ದಾವಣಗೆರೆ:
ಮಡಿವಾಳ ಸಮುದಾಯದನ್ನು ಪರಿಶಿಷ್ಟ ಜಾತಿಗೆ ಸೇರಿಸುವ ನಿಟ್ಟಿನಲ್ಲಿ ಸಮುದಾಯದ ರಾಜ್ಯದ ಎಲ್ಲಾ ಮುಖಂಡರೊಂದಿಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, ಉಭಯತರು ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಚಿತ್ರದುರ್ಗದ ಶ್ರೀ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಹೇಳಿದರು.
ದಾವಣಗೆರೆಯ ವಿನೋಬಾ ನಗರದಲ್ಲಿ ಗುರುವಾರ ಜಿಲ್ಲಾ ಮಡಿವಾಳ ಮಾಚಿದೇವ ಸಂಘ, ಮಡಿಕಟ್ಟೆ ಯುವಕರ ಸಂಘ ಹಾಗೂ ಎಲ್ಲಾ ತಾಲೂಕು ಸಂಘಗಳ ಸಹಯೋಗದಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಜನಜಾಗೃತಿ ಬೈಕ್ ರ್ಯಾಲಿಯನ್ನು ಜಿಲ್ಲಾಧ್ಯಕ್ಷ ಎಂ.ಎನ್.ಸತೀಶ್‍ಅವರಿಗೆ ಮಾಚಿದೇವರ ಧ್ವಜ ಹಸ್ತಾಂತರ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಮಡಿವಾಳ ಸಮುದಾಯವು ಎಲ್ಲಾ ಕ್ಷೇತ್ರಗಳಲ್ಲೂ ತೀರಾ ಹಿಂದುಳಿದಿದ್ದು, ಈ ನಿಟ್ಟಿನಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಸೇರಿಸಬೇಕು. ಮಾಚಿದೇವರ ಅಭಿವೃದ್ದಿ ನಿಗಮ ಸ್ಥಾಪಿಸಿ ಸಮುದಾಯದ ಅಭಿವೃದ್ದಿಗೆ ಶ್ರಮಿಸಬೇಕೆಂದು ಮನವಿ ಮಾಡಲಾಗಿದೆ. ಈ ಕುರಿತಂತೆ ಫೆಬ್ರವರಿ 1ರಂದು ಇಲ್ಲವೇ ಬಜೆಟ್ ಮಂಡನೆ ಅವಧಿಯಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿ ಉಭಯತರು ತಿಳಿಸಿದ್ದಾರೆ. ಅದಕ್ಕೆ ತಕ್ಕಂತೆ ಪ್ರಕ್ರಿಯೆಗಳು ಆರಂಭಗೊಂಡಿವೆ ಎಂದು ಶ್ರೀಗಳು ನುಡಿದರು.
ವಚನ ಸಂರಕ್ಷಕ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ಬಂಧುಗಳು ಅಂದು ತಮ್ಮ ಅಂಗಡಿ ಮುಂಗಟ್ಟು ಹಾಗೂ ಮಡಿಕಟ್ಟೆಗಳಲ್ಲಿ ಕೆಲಸ ಸ್ಥಗಿತಗೊಳಿಸಿ, ಕಾರ್ಯಕ್ರಮಕ್ಕೆ ಹಾಜರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.
ಬೈಕ್‍ರ್ಯಾಲಿಯು ವಿನೋಬಾ ನಗರದ ಮಾಚಿದೇವ ಸಮುದಾಯುಭವನದಿಂದ ರಾಮ್ ಅಂಡ್‍ಕೋ ಸರ್ಕಲ್, ಎವಿಕೆ ರಸ್ತೆ, ಹದಡಿರಸ್ತೆ, ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗದಿಂದ ನಿಟುವಳ್ಳಿ ರಸ್ತೆ, ದುರ್ಗಾಂಬಿಕ ದೇವಸ್ಥಾನ, ಇಎಸ್‍ಐ ಆಸ್ಪತ್ರೆ ರಸ್ತೆ, ಡಾಂಗೇಪಾರ್ಕ್, ಭಗತ್‍ಸಿಂಗ್ ನಗರ ಹಾಗೂ ಕೆಟಿಜೆ ನಗರದ ಮುಖ್ಯ ರಸ್ತೆಯಲ್ಲಿಯಲ್ಲಿ ಸಾಗಿ, ಜಯದೇವ ವೃತ್ತ, ಅರಸು ಕ್ರಾಸ್‍ನಿಂದ ಪಾಲಿಕೆ ಮುಂಭಾಗದಲ್ಲಿ ಸಾಗಿ, ಅರುಣಾ ಚಿತ್ರಮಂದಿರ, (ಕಿತ್ತೂರು ರಾಣಿ ಚೆನ್ನಮ್ಮ ವೃತ್ತ)ದಿಂದ ಚೆಲುವಾದಿ ಕೇರಿ ಮಾರ್ಗವಾಗಿ ವೀರ ಮದಕರಿ ನಾಯಕ ವೃತ್ತ, (ಹೊಂಡದ ಸರ್ಕಲ್), ಶಿವಾಲಿ ಟಾಕೀಸ್ ರಸ್ತೆ, ಹೊಸ ಕೋರ್ಟ್ ಮುಂಭಾಗ, ಪಿ.ಬಿ.ರಸ್ತೆ ಮಾರ್ಗವಾಗಿ ವಿನೋಭಾನಗರದ 2ನೇ ಮುಖ್ಯರಸ್ತೆಯಲ್ಲಿ ಸಾಗಿ ರೆಡ್ಡಿ ಬಿಲ್ಡಿಂಗ್ ವೃತ್ತದಿಂದ ಡಿಸಿ ಸರ್ಕಲ್ (ನ್ಯೂ ಗಡಿಯಾರ ವೃತ್ತ) ನಿಜಲಿಂಗಪ್ಪ ಬಡಾವಣೆ, ಲಕ್ಷ್ಮೀ ಫ್ಲೋರ್‍ಮಿಲ್, ಶಾಮನೂರು ರಸ್ತೆ, ಬಾಟಲಿ ಬಿಲ್ಡಿಂಗ್ ಮುಂಭಾಗದಿಂದ ಬಿಐಇಟಿ ಕಾಲೇಜು ರಸ್ತೆ, ಹಳೇ ಆರ್‍ಟಿಓ ರಸ್ತೆ, ಬಾಪೂಜಿ ರಸ್ತೆ, ಶ್ರೀನಿವಾಸ ಕಾಸಲ್ ಶ್ರೇಷ್ಠಿ ಉದ್ಯಾನವನ, ಶಾಮನೂರು ರಸ್ತೆ ಮೂಲಕ ಎಂಸಿಸಿ ಎ ಬ್ಲಾಕ್‍ನಲ್ಲಿ ಸಾಗಿ ವಿನೋಭಾ ನಗರದದ ಮೂಲಕ ಸಮುದಾಯ ಭವನಕ್ಕೆ ಬಂದು ಮುಕ್ತಾಯಗೊಂಡಿತು.
ಬೈಕ್‍ರ್ಯಾಲಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಎನ್.ಸತೀಶ್, ಪ್ರಧಾನ ಕಾರ್ಯದರ್ಶಿ ಎಂ.ನಾಗೇಂದ್ರಪ್ಪ, ಕಾರ್ಯಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯ ಹೆಚ್.ಜಿ.ಉಮೇಶ್, ಉಪಾಧ್ಯಕ್ಷರಾದ ಪಿ.ಮಂಜುನಾಥ್, ಡೈಮಂಡ್ ಮಂಜುನಾಥ್, ಖಜಾಂಚಿ ಜಿ.ವಿಜಯಕುಮಾರ್ ಸಂಘಟನಾ ಕಾರ್ಯದರ್ಶಿ ಸುರೇಶ್ ಎಂ. ಕೋಗುಂಡೆ, ಅಜ್ಜಯ್ಯ, ಪತ್ರಕರ್ತ ಹಾಗೂ ನಿದೇರ್ಶಕ ಎಂ.ವೈ.ಸತೀಶ್, ಬಾತಿ ಶಂಕರ್, ಎಂ.ರುದ್ರೇಶ್, ಸಿ.ಗುಡ್ಡಪ್ಪ, ಎಂ.ಸುಭಾಷ್, ಫಕ್ಕೀರಸ್ವಾಮಿ, ಕೆ.ಬಸವರಾಜ್, ಪರಶುರಾಮ, ಮಡಿಕಟ್ಟೆಯ ಅಡಿವೆಪ್ಪ, ರವಿ, ಬಸವರಾಜ, ರವಿಕುಮಾರ್ ರಾಜು, ತಿಮ್ಮಣ್ಣ, ಮಾಲತೇಶ್, ಸಿದ್ದೇಶ್, ಪೂಜಾರ್ ಅಂಜಿನಪ್ಪ, ಕಿಶೋರ್‍ಕುವiರ್, ಲಿಂಗರಾಜು ಅಜೇಯ್ ಸೇರಿದಂತೆ ನೂರಾರು ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








