ಬೆಂಗಳೂರು
ಆನೇಕಲ್‍ನ ಉಪ ನೋಂದಾಣಾಧಿಕಾರಿಗಳ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು 9 ಲಕ್ಷ ರೂ. ಹಣವನ್ನು ದುಷ್ಕರ್ಮಿಗಳು ದೋಚಿರುವ ಘಟನೆ ನಡೆದಿದೆ.
ಜೆಪಿ ನಗರದ ದಿನಕರ್ ಅವರು ಮನೆ ಮಾರಾಟ ಮಾಡಿ ಬಂದ ಹಣವನ್ನು ಕಾರಿನಲ್ಲಿಟ್ಟು ತೆರಳಿದ್ದ ವೇಳೆ ಹೊಂಚು ಹಾಕಿದ ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿದ್ದು ಅವರಿಗಾಗಿ ಶೋಧ ನಡೆಸಲಾಗಿದೆ.
ಬನಹಳ್ಳಿಯಲ್ಲಿದ್ದ ಮನೆಯನ್ನು ಮಾರಾಟ ಮಾಡಿದ್ದು ಮುಂಗಡವಾಗಿ 9 ಲಕ್ಷ ರೂ. ನೀಡಿದ್ದನ್ನು ಕಾರಿನಲ್ಲಿಟ್ಟು ಕಚೇರಿ ಒಳಗೆ ತೆರಳಿ 10 ನಿಮಿಷದಲ್ಲಿ ಬಂದು ಕಾರು ಬಳಿ ಬಂದು ನೋಡಿದಾಗ ಗಾಜು ಒಡೆದ ದುಷ್ಕರ್ಮಿಗಳು ಹಣವನ್ನ ಕಳವು ಮಾಡಿ ಪರಾರಿಯಾಗಿದ್ದರು.
ಕಾರು ನಿಲ್ಲಿಸಿದ್ದ ಸ್ಥಳದಲ್ಲೇ ಹೋಟೆಲ್ ಸ್ಥಳದಲ್ಲಿದ್ದ ಯಾರಿಗೂ ತಿಳಿಯದಂತೆ ಕಾರಿನ ಗಾಜು ಒಡೆದು ಹಣ ಕಳ್ಳತನ ಮಾಡಿದ್ದಾರೆ. ನನಗೆ ಈ ಸ್ಥಳದ ಪರಿಚಯ ಹೆಚ್ಚು ಇಲ್ಲ. ಸ್ಥಳೀಯವಾಗಿ ಒಂದು ಸಿಸಿಟಿವಿ ಮಾತ್ರ ಲಭ್ಯವಿದೆ ಎಂದು ಆನೇಕಲ್ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ದಿನಕರ್ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.