನಾಗಿ ಮಾಡುವ ಜವಾಬ್ದಾರಿ ನಮ್ಮನಿಮ್ಮಿಲ್ಲೆರ ಮೇಲಿದೆ.
ನಮ್ಮ ರಾಷ್ಟ್ರವು ಗಣರಾಜ್ಯವಾಗಿರಬೇಕಾದರೆ ಅದನ್ನು ನಿರ್ಮಿಸಿದ ಸ್ವಾತಂತ್ರ್ಯ ಹೋರಾಟಗಾರರ ಸೇವೆ ಮಹತ್ವವಾಗಿದ್ದು ಮತ್ತು ನಮ್ಮ ರಾಷ್ಟ್ರಕ್ಕೆ ಬೃಹತ್ ಸಂವಿಧಾನವನ್ನು ನಿರ್ಮಿಸಿದ ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ ಈ ದಿನದ ಗೌರವಸಲ್ಲುತ್ತದೆ. ಈ ಸಂವಿಧಾನದಲ್ಲಿ ದೇಶವನ್ನು ಕಟ್ಟಲು ಕೊಟ್ಟಿರುವ ಮಹತ್ವದ ಕರ್ತವ್ಯ ಮತದಾನ ನಾವು ತಪ್ಪದೇ ಸೂಕ್ತವ್ಯಕ್ತಿಗೆ ದೇಶವನ್ನು ಕಟ್ಟಿದಂತೆಯೇ ಸರಿ. ಆದ್ದರಿಂದ ಸೂಕ್ತ ವ್ಯಕ್ತಿಗೆ ಮತದಾನ ಮಾಡುವ ಮೂಲಕ ದೇಶವನ್ನು ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಕರೆನೀಡಿದ ಅವರು. ತಮ್ಮ ಮಕ್ಕಳನ್ನು ದೇಶಸೇವೆಗೆ ಸದಾ ಸಿದ್ದರಾಗಿರುವಂತೆ ಮಾಡುವುದು ಪೋಷಕರ ಕರ್ತವ್ಯವೆಂದರು.
ಆಂಗ್ಲರ ಹೂಹೆಯನ್ನು ಸುಳ್ಳು ಮಾಡಿದ ಭಾರತೀಯರು:
ನಾವಿಂದು 70ನೇ ಗಣರಾಜ್ಯೋತ್ಸವವನ್ನು ಆರಚಿಸುತ್ತಿದ್ದೇವೆ, ಇದಕ್ಕೆ ಕಾರಣ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಪಾತ್ರ ಮಹತ್ವದ್ದು. ನಮಗೆ 1947-ಆಗಸ್ಟ್-15ರಂದು ಸ್ವಾಂತ್ರ್ಯವನ್ನು ಕೊಟ್ಟಾಗ ಆಂಗ್ಲರು ನಮ್ಮನ್ನು ಭಾಷೆ, ಧರ್ಮ, ಪ್ರಾಂತ್ಯಗಳಮೇಲೆ ದೇಶವು ಚಿತ್ರವಾಗಿ ಹೋಗುತ್ತದೆ ಎಂದು ಹೂಹಿಸಿದ್ದರು. ಆದರೆ ಅವರ ಹೂಹೆಗೂ ನಿಲುಕದಂತೆ ಇಂದು ಹಲವಾರು ಪ್ರಾಂತ್ಯವನ್ನು ಒಗ್ಗೂಡಿಸುವಲ್ಲಿ ಏಕತಾಮೂರ್ತಿ ಸರ್ದಾರ್‍ವಲ್ಲಭಾಯ್ ಪಟೇಲ್‍ಗೆ ಸಲ್ಲಬೇಕು ಎಂದರು.
ಸಂವಿಧಾನವನ್ನು ನಿರ್ಮಿಸಲು ಪ್ರಪಂಚದ ಎಲ್ಲಾ ಸಂವಿಧಾನಗಳಿಂದ ಸೂಕ್ತವಾದ ಅಂಶಗಳನ್ನು ಹೆಕ್ಕಿ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿ ಪ್ರಪಂಚದಲ್ಲಿಯೇ ಉತ್ತಮವಾದ ಲಿಖಿತ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್‍ರವರ ಶ್ರಮವನ್ನು ನಾವು ಮರೆಯಲು ಸಾಧ್ಯವಿಲ್ಲ. ಇಂದು ನಾವು ದೇಶದಲ್ಲಿ ಶಾಂತಿ ಸುವ್ಯವಸ್ಥೆಯಿಂದ ಬಾಳಬೇಕಾದರೆ ನಮ್ಮ ಸೈನಿಕರ ಶ್ರಮ, ತ್ಯಾಗ ಬಲಿದಾನ ಎಷ್ಟು ಮುಖ್ಯವೋ ಅಷ್ಟೇ ನಮ್ಮ ಅನ್ನದಾತ ರೈತರಿಗೆ ನಾವು ಎಷ್ಟು ಕೃತಘ್ಞತೆ ಸಲ್ಲಿಸಿದರು ಸಾಲದು. ಆದ್ದರಿಂದಲೇ ಲಾಲ್ ಬಹದ್ದೂರ್ ಶಾಸ್ತ್ರಿಯವರು ಕರೆಕೊಟ್ಟಂತೆ ನಮ್ಮ ದೇಶಕ್ಕೆ ಜೈ ಜವಾನ್, ಜೈಕಿಸಾನ್ ಜೊತೆಗೆ ಎ.ಪಿ.ಜೆ ಅಬ್ದುಲ್ ಕಲಾಂರ ಜೈ ವಿಜ್ಞಾನ ಸೇರಿದರೆ ನಮ್ಮ ರಾಷ್ಟ್ರ ವಿಶ್ವ ಮಟ್ಟದಲ್ಲಿ ವಿಶ್ವಗುರುವಾಗುತ್ತದೆ ಎಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.
ವಿದ್ಯಾರ್ಥಿಗಳ ಆಕರ್ಷಕ ಪಥಸಂಚನ ಮತ್ತು ಸಾಂಸ್ಕತಿ ಕಾರ್ಯಕ್ರಮಗಳು ಸಭಿಕರನ್ನು ಮನಸೆಳೆದವು.ಹೊರಗೆ ತಳುಕು ಒಳಗೆ ಹುಳುಕು : ಹೊರನೋಟಕ್ಕೆ ಸುಂದರವಾಗಿ ಕಾಣುವ ಕಲ್ಪತರು ಕ್ರೀಡಾಂಗಣ ಒಳಗಡೆ ಮಾತು ಬರಿ ಗುಂಡಿಗಳಿಂದ ಕೂಡಿದ್ದು ಸ್ವಲ್ಪಯಾಮಾರಿದರು ಗುಂಡಿಗೆ ಬೀಳುವಂತಹ ಪರಿಸ್ಥಿತಿಯಿದೆ ಮುಂದಿನ ದಿನಗಳಲ್ಲಾದರು ಇದನ್ನು ಸರಿಪಡಿಸಿ ಸೂಕ್ತ ಕ್ರೀಡಾಂಗಣವಾಗಿ ಮಾಡಬೇಕಾಗಿದೆ.
ಕಾರ್ಯಕ್ರಮದಲ್ಲಿ : ತಾ.ಪಂ ಅಧ್ಯಕ್ಷ ಸುರೇಶ್, ಜಿ.ಪಂ ಸದಸ್ಯ ಜಿ.ನಾರಾಯಣ್, ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಕಾಶ್ ನಗರಸಭೆ ಉಪಾಧ್ಯಕ್ಷೆ ಜಹೆರಾ ಜಬೀನ್, ತಾಲ್ಲೂಕು ದಂಡಾಧಿಕಾರಿ ಆರತಿ, ನಗರಸಭೆ ಆಯುಕ್ತೆ ಮಧು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮದನ್‍ಮೋಹನ್, ಬಿ.ಇ.ಓ ಮಂಗಳಗೌರಮ್ಮ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








