ದಾವಣಗೆರೆ :
ಇಲ್ಲಿನ ಕುಂದುವಾಡ ಕೆರೆಯ ಸಮೀಪದ ನೂತನ ಗಾಜಿನಮನೆಯಲ್ಲಿ ಶನಿವಾರದಿಂದ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಸಣ್ಣ ಕೈಗಾರಿಕೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಚಾಲನೆ ನೀಡಿದರು.ಜಗತ್ತಿಗೆ ಶಾಂತಿ ಸಂದೇಶ ಸಾರಿರುವ 25 ಅಡಿ ಎತ್ತರದ ಮತ್ತು 20 ಅಡಿ ಅಗಲದ sಸಾಂಚಿ ಸ್ತೂಪದ ಹೂವಿನಿಂದ ಅಲಂಕಾರಿತ ಕಲಾಕೃತಿ ಜನಮನ ಸೆಳೆಯಿತು. ಅಲ್ಲದೆ, ಸಿರಿಧಾನ್ಯ ಮತ್ತು ಪಿಒಪಿಯಲ್ಲಿ ನಿರ್ಮಿಸಿದ್ದ ಬಸವಣ್ಣ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳು ಫಲಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿವೆ.
ಇನ್ನೂ ರಂಗೋಲಿಯಲ್ಲಿ ಅರಳಿದ್ದ ಸಿದ್ಧಗಂಗಾ ಶ್ರೀಗಳ ಚಿತ್ರವು ಪ್ರವಾಸಿಗರನ್ನು ಕೈಬಿಸಿಕರೆಯುತ್ತಿದ್ದರೆ, ಗಿಟಾರ್, ಪ್ರೀತಿಯ ಸಂಕೇತದ ಹೃದಯ, ಶಿವಲಿಂಗದ ಹೂವಿನ ಕಲಾಕೃತಿಗಳು, 10 ಬಗೆಯ ವಿವಿಧ ತಳಿಯ 15000 ಗಿಡಗಳನ್ನು ಪ್ಲಾಸ್ಟಿಕ್ ಕುಂಡದಲ್ಲಿ ಬೆಳೆಸಿ ಪ್ರದರ್ಶನಕ್ಕೆ ಇಡಲಾಗಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಸಂಸದೀಯ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್, ಸಂಸದರಾದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ್, ಜಿ ಪಂ ಪ್ರಭಾರ ಅಧ್ಯಕ್ಷೆ ಜೆ.ಸವಿತಾ, ಮಹಾನಗರಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ, ಉಪ ಮಹಾಪೌರರಾದ ಚಮನ್ ಸಾಬ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್, ಜಿ.ಪಂ ಸಿಇಓ ಎಸ್.ಅಶ್ವತಿ, ಎಸಿ ಕುಮಾರಸ್ವಾಮಿ, ತಹಶೀಲ್ದಾರ್ ಸಂತೊಷ್ಕುಮಾರ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ