ಹಾವೇರಿ :
ಕೇಂದ್ರ ಸರ್ಕಾರ ಮಂಡಿಸಿದ ಮಧ್ಯಂತರ ಮುಂಗಡ ಪತ್ರ ಮಂಡನೆ (ಬಜೆಟ್)ರೈತ ಹಾಗೂ ಕಾರ್ಮಿಕರ ವಿರೋಧಿಯಾಗಿದೆ ಎಂದು ಕಾರ್ಮಿಕ ಮುಖಂಡ ವಿನಯಕ ಕುರುಬರ ಹೇಳಿದ್ದಾರೆ. ಪತ್ರಿಕೆಯ ಜೊತೆ ಮಾತನಾಡಿದ ಅವರು ಕೃಷಿ ಪ್ರಧಾನವಾದ ಭಾರತದಲ್ಲಿ ರೈತರಿಗೆ ಅನುಕೂಲಕರವಾದ ಸ್ವಾಮಿನಾಥನ್ ಆಯೋಗ ಜಾರಿಗೆ ಪ್ರಯತ್ನವಿಲ್ಲದೆ ರೈತರ ನ್ಯಾಯಯುತ ಬದುಕಿಗೆ ಇದರಲ್ಲಿ ಕಾಣುಸುತ್ತಿಲ್ಲ.
ದುಡಿಯುವ ವರ್ಗದ ಜನರು ತಮ್ಮ ಬೇಡಿಕೆಗಳ ಇಡೇರಿಕೆಗಳಿಗಾಗಿ ದೇಶದ್ಯಾಂತಹ ಚಳುವಳಿ ಮಾಡಿದರೂ ಅವರ ಬೇಡಿಕೆ ಇಡೇರಿಲ್ಲ. ಶ್ರಮಿಕರಿಗೆ ಉತ್ತಮ ಯೋಜನೆಗಳನ್ನು ಘೋಷಿಸದೇ ಕಾರ್ಮಿಕರಿಗೆ ಪೂರಕ ಬಜೆಟ್‍ವಾಗಿಲ್ಲ ಎಂದು ಪ್ರಕಟಣೆ ತಿಳಿಸಿದ್ದಾರೆ.