ಸಿರುಗುಪ್ಪ:
ಕೇವಲ ಹಣಗಳಿಸುವುದಕ್ಕಾಗಿ ವಿದ್ಯಾಬ್ಯಾಸ ನಡೆಸದೆ ವಿದ್ಯಾರ್ಥಿದೆಸೆಯಲ್ಲಿಯೆ ಎನ್.ಸಿ.ಸಿ.ನಂತಹ ಸೇವ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜ ಸೇವೆಗೆ ಅವಕಾಶವಿರುವ ಐ.ಎ.ಎಸ್. ಐ.ಪಿ.ಎಸ್. ಐ.ಎಫ್.ಎಸ್. ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸರ್ಕಾರಿ ಅಧಿಕಾರಿಗಳಾದಲ್ಲಿ ಸಾಮಾನ್ಯ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಅವಕಾಶ ದೊರೆಯುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಅರುಣ್ ರಂಗರಾಜನ್ ತಿಳಿಸಿದರು
ನಗರದ ಎಸ್.ಇ.ಎಸ್.ಆಂಗ್ಲಮಾಧ್ಯಮ ಶಾಲೆಯಲ್ಲಿ ಸ್ಟಾರ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ಹಾಗೂ ಸ್ಟಾರ್ ಆಫ್ ಬಳ್ಳಾರಿ ಪತ್ರಿಕೆಯ ಸಂಪಾದಕರಾದ ಬಂಗ್ಲೆ ಮಲ್ಲಿಕಾರ್ಜುನರವರ ವತಿಯಿಂದ 70ನೇ ಗಣರಾಜ್ಯೋತ್ಸವ ಅಂಗವಾಗಿ ನಡೆದ ಯೋಧರಿಗೆ ಸನ್ಮಾನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗುರುಗಳು ಮಕ್ಕಳಿಗೆ ಸ್ಪೂರ್ತಿ ನೀಡಿದಲ್ಲಿ ಉನ್ನತ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಬಳ್ಳಾರಿಯಲ್ಲಿ ನಡೆದ ಹಲವು ಅಪಘಾತಗಳಲ್ಲಿ ತಲೆಗೆ ಪೆಟ್ಟುಬಿದ್ದು ಪ್ರಾಣಹೋದಂತಹ ಅನೇಕ ನಿದರ್ಶನಗಳಿದ್ದು, ಇವುಗಳನ್ನು ತಪ್ಪಿಸಲು ಮೊದಲು ಪೊಲೀಸ ಸಿಬ್ಬಂದಿಗೆ ಹೆಲ್ಮೇಟ್ ಹಾಕಿಕೊಳ್ಳುವಂತೆ ಆದೇಶ ನೀಡಿದ್ದು, ಸಿಬ್ಬಂದಿಗಳಿಗಾಗಿ 2ಸಾವಿರ ಹಲ್ಮೇಟ್ಗಳನ್ನು ಒದಗಿಸಲಾಗುತ್ತಿದೆ. ನಗರದದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಕಾನೂನು ಭಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಲ್ಲಿ ಪೊಲೀಸ್ ಇಲಾಖೆಯು ಕ್ರಮ ಕೈಗೊಳ್ಳಲಿದೆ.
ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ದೂರವಾಣಿ ಮೂಲಕ ಸಂಪರ್ಕಿಸಿ ಅಥವಾ ನೇರವಾಗಿ ಕಛೇರಿಗೆ ಆಗಮಿಸಿ ತಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಲ್ಲಿ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಗಡಿ ಯೋಧ ತೆಕ್ಕಲಕೋಟೆ ಶೇಕ್ಸಾಬ್ ಮಾತನಾಡಿ ದೇಶವು 7ಗಡಿಗಳನ್ನು ಹೊಂದಿದ್ದು, ಗಡಿಗಳಲ್ಲಿ ಮಾನವರು ವಾಸಿಸಲು ಯೋಗ್ಯವಿಲ್ಲದ ಹವಾಮಾನ ಪರಿಸ್ಥಿತಿಯಲ್ಲಿಯೂ ಯೋಧರು ತಮ್ಮ ಪ್ರಾಣದ ಹಂಗನ್ನು ತೊರೆದು ಗಡಿಯನ್ನು ಕಾಯುತ್ತಾರೆ. ಯೋಧರಿಗೆ ಯಾವುದೇ ಜಾತಿ, ಧರ್ಮ, ಪ್ರಾಂತ ಭೇದವಿಲ್ಲದೆ ಭಾರತಮಾತೆಯ ಮಕ್ಕಳು ನಾವು ಎಂದು ಹೋರಾಡುತ್ತೇವೆ.
ಆದರೆ ದೇಶದಲ್ಲಿ ಭಾಷೆ, ಪ್ರಾಂತ್ಯ, ಜಾತಿ ಹೆಸರಿನಲ್ಲಿ ನಡೆಸುವ ಸಂಘರ್ಷಗಳನ್ನು ಕಂಡಾಗ ಮನಸ್ಸಿಗೆ ದು:ಖವಾಗುತ್ತದೆ. ಆದ್ದರಿಂದ ರಾಷ್ಟ್ರದ ಎಲ್ಲಾ ಭಾರತೀಯರು ಸಂಪ್ರದಾಯಿಕ ಹಬ್ಬಗಳಂತೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿದಾಗ ಮಾತ್ರ ರಾಷ್ಟ್ರದಲ್ಲಿ ನಾವೆಲ್ಲರೂ ಒಂದೇ ಎನ್ನುವ ಏಕತೆ ಮೂಡುವುದಲ್ಲದೆ,ದೇಶಪ್ರೇಮ ಬೆಳೆಯುತ್ತದೆ. ಪ್ರತಿನಿತ್ಯವೂ ಜೈಹಿಂದ್ ಎಂದು ಸಂಭೋಧಿಸುವ ಮೂಲಕ ಮಾತೃಭೂಮಿಗೆ ನಮನವನ್ನು ಅರ್ಪಿಸಿದಾಗ ಮಾತ್ರ ನಿಜವಾದ ಭಾರತೀಯರಾಗುತ್ತೇವೆಂದು ತಿಳಿಸಿದರು.
ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಹಾಗೂ ಸೇವೆ ಸಲ್ಲಿಸುತ್ತಿರುವ ಯೋಧರಾದ ತೆಕ್ಕಲಕೋಟೆ ಎಮ್ಮಿಗನೂರು ಶೇಕ್ಸಾಬ್, ಶರಣಪ್ಪ, ಆಲಂಬಾಷ, ಕರಿಯಪ್ಪ ಸಣ್ಣಮನಿ ಯವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ವಾಸುದೇವಹೊಳ್ಳ, ಕೋಲಾರ ಗೋಪಿನಾಥ, ಮುರಳಿಪ್ರಾಸದ, ಯಾಳ್ಪಿ ವಲಿಬಾಷ, ಜಿ.ಪಂ.ಸದಸ್ಯೆ ರಾಧಧರಪ್ಪನಾಯಕ, ನಗರಸಭೆ ಅಧ್ಯಕ್ಷೆ ಸವಿತ ಅರುಣಪ್ರತಾಪರೆಡ್ಡಿ, ಬಿ.ಇ.ದೊಡ್ಡಯ್ಯ,ಕೋಡ್ಲೆ ಮಲ್ಲಿಕಾರ್ಜುನ,ಸಿ.ಪಿ.ಐ.ಮೌನೇಶ್ ಮಾಲಿಪಾಟೀಲ್, ,ಪಿ.ಎಸ್.ಐ.ಹೋಸಕ್ಕೆರಪ್ಪ, ಬಿ.ಇ.ಒ. ಪಿ.ಡಿ.ಭಜಂತ್ರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಷಾಶು, ಬಿ.ಸಿ.ಎಂ.ಅಧಿಕಾರಿ ಶ್ಯಾಮಪ್ಪ, ಮುಖಂಡರಾದ ಎಂ.ಎಸ್.ವೆಂಕಟಪ್ಪ, ಬದರಿನಾರಾಯಣ, ಮಲ್ಲನಗೌಡ, ಚಿಟಿಗಿ ಹುಸೇನ್ಬಾಷ, ದರೂರು ಪುರುಷೋತ್ತಮಗೌಡ, ಮೋಕಾ ಮಲ್ಲಯ್ಯ, ವೆಂಕಟರಾಮರೆಡ್ಡಿ, ಗೃಹ ರಕ್ಷಕ ದಳದ ರಾಘವೇಂದ್ರ ವೀರೇಶ,ಬಿ.ಶಂಕರಪ್ಪ,ಸುಜಯ್, ಯರ್ರೆಪ್ಪ ವಕೀಲರು, ಅಮೀನ್ರೆಡ್ಡಿ, ಹಾಗೂ ಕನ್ನಡ ಭಾಷ ವಿಷಯದಲ್ಲಿ 125ಕ್ಕೆ 125ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಅರುಣ ರಂಗರಾಜನ್ ಹಾಗೂ ಗುರುಬಸವ ಮಠದ ಬಸವಭೂಷಣ ಸ್ವಾಮೀಜಿಯವರನ್ನು ಸನ್ಮಾನಿಸಿದರು. ನಂತರ ನಡೆದ ಸಾಂಸ್ಕತಿ ಕಾರ್ಯಕ್ರಮಗಳಲ್ಲಿ ಹಿರಿಯ ಪತ್ರಕರ್ತರಾದ ಬಂಗ್ಲೆ ಮಲ್ಲಿಕಾರ್ಜುನ ದೇಶಭಕ್ತಿಗೀತೆಗಳನ್ನು ಹಾಡಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








