ಬೆಂಗಳೂರು
ಕೃಷಿ ಹೊಂಡದಲ್ಲಿ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟ ತಾಯಿ ಮಗಳು ಮೃತದೇಹ ಪತ್ತೆಯಾಗಿರುವ ಘಟನೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಚೇನಹಳ್ಳಿ ಬಳಿಯ ಖಾಸಗಿ ಬೀಜ ಕಂಪನಿ ಮಾನ್ಸೆಂಟೊ ಸೇರಿದ ಕೃಷಿಹೊಂಡದಲ್ಲಿ 25 ವರ್ಷದ ಮಹಿಳೆ ಹಾಗೂ 8 ವರ್ಷದ ಬಾಲಕಿಯ ಅಪರಿಚಿತ ಮೃತದೇಹಗಳ ಪತ್ತೆಯಾಗಿದ್ದು ತಾಯಿ ಮಗಳಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ ಮಾಹಿತಿ ತಿಳಿದು ಸ್ಥಳಕ್ಕೆ ಗೌರಿಬಿದನೂರು ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಯಾರಾದರೂ ಕೊಲೆ ತಂದೆ ಕೃಷಿಹೊಂಡಕ್ಕೆ ಹಾಕಿದ್ದಾರೆಯೇ ಎನ್ನುವ ನಿಟ್ಟಿನಲ್ಲಿ ತನಿಖೆ ಆರಂಭವಾಗಿದೆ. ಇದುವರೆಗೂ ಮಹಿಳೆ ಮತ್ತು ಬಾಲಕಿಯ ಹೆಸರು, ವಿವರಗಳು ಪತ್ತೆಯಾಗಿಲ್ಲ.ಆದರೆ ಬೆಂಗಳೂರಿನ ಸ್ಯಾಟ್‍ಲೈಟ್ ನಿಂದ ಮೆಜೆಸ್ಟಿಕ್‍ಗೆ ಬಂದಿರುವ ಮಹಿಳೆ ಬಳಿಕ ಮೆಜೆಸ್ಟಿಕ್‍ನಿಂದ ಹಿಂದೂಪುರಕ್ಕೆ ಟಿಕೆಟ್ ತೆಗೆದುಕೊಂಡಿದ್ದಾರೆ. ಆ ಟಿಕೆಟ್ ಹಾಗೂ ಜೊತೆಗೆ ಒಂದು ಫೋಟೋ ಕೃಷಿಹೊಂಡದ ಬಳಿ ಪತ್ತೆಯಾಗಿದೆ.ಈ ಘಟನೆ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.