ರಾಣಿಬೆನ್ನೂರು
ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಆಶ್ರಯದಲ್ಲಿ ಫೆ.16ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ 33ನೇ ವರ್ಷದ ವಾರ್ಷಿಕೋತ್ಸವ ಮತ್ತು ರಾಜ್ಯ ಸರ್ಕಾರಕ್ಕೆ ಪಡಿತರ ವಿತಕರಿಂದ ಕೃತಜ್ಞನಾ ಸಮಾರಂಭ ಹಾಗೂ ರಾಜ್ಯ ಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಪಡಿತರ ವಿತರಕರು ಪಾಲ್ಗೊಳ್ಳಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಡಾ.ಟಿ. ಕೃಷ್ಣಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಮ್ಮ ಕೆಲವೊಂದು ಬೇಡಿಕೆಗಳನ್ನು ಈಡೇರಿಸಿದ ಹಿನ್ನೆಲೆಯಲ್ಲಿ ಕೃತಜ್ಞನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಕೇಂದ್ರ ಆಹಾರ ಇಲಾಖೆಯ ಸಚಿವ ರಾಮವಿಲಾಸ್ ಪಾಸ್ವಾನ್, ರಾಜ್ಯ ಸಚಿವ ಜಮೀರ ಅಹ್ಮದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಇದೇ ಸಮಯದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಮೃತಪಟ್ಟರೆ ಅವರ ಕುಟುಂಬಗಳಿಗೆ ಪ್ರಾಧಿಕಾರ ನೀಡುವುದು, ಬೇರೆ ರಾಜ್ಯಗಳಲ್ಲಿ ನೀಡುತ್ತಿರುವ ಕಮಿಷನ್ ನಮ್ಮ ರಾಜ್ಯದಲ್ಲಿಯೂ ನೀಡುವುದು, ಸಗಟು ಮಳಿಗೆಗಳಿಗೆ ಎಲೆಕ್ಟ್ರಾನಿಕ್ ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸಿ ಸರಿಯಾದ ತೂಕವನ್ನು ಕೊಡಿಸುವುದು ಸೇರಿದಂತೆ ರಾಜ್ಯ ಸರ್ಕಾರಿ ಪಡಿತರ ವಿತರಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಆದ್ದರಿಂದ ಪಡಿತರ ವಿತರಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದರು.
ರಾಜ್ಯ ಸಂಘದ ಸಹಕಾರ್ಯದರ್ಶಿ ಓಮಣ್ಣ ಎನ್, ಖಜಾಂಚಿ ನಟರಾಜ ಟಿ.ಎ., ಸ್ಥಳೀಯ ವಿತರಕರಾದ ರೇವಣೆಪ್ಪ ಗೌಡಶಿವಣ್ಣವರ, ಕರಿಯಪ್ಪ ಸಾಲಗೇರಿ, ಬಸವರಾಜ ಕಂಬಳಿ, ಗುತ್ತೆಪ್ಪ ಅಂಬಲಿ, ಪರಸಪ್ಪ ಹುಲ್ಲತ್ತಿ, ಶಿವಕುಮಾರ ಸಾಲಗೇರಿ, ಎಸ್.ಎಸ್.ಬೆಳವಿಗಿಮಠ, ಮಂಜುನಾಥ ಹಡಗಲಿ, ಮಲ್ಲಿಕಾರ್ಜುನ ಮರಿಯಮ್ಮನವರ, ಶಂಕ್ರಪ್ಪ ಕಾಕಿ, ಮಂಜುನಾಥ ಅಡ್ಮನಿ, ಹನುಮಂತಪ್ಪ ಐರಣಿ, ಸೈಯ್ಯದ ಹಲಗೇರಿ ಸೇರಿದಂತೆ ಇತರರಿದ್ದರು.