ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಹೆಣ್ಣು ಭ್ರೂಣ ಪತ್ತೆ ಆರೋಪ : ಆರೋಗ್ಯಾಧಿಕಾರಿಗಳಿಂದ ವಿಚಾರಣೆ

ಚಳ್ಳಕೆರೆ

        ತಾಲ್ಲೂಕಿನ ವಿಶ್ವೇಶ್ವರಪುರ ಗ್ರಾಮದ ಗೌರಮ್ಮ(24) ಎಂಬ ಮಹಿಳೆಯ ಗರ್ಭದಲ್ಲಿ ಹೆಣ್ಣು ಮಗುವಿನ ಭ್ರೂಣವಿದ್ದು ಈ ಬಗ್ಗೆ ಖಾಸಗಿ ಆಸ್ಪತ್ರೆಯ ವೈದ್ಯರು ಭ್ರೂಣವನ್ನು ಚಿಕಿತ್ಸೆ ಮೂಲಕ ಕರಗಿಸುವ ಯತ್ನದಲ್ಲಿದ್ದಾಗ ಗೌರಮ್ಮರ ಸಂಬಂಧಿಕರು ಹಾಗೂ ಸಾರ್ವಜನಿಕರ ವಿರೋಧ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಭ್ರೂಣವನ್ನು ಕರಗಿಸುವ ಯತ್ನವನ್ನು ಕೈಬಿಟ್ಟ ಘಟನೆ ನಡೆದಿದೆ.

        ನಗರದ ಲಕ್ಷ್ಮಿಶ್ರೀನಿವಾಸ್ ನರ್ಸಿಂಗ್ ಹೋಂ ಖಾಸಗಿ ಆಸ್ಪತ್ರೆಯಲ್ಲಿ ಗೌರಮ್ಮ ಎಂಬ ಮಹಿಳೆ ಜ.29ರಂದು ಗರ್ಭಿಣಿ ಹಿನ್ನೆಲೆಯಲ್ಲಿ ಪರೀಕ್ಷೆ ಬಂದಿದ್ದು, ಆಗ ಆಸ್ಪತ್ರೆಯ ಸಿಬ್ಬಂದಿ ಈಕೆಯನ್ನು ಸ್ಕ್ಯಾನಿಂಗ್ ಮಾಡಿ ಹೆಣ್ಣು ಭ್ರೂಣ ಇರುವುದಾಗಿ ತಿಳಿಸಿದ್ಧಾರೆ ಎಂದು ಆರೋಪಿಸಲಾಗಿದೆ. ಗೌರಮ್ಮಗೆ ಈಗಾಗಲೇ ಎರಡು ಮಕ್ಕಳಿದ್ದು, ಇದು ಮೂರನೇ ಬಾರಿ ಗರ್ಭಿಣಿ ಯಾಗಿದ್ದಳು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿಸಿದ ಕೆಲವರು ಖಾಸಗಿ ಆಸ್ಪತ್ರೆಗೆ ದಾವಿಸಿ ವೈದ್ಯರು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ಧಾರೆ.

        ಕೂಡಲೇ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿ ನಿತೀಶ್ ಮತ್ತು ಪಿಸಿಪಿಎನ್‍ಡಿಟಿ ತಂಡ ಖಾಸಗಿ ಆಸ್ಪತ್ರೆಗೆ ದಾವಿಸಿ ಆಸ್ಪತ್ರೆಯ ಸ್ಕ್ಯಾನಿಂಗ್ ರೂಂನಲ್ಲಿ ವಿಚಾರಣೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಗರ್ಭಿಣಿ ಮಹಿಳೆಯನ್ನು ಸಾರ್ವಜನಿಕರ ಮತ್ತು ವೈದ್ಯರ ಸಹಾಯದಿಂದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಈ ಬಗ್ಗೆ ಗೌರಮ್ಮಳನಿಂದ ಸಂಪೂರ್ಣ ಮಾಹಿತಿ ಪಡೆದಿದ್ಧಾರೆ. ಇಲ್ಲಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿ ಗೌರಮ್ಮಳ ಭ್ರೂರ್ಣ ಪತ್ತೆ ಮಾಡಿದ ಆಸ್ಪತ್ರೆಯ ಸ್ಕ್ಯಾನಿಂಗ್ ಸಿಬ್ಬಂದಿ ಹಾಗೂ ವೈದ್ಯರ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾ ವೈಧ್ಯಾಧಿಕಾರಿಗಳು ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link