ದಾವಣಗೆರೆ:
ರೈತರೊಬ್ಬರ ಜಮೀನಿನ ಸರ್ವೆ ನಕ್ಷೆಯನ್ನು ಮೋಜಿಣಿ ಗಣಕಯಂತ್ರದಲ್ಲಿ ಅಳವಡಿಸಲು ಲಂಚ ಸ್ವೀಕರಿಸುತ್ತಿದ್ದ ಚನ್ನಗಿರಿಯ ಲೈಸೆನ್ಸ್ ಸರ್ವೆಯರ್ ಹಾಗೂ ರಹದಾರಿ ಸರ್ವೆಯರ್ಗಳನ್ನು ಎಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಲೈಸೆನ್ಸ್ ಸರ್ವೆಯರ್ ಕೆ.ಓ.ಶಿವಕುಮಾರ್, ರಹದಾರಿ ಸರ್ವೆಯರ್ ಕೆ.ಪಿ.ಪ್ರವೀಣ್ ಕುಂಬಾರ್ ಬಂಧಿತರು. ಇವರು ಚನ್ನಗಿರಿ ತಾಲ್ಲೂಕು ನಲ್ಲೂರು ಗ್ರಾಮದ ಎಲ್.ಜಿ.ಅರುಣ್ ಎಂಬುವರ ಜಮೀನಿನ ಸರ್ವೆ ನಕ್ಷೆಯನ್ನು ಎಸ್ಎಸ್ಎಸ್ಎಲ್ಆರ್ ಮೋಜಿಣಿ ಗಣಕ ಯಂತ್ರದಲ್ಲಿ ಅಳವಡಿಸಲು 8000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ದೂರಿನ ಮೇರೆಗೆ ಕಾರ್ಯಾಚರಣೆಗಿಳಿದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ನಿರೀಕ್ಷಕರಾದ ಬಿ.ನಾಗಪ್ಪ, ಕೆ.ಪಿ.ರವಿಕುಮಾರ್ ಹಾಗೂ ಸಿಬ್ಬಂದಿಗಳು, ದೂರುದಾರರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರೂ ಸರ್ವೆಯರ್ಗಳನ್ನು ದಸ್ತಗಿರಿ ಮಾಡಿದ್ದಾರೆ.