ಬೆಂಗಳೂರು:
ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರದ 2019-20ನೇ ಸಾಲಿನ 2 ನೇ ಬಜೆಟ್ ಅನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಮಂಡಿಸಿದ್ದು, ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿ ಮದ್ಯಪ್ರಿಯರಿಗೆ ಶಾಕ್ ನೀಡಿದ್ದಾರೆ.
ಯಾವುದು ಏರಿಕೆ?:
- ಬಿಯರ್, ಡ್ರಾಟ್ ಬಿಯರ್, ಮೈಕ್ರೋ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಲೋ ಆಲ್ಕೋಹಾಲಿಕ್ ಬಿವೆರೇಜಸ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳ.
- ಮದ್ಯದ ಮೇಲಿನ ಅಬಕಾರಿ ಸುಂಕ ಶೇ4ರಷ್ಟು ಹೆಚ್ಚಳ.
- ಅಬಕಾರಿ ಸುಂಕ 17 ಸ್ಲ್ಯಾಬ್ ಗಳಿಗೆ ಶೇ 15 ರಿಂದ ಶೇ 34ಕ್ಕೆ ಏರಿಕೆ
- ಮದ್ಯ, ತಂಬಾಕು ಉತ್ಪನ್ನಗಳು, ಸಿಗರೇಟು, ಬೀಡಿ ಬೆಲೆ ಈ ಹಿಂದಿನ ಬಜೆಟ್ ನಂತೆ ಜಾರಿಗೆ.
ರೈತರ ಸಾಲಮನ್ನಾ ಹಾಗೂ ಯೋಜನೆಗಳಿಗೆ ಹಣ ಸಂಗ್ರಹ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಇದರಿಂದ ಮದ್ಯಪಾನ ಪ್ರಿಯರಿಗೆ ಆಘಾತ ಹೆಚ್ಚಾದಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ