ರಾಷ್ಟ್ರೀಯ ಮತದಾರರ ದಿನಾಚರಣೆ

ತುರುವೇಕೆರೆ:

         ಸಂವಿಧಾನಾತ್ಮಕವಾಗಿ ಪ್ರತಿ ಭಾರತೀಯನಿಗೆ ಹತ್ತು – ಹಲವು ಮಹತ್ವದ ಹಕ್ಕು ಭಾದ್ಯತೆಗಳನ್ನು ನೀಡಿದೆ. ಅದರಲ್ಲಿ ಮತದಾನದ ಹಕ್ಕು ಸರ್ವಶ್ರೇಷ್ಠವಾದ್ದು ಎಂದು ತಹಶೀಲ್ದಾರ್ ನಹೀಂ ಉನ್ನಿಸಾ ತಿಳಿಸಿದರು.

         ತಾಲ್ಲೂಕು ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಜಾಪ್ರಭುತ್ವದಲ್ಲಿ ಉತ್ತಮ ಪ್ರಜಾಪ್ರತಿನಿಧಿಗಳನ್ನು ಆಯ್ಕೆಗೊಳಿಸುವ ಮಹತ್ವದ ಹೊಣೆಗಾರಿಕೆ ಸಾರ್ವಜನಿಕ ಮತದಾರರ ಮೇಲಿದೆ. 18 ರ ವಯೋಮಾನದ ನಂತರ ಎಲ್ಲಾ ಪ್ರಜೆಗಳು ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿನಿಧಿಗಳನ್ನು ಆರಿಸುವ ಸಂವಿಧಾನಾತ್ಮಕ ಹಕ್ಕನ್ನು ಪಡೆದಿರುತ್ತಾರೆ.

         ಪ್ರಸ್ತುತ ದಿನಗಳಲ್ಲಿ ಮತದಾನದ ¨ಬಗೆಗೆ ತಾತ್ಸಾರ, ನಿರ್ಲಕ್ಷ ಭಾವನೆಗಳು ಉಂಟಾಗಿ, ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡವಾರು ಮತದಾನದ ಸಂಖ್ಯೆ ಕ್ಷೀಣಿಸುತ್ತಿದೆ, ಇದು ಆರೋಗ್ಯಕರ ಬೆಳವಣಿಗೆಯಲ್ಲ. ಈ ದೃಷ್ಠಿಯಲ್ಲಿ ಮತದಾರರ ದಿನಾಚರಣೆಯೊಂದಿಗೆ ಸಾರ್ವಜನಿಕರಲ್ಲಿ ಮತದಾನದ ಮಹತ್ವ ಕುರಿತಾಗಿ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

        ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರೌಢಶಾಲೆ ಮುಖ್ಯಶಿಕ್ಷಕರಾದ ಅನಂತ್‍ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ 130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿದೆ. 1949 ರಲ್ಲಿ ಸಂವಿಧಾನಾತ್ಮಕ ಹಕ್ಕುಗಳು ರಚನೆಯಾದರೂ 1950 ರ ಜನವರಿ 25 ರಂದು ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದ ಕಾರಣ ಜನವರಿ 25 ನ್ನು ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮತದಾರರ ದಿನಾಚಾರಣೆಯಾಗಿ ಆಚರಿಸಲಾಗುತ್ತಿದೆ. ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯೊಂದಿಗೆ ಸ್ವತಂತ್ರ ನ್ಯಾಯಾಂಗ, ಸ್ವತಂತ್ರ ಚುನಾವಣಾ ಆಯೋಗಳಿಂದಾಗಿ ಇತರ ದೇಶಗಳಿಗಿಂತ ಭಿನ್ನತೆಯೊಂದಿಗೆ ಅದರದ್ದೇ ಆದ ಮಹತ್ವ ಪಡೆದಿದೆ .ಚುನಾವಣಾ ಆಯೋಗದ ಪ್ರಕಾರ ಯಾರೂ ಮತದಾನದಿಂದ ಹೊರಗುಳಿಯಬಾರದು ಎಂಬ ಕಾರಣದಿಂದ 2011 ರಿಂದ ಆಯೋಗ ಈ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದೆ ಎಂದರು.

      ಇದೇ ಸಂಧರ್ಭದಲ್ಲಿ ನೂತನವಾಗಿ ಸೇರ್ಪಡೆಯಾದ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಸಮಾರಂಭದಲ್ಲಿ ಪ.ಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಉಪತಹಶೀಲ್ದಾರ್ ಸಿದ್ದಗಂಗಯ್ಯ, ಸಿಡಿಪಿಒ ಪುಟ್ಟಸ್ವಾಮಿಗೌಡ, ಬಿಇಓ ಹನುಮಾನಾಯ್ಕ, ಚುನಾವಣಾ ವಿಭಾಗದ ಕಾಂತರಾಜು, ಕಂದಾಯ ಇಲಾಖೆಯ ನವೀನ್ ಕುಮಾರ್, ಶಿವಕುಮಾರ್ ಸೇರಿದಂತೆ ನೂತನ ಮತದಾರರು ಹಾಗು ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link