ಹಾನಗಲ್ಲ :
ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ವಿಶೇಷ ಸಭೆ ನಡೆಯಿತು. 2019-20 ನೇ ಸಾಲಿನ ಸಾಮಾನ್ಯ ಮತ್ತು ಖಾಯಂ ನಿಧಿಯ ವಾರ್ಷಿಕ ಮುಂಗಡ ಪತ್ರದ ಅಂದಾಜು ಪತ್ರಿಕೆಗೆ ಅನುಮೋದನೆ ದೊರೆಯಿತು.
ಲೈಸನ್ಸ್ ಶುಲ್ಕ, ಮಾರುಕಟ್ಟೆ ಶುಲ್ಕ ಮತ್ತಿತರ ಆಧಾಯದ ಒಟ್ಟು 5.28 ಕೋಟಿ ಬಜೆಟ್ ಮಂಡನೆ ಮಾಡಲಾಯಿತು. ಒಂದು ವರ್ಷದಲ್ಲಿ ಅಂದಾಜು ಖರ್ಚುವೆಚ್ಚದ ಬಳಿಕ 2.53 ಕೋಟಿ ಉಳಿತಾಯ ಆವ್ಯವಯ್ಯ ಮಂಡನೆಯಾಯಿತು. ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಇದೇ ಸಂದರ್ಭದಲ್ಲಿ ಸಭೆಯಲ್ಲಿ ಚರ್ಚೆಗಳು ನಡೆದವು.
ಹಾನಗಲ್ಲ, ಅಕ್ಕಿಆಲೂರ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ತಾಲೂಕಿನ ಮಾಸನಕಟ್ಟಿ, ಹನುಮಸಾಗರ ಗ್ರಾಮಗಳಲ್ಲಿ ಒಣಗಿಸುವ ಕಟ್ಟೆಗಳ ನಿರ್ಮಾಣ, ಮಕರವಳ್ಳಿ ಗ್ರಾಮದಲ್ಲಿ ಗೋದಾಮು ನಿರ್ಮಾಣ ಮತ್ತು ಪ್ಯಾಕೇಜ್-3 ರಲ್ಲಿ ಒಟ್ಟು 2.26 ಕೋಟಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತದೆ. 2018-19 ನೇ ಸಾಲಿನ ಕ್ರಿಯಾ ಯೋಜನೆಯಡಿ ಮಂಜೂರಾದ ಈ ಕಾಮಗಾರಿಗಳು ಅನುಮೋದನೆ ಹಂತದಲ್ಲಿವೆ ಎಂದು ಕಾರ್ಯದರ್ಶಿ ಬಸವರಾಜ ಪರಮಶೆಟ್ಟಿ ಸಭೆಯ ಗಮನಕ್ಕೆ ತಂದರು.
ಪೈಪೋಟಿ ಭರದಲ್ಲಿ ಕಾಮಗಾರಿಯ ಟೆಂಡರ್ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಗುತ್ತಿಗೆ ಹಿಡಿಯುವ ಗುತ್ತಿಗೆದಾರರ ಗುಣಮಟ್ಟದ ಕಾಮಗಾರಿಯ ಬಗ್ಗೆ ಗಮನ ನೀಡಬೇಕು, ಕಳಪೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಸದಸ್ಯ ಶಿವಯೋಗಿ ವಡೆಯರ ಸೂಚನೆ ನಿಡಿದರು.
ಎಪಿಎಂಸಿ ಅಧ್ಯಕ್ಷ ಶೇಖಪ್ಪ ಮಹರಾಜಪೇಟೆ ಅಧ್ಯಕ್ಷೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಎಸ್.ಎಸ್.ಪಸಾರದ, ಸದಸ್ಯರಾದ ಜಿ.ಟಿ.ಕೋರಿ, ಎನ್.ಸಿ.ಶಿವಣ್ಣನವರ, ರಾಮಣ್ಣ ಮಾದಪ್ಪನವರ, ಕೆ.ವೈ.ಲಮಾಣಿ, ಎಸ್.ಬಿ.ವಡೆಯರ, ಎಸ್.ಬಿ.ಬಂಗಾರೆರ, ಆರ್.ಕೆ.ಪಟ್ಟಣದ, ಎಚ್.ಬಿ.ಗಂಜಿಗಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.