ಹೊಸದುರ್ಗ:
ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ತೋಳಚೇನಹಳ್ಳಿಯಲ್ಲಿ ನಾಮಕರಣ ಕಾರ್ಯಕ್ರಮದಲ್ಲಿ ಊಟದ ಸಮಯದಲ್ಲಿ ಕಲುಷಿತ ನೀರು ಕುಡಿದು ಸುಮಾರು 80 ಕ್ಕೂ ಹೆಚ್ಚು ಮಂದಿ ಅಸ್ವಸ್ಧರಾಗಿ ಹೊಸದುರ್ಗ ಹಾಗೂ ಶ್ರೀರಾಂಪುರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಭಾನುವಾರ ರಾತ್ರಿ ನಡೆದಿತ್ತು.
ಈ ವಿಷಯ ತಿಳಿದ ತಕ್ಷಣ ಹೊಸದುರ್ಗ ತಾಲ್ಲೂಕಿನ ವೈಧ್ಯಧಿಕಾರಿ ಚಂದ್ರಶೇಖರ್ ಕಂಬಳಿಮಠ್ ಮತ್ತು ತಮ್ಮ ಸಿಬ್ಬಂದಿ ವರ್ಗದವರು ಕೂಡಿ ರಾತ್ರೋ-ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಲ್ಲೇ ಮೊಕ್ಕಂ ಹೂಡಿದ್ದಾರೆ.ನಂತರ ಪತ್ರಿಕೆಯೊಂದಿಗೆ ಮಾತನಾಡಿದ ತಾಲ್ಲೂಕು ವೈಧ್ಯಧಿಕಾರಿ ಊಟ ಮಾಡಿದವರಿಗೆಲ್ಲಾ ಅದೇ ದಿನ ರಾತ್ರಿಯಿಂದ ಹೋಟ್ಟೆನೋವು,ವಾಂತಿ ಹಾಗೂ ಬೇದಿ ಕಾಣಿಸಿಕೊಂಡಿದೆ.ಕೂಡಲೆ ಅವರುಗಳನ್ನು ಸಮೀಪದ ಶ್ರೀರಾಂಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ದಾಖಲಿಸಿದ್ದೇವೆ.ಊಟದಿಂದ ಯಾವುದೇ ಪರಿಣಾಮ ಬೀರಿರುವುದಿಲ್ಲಾ ಈ ಘಟನೆ ಹಾಗಿರುವುದಕ್ಕೆ ಕಲುಷಿತ ನೀರು ಕಾರಣ ಎಂದು ಹೇಳಿದರು.
ಗ್ರಾಮದಲ್ಲಿ ತುರ್ತು ಚಿಕೆತ್ಸಾ ಕೇಂದ್ರ ತೆರೆಯಲಾಗಿದೆ. ನೀರಿನ ಮಾದರಿ ಸಂಗ್ರಹಿಸಲಾಗಿದೆ. ಮಲದ ಮಾದರಿ ಸಂಗ್ರಹಿಸಲಾಗಿದೆ. ಗ್ರಾಮದ ಪ್ರತಿಯೊಂದು ಮನೆಯಲ್ಲಿ ವಾಂತಿ ಭೇದಿ ಸಮೀಕ್ಷೆ ನಡೆಸಲಾಗಿದೆ. ಪರಿಸರ ಸ್ವಚ್ಚತೆಗೆ ಗ್ರಾಮ ಪಂಚಾಯಿತಿಗೆ ಪತ್ರ ಬರೆಯಲಾಗಿದೆ. ನೀರಿನ ಟ್ಯಾಂಕರ ತೊಳೆಸಿ ಕ್ಲೋರಿವೇಷನ್ ಮಾಡಿಸಲಾಗಿದೆ. ಗ್ರಾಮದಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಲಾಗಿದೆ.ಸಧ್ಯಕ್ಕೆ ಅಡುಗೆ ಸಾಂಬರ್ ಪರೀಕ್ಷೆಗೆ ತೆಗೆದುಕೊಂಡಿದ್ದೇವೆ. ಗ್ರಾಮದಲ್ಲಿ ಪ್ರಖರತೆ ತೀರ್ವವಾಗಿ ಕಡಿಮೆಯಾಗಿದೆ ಎಂದು ಹೇಳಿದರು.ಇದೇ ವೇಳೆ ಸ್ಥಳಕ್ಕೆ ಡಿಎಚ್‍ಓ ಪಾಲಕ್ಷ ಭೇಟಿ ನೀಡಿ ಪರಿಶೀಲಿಸಿದರು. ವಿರೇಂದ್ರ ಪಾಟೀಲ್, ಸಿದ್ದರಾಮ ಸ್ವಾಮಿಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ