ಬೆಂಗಳೂರು
ವಿಧಾನಸೌಧಕ್ಕೆ ತೆಗೆದುಕೊಂಡು ಹೋಗುತ್ತಿದ್ದ 25 ಲಕ್ಷ ರೂಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಪ್ರಕರಣ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಗುತ್ತಿಗೆದಾರರಾದ ಯೋಗೇಶ್ ಬಾಬು, ಜ್ಯೋತಿ ಪ್ರಕಾಶ್, ಉಮೇಶ್, ರಾಜು ಮತ್ತು ಸತೀಶ್ ಅವರಿಂದ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ನೀಡಲು ಹಣ ತೆಗೆದುಕೊಂಡು ಹೋಗುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಹಣ ಪಡೆದಿಪ್ರಕರಣದ ಬೆನ್ನು ಹತ್ತಿದ ಭ್ರಷ್ಟಾಚಾರ ನಿಗ್ರಹದಳ ದಾಖಲೆಸಹಿತ ಗುತ್ತಿಗೆದಾರರನ್ನು ಪತ್ತೆ ಮಾಡಿದೆ. ಅಲ್ಲದೆ ಈ ಗುತ್ತಿಗೆದಾರರಿಂದ ಸಚಿವ ಪುಟ್ಟರಂಗಶೆಟ್ಟಿ ಅವರು ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿರುವುದು ಗೊತ್ತಾಗಿದೆ.
ಹಣ ಕಳುಸಿದವರು ರಸ್ತೆ ಗುತ್ತಿಗೆದಾರರಾಗಿದ್ದು, ಡಾಂಬರೀಕರಣಕ್ಕಾಗಿ ಗುತ್ತಿಗೆ ಪಡೆಯಲು ಸಚಿವರಿಗೆ ತಲಾ 5 ಲಕ್ಷ ರೂ. ಮುಂಗಡ ಹಣ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ಹೇಳಿಕೆಗಳನ್ನು ಆಧರಿಸಿ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಎಸಿಬಿ ನೋಟಿಸ್ ನೀಡುವ ಸಾಧ್ಯತೆಗಳಿವೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತ ಸಚಿವರಾಗಿರುವ ಪುಟ್ಟರಂಗಶೆಟ್ಟಿ ಅವರನ್ನು ಬಂಧಿಸುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








