ಕನ್ನಡ ಸಾಹಿತ್ಯ ಸಮ್ಮೇಳನ

ರಟ್ಟೀಹಳ್ಳಿ 

       ಶ್ರೀ ಕದಂಬೇಶ್ವರ ನಗರ, ವರಕವಿ ಸರ್ವಜ್ಞ ವೇದಿಕೆ.ಕನ್ನಡ ನಾಡು ನುಡಿ ಬಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದನ್ನು ಉಳಿಸಿ ಬೆಳೆಸುವುದು ನಮ್ಮೇಲ್ಲರ ಕರ್ತವ್ಯೆವಾಗಿದೆ, ಕನ್ನಡಿಗರು ಧುರಾಭಿಮಾನಿಗಳಾಗದೆ ಸ್ವಾಭಿಮಾನಿಗಳಾಗುವುದು ಅತ್ಯವಶ್ಯವಾಗಿದೆ ಎಂದು ಶಾಸಕ ಬಿಸಿ ಪಾಟೀಲ್ ಅಭಿಪ್ರಾಯ ವ್ಯೆಕ್ತ ಪಡಿಸಿದರು.

       ಇಲ್ಲಿನ ಕಬ್ಬಿಣಕಂತಿ ಮಠದ ಆವರಣದಲ್ಲಿ ಜರುಗಿದ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಮಧ್ಯ ಕರ್ನಾಟಕದಲ್ಲಿ ಕನ್ನಡ ಸಂಪತ್ ಭರಿತವಾಗಿದ್ದು ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿ ಹಾಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿದ್ದು ಕನ್ನಡಿಗರು ಎದೆಯುಬ್ಬಿಸಿವಂತಾಗಿದೆ ಎಂದರು.

      ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷ ಸ್ಥಾನಕ್ಕೆ ಅತ್ಯುನ್ನತ ಸ್ಥಾನ ಹೊಂದುವ ಸರಳ ವ್ಯೆಕ್ತಿತ್ವ. ಸರಳ ಸಜ್ಜನಿಕೆ ವ್ಯೆಕ್ತಿತ್ವ, ಸಾಮಾಜಿಕ ಕಳಕಳಿ ಉಳ್ಳವಾರಾಗಿದ್ದು, ವರಕವಿ ಸರ್ವಜ್ಞನನ ಬಗ್ಗೆ ಅಪಾರ ಜ್ಞಾನ ಹೊಂದಿದ್ದು ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕ್ರುತ ಹ.ಮೂ ತಳವಾರ ಅವರ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಎಲ್ಲರ ಮೆಚ್ಚುಗಿಗೆ ಪಾತ್ರವಾಗಿದೆ ಎಂದು ಅಭಿಪ್ರಾಯ ವ್ಯೆಕ್ತ ಪಡಿಸಿದರು.

       ರಟ್ಟೀಹಳ್ಳಿ ನೂತನ ತಾಲೂಕು ಅನೇಕ ನಿರಾವರಿ ಯೋಜನೆಗಳ ಬೆಡಿಕೆ ಇಟ್ಟಿದ್ದು ಸರ್ವಜ್ಞ ಪ್ರಾಧಿಕಾರಕ್ಕೆ 50.ಕೋಟಿ ರೂ.ಮದಗದ ಕೆರೆ ಹಾಗೂ ಭಗವತಿ ಕೆರೆ ಅಭಿವೃದ್ದಿ ಪಡಿಸುವ ಅನೇಕ ಯೋಜನೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ಕಾರ್ಯಗತಗೋಳಿಸಲು ಪ್ರಾಮಾಣಿಕ ಪ್ರಯತ್ನಿಸುತ್ತೇನೆ ಎಂದು ಹೇಳೀದರು.

ಮಾಜಿ ಮುಖ್ಯ ಸಚೇತಕ ಡಿ.ಎಂ ಸಾಲಿ ಮಾತನಾಡಿ ಸಾಹಿತಿಗಳು ಚಿಂತಕರು ಲೇಖಕರು ಅವರ ಚಿಂತನೆಗಳ ಮೂಲಕ ಸಾಹಿತ್ಯಕ್ಕೆ ಅವರ ಸೇವೆ ಶ್ಲಾಘನೀಯ ಎಂದರು. ಕನ್ನಡ ನಾಡು ನುಡಿ ಭಾಷೆಗಳ ಮೂಲಕ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಕಾರಣ ಅದನ್ನು ಉಳಿಸಿ ಬೆಳಸಿಕೋಳ್ಳುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು.

          ಪಡುವಂತಾಗಿದೆ. ಲೇಖಕರು, ಸಾಹಿತಿಗಳು ಹಾಗೂ ಮಾಧ್ಯಮಗಳು ತಮ್ಮ ಸಾಹಿತ್ಯದ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವಂತವರಾಗಿದ್ದು ಪ್ರಸ್ತುತ ದಿನಗಳಲ್ಲಿ ಅನೇಕ ಜ್ವಲಂತ ಸಮಸ್ಯಗಳನ್ನು ಎದುರಿಸುತ್ತಿದ್ದು ಅದನ್ನು ತಮ್ಮ
ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ತಿಪ್ಪಾಯಿಕೊಪ್ಪ ಮಠದ ಉತ್ತರಾಧಿಕಾರಿ ಶ್ರೀ ಮಹಾಂತ ಮಂದಾರ ಮಹಾಸ್ವಾಮಿಗಳು, ಕಾರ್ಯಕ್ರಮದ ಸಧ್ಯಕ್ಷತೆಯನ್ನು ಮಾಜಿ ಶಾಸಕ ಬಿ.ಹೆಚ್ ಬನ್ನಿಕೋಡ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ ಕರಿಣ್ಣನವರ, ತಾ.ಪಂ ಅಧ್ಯಕ್ಷ ಹೇಮಣ್ಣ ಮುದರಡ್ಡೇರ, ಕರ್ನಾಟಕ ಕೃಷಿ ತಾಲೂಕಾ ಕ.ಸಾ.ಪ ಅಧ್ಯಕ್ಷ ಸೋಮೇಶ್ವರ ಮೇಸ್ತ, ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ ಬನ್ನಿಕೋಡ, ರಾಮು ಮುದಿಗೌಡ್ರ, ಆರ್.ಎನ್ ಗಂಗೋಳ, ತಾಲೂಕ ಪಂಚಾಯತ ಸದಸ್ಯ ಮಹೂಬಸಾಬ ಮುಲ್ಲಾ, ಪಿ.ಡಿ ಬಸನಗೌಡ್ರ, ಶಂಭಣ್ಣಗೋಳಪ್ಪನವರ, ನಿಂಗಪ್ಪ ಚಳಗೇರಿ ಮುಂತಾದವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link