ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ ಕಾರ್ಯಕ್ರಮ

ಸವಣೂರ :

          ಪ್ರತಿಯೊಬ್ಬರ ಬಾಳಿಗೆ ಬೆಳಕು ನೀಡುವ ಕಣ್ಣುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಕಾರ್ಯವನ್ನು ಎಲ್ಲ ಬಡವರಿಗೂ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಡಾ, ಎಪಿಜೆ ಅಬ್ದುಲ್ ಕಲಾಂ ಪ್ರಾಕೃತಿಕ ಚಿಕಿತ್ಸೆ ಹಾಗೂ ಯೋಗ ಕೇಂದ್ರದ ಮುಖ್ಯಸ್ಥರು ಹಾಗೂ ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್‍ಸಾಬ ಬುಡಂದಿ ಹೇಳಿದರು.

       ನಗರದ ತಾಲೂಕ ಆಸ್ಪತ್ರೆಯಲ್ಲಿ ತಾಲೂಕ ವೈಧ್ಯಾಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ,ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ. ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ.ಅಮ್ಮಾ ಸಂಸ್ಥೆ(ರಿ)ಹಿರೇಮುಗದೂರ,ಕರ್ನಾಟಕ ರಾಜ್ಯ ಭೂ ಸಂಪತ್ತು ಸಂರಕ್ಷಣ ಸಮಿತಿ ಸವಣೂರ.ಡಾ, ಎಪಿಜೆ ಅಬ್ದುಲ್ ಕಲಾಂ ಪ್ರಾಕೃತಿಕ ಚಿಕಿತ್ಸೆ ಹಾಗೂ ಯೋಗ ಕೇಂದ್ರ ಹಾವೇರಿ.ಶ್ರೀ ಹಡಪದ ಅಪ್ಪಣ್ಣ ವಿವಿದೊದ್ದೇಶಗಳ ಸಂಘ ಹಾವೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ನೇತ್ರದಾನ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಶಿಬಿರದ ಮಹತ್ವದ ಕುರಿತು ಅವರು ಮಾತನಾಡಿದರು.

        ಸಮಾಜದ ವಿವಿಧ ಸಂಘ ಸಂಸ್ಥೆಗಳು ಈ ರೀತಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಬಡವರ ಎಲ್ಲ ವರ್ಗದ ಜನರ ಆರೋಗ್ಯಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡುತ್ತಿವೆ.ಇಂತಹ ಶಿಬಿರಗಳ ಮೂಲಕ ಸರ್ಕಾರ ಯೋಜನೆಗಳ ಸದುಪಯೋಗಕ್ಕೆ ಸಹಕಾರ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು.

        ಹಳ್ಳಿಯ ಜನರಿಗೆ ಆರೋಗ್ಯದ ಬಗ್ಗೆ ತಿಳುವಳಿಕೆ ಹೆಚ್ಚಾಗಬೇಕಾಗಿದೆ. ಸಮಾಜಮುಖಿ ಕೆಲಸಗಳಿಗೆ ಎಲ್ಲರೂ ಬದ್ದರಾಗಬೇಕು ಎಂದು ಆರೋಗ್ಯದ ಮಹತ್ವ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಹಡಪದ ಅಪ್ಪಣ್ಣ ವಿವಿದ್ಯೋದ್ದೇಶಗಳ ಸಂಘದ ಅಧ್ಯಕ್ಷ ಶಿದ್ಲಿಂಗಪ್ಪ ಅಜ್ಜಣ್ಣನವರ. ಪರಮೇಶಪ್ಪ ಕಾಯಕದ. ಶಿವಮೊಗ್ಗದ ಶಂಕರ ಆಸ್ಪತ್ರೆಯ ಡಾ. ವಿದ್ಯಾಸಾಸ್ತ್ರಿ. ಕಾರ್ಯವೃಂದದವರಾದ ಅರುಣ. ಶೋಭಾ. ದೀಪಾ. ಲಾವಣ್ಯ. ವೆಂಕಟೇಶ್.ಪರಶುರಾಮ.ಅಮ್ಮಾ ಸಂಸ್ಥೆ(ರಿ)ಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಈ ಶಿಬಿರದಲ್ಲಿ 100 ಕ್ಕೂ ಜನರು ಭಾಗಿಯಾಗಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link