ತುಮಕೂರು
ತುಮಕೂರು ನಗರದ ಸಿದ್ದಗಂಗಾ ಕಾಂಪ್ಲೆಕ್ಸ್‍ನಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಕಾಪೋರೇಟರ್ ಗಿರಿಜಾ ಧನಿಯಾಕುಮಾರ್ ಉದ್ಘಾಟನೆ ಮಾಡಿದರು.
ನಗರದ ಸಿದ್ದಗಂಗಾ ಕಾಂಪ್ಲೆಕ್ಸ್‍ನಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಆರಂಭಿಸಿದ್ದು, ಸಿದ್ದಗಂಗಾ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಎದುರು ಜನೌಷಧಿ ಕೇಂದ್ರವನ್ನು ಆರಂಭಿಸಿದ್ದರಿಂದ ಜನರಿಗೆ ಅನುಕೂಲವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯೋಜನೆಯಡಿಯಲ್ಲಿ ಜನೌಷಧಿ ಕೇಂದ್ರವನ್ನು ಆರಂಭಿಸಿದ್ದು, ಕಡಿಮೆದರದಲ್ಲಿ ಅದರಲ್ಲೂ ಡಯಾಬಿಟೀಸ್ ರೋಗಿಗಳಿಗೆ ಔಷಧಿಗಳು ಲಭ್ಯವಾಗುತ್ತದೆ. ಇದನ್ನು ಜನರು ಸದುಪಯೋಗಪಡಿಸಿಕೊಳ್ಳಿ ಎಂದು ಕಾರ್ಪೋರೇಟರ್ ಗಿರಿಜಾ ಧನಿಯಾಕುಮಾರ್ ಹೇಳಿದರು.