ಬೆಂಗಳೂರು:
ಶಾಲಾ ವಾಹನಗಳಿಗೆ ಮಹಿಳಾ ಚಾಲಕರು ಹಾಗೆಯೇ ಮಹಿಳಾ ಸಹಾಯಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಪ್ರಸ್ತಾವನೆ ಮುಂದಿಟ್ಟಿದ್ದಾರೆ.
ಶಾಲಾ ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಚಾಲಕರನ್ನು ನೇಮಕ ಮಾಡುವ ಕುರಿತು ಕೇಂದ್ರ ಸರ್ಕಾರ ಆಲೋಚಿಸಿದೆ.ಇಲಾಖೆಯಲ್ಲಿ ಈ ಕುರಿತು ಚರ್ಚೆ ಈಗಾಗಲೇ ಆರಂಭವಾಗಿದ್ದು, ಇದಕ್ಕೆ ಪರ ವಿರೋಧ ಎರಡೂ ವ್ಯಕ್ತವಾಗಿದೆ.
ಬೆಳೆಯುತ್ತಿರುವ ಮಕ್ಕಳಲ್ಲಿ ಆತಂಕ ಹೋಗಲಾಡಿಸಿ, ಸಮಾಜದ ಬಗ್ಗೆ ಉತ್ತಮ ಭಾವನೆ ಬರುವಂತೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ದೇಶಾದ್ಯಂತ ಮಕ್ಕಳು ಮನೆಯಿಂದ ಹೊರಗಡೆ ಕಾಲಿಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಇದೊಂದು ಉಪಾಯವನ್ನು ಇಲಾಖೆ ಮಾಡಿದೆ.
ಶಾಲೆಗಳಿಗೆ ಪ್ರಸ್ತುತ ಚಾಲಕರ ಕೊರತೆ ಎದುರಾಗಿದೆ. ಹಾಗಿರುವಾಗ ಮಹಿಳಾ ಚಾಲಕರನ್ನು ನೇಮಿಸುವುದು ಎಂದರೆ ಸುಲಭದ ಮಾತಲ್ಲ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
