ಮಲೇಬೆನ್ನುರು :
ನರೇಂದ್ರ ಮೋದಿಜಿಯವರು ದೇಶದ ಪ್ರಧಾನಿ ಹುದ್ದೆಗೆ ಏರಿದ ಕ್ಷಣದಿಂದಲೂ ರಾಷ್ಟ್ರವು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಕಂಪನ್ನು ಬೀರಿ ವಿಶ್ವ ಗುರುವಾಗುವತ್ತ ಸಾಗಿದೆ ಆದ್ದರಿಂದ ಭಾರತಿಯರೇಲ್ಲರೂ ಮೋದಿಜಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಕೈ ಜೋಡಿಸಬೆಕೆಂದು “ಟೀಮ್ ಮೋದಿ ಹಾಲಿವಾಣ” ಗ್ರಾಮದ ಸಂಚಾಲಕ ಚೇತನ್ ಕುಮಾರ್ ಕರೆ ನೀಡಿದರು.
ಚಕ್ರವರ್ತಿ ಸೂಲಿಬೇಲಿಯವರ ಸಾರಥ್ಯದ “ಟೀಮ್ ಮೋದಿ” ಕಾರ್ಯಕ್ರಮದ ಅಂಗವಾಗಿ ನರೇಂದ್ರ ಮೋದಿ ರಥಯಾತ್ರೆ ನೆನ್ನೆ ಪಟ್ಟಣಕ್ಕೆ ಮತ್ತು ಸಮೀಪದ ಹಾಲಿವಾಣ ಗ್ರಾಮಗಳಿಗೆ ಆಗಮಿಸಿತು.
ರಥಯಾತ್ರೆಯ ಎಲ್.ಇ.ಡಿ. ಸ್ಕ್ರಿನ್ ಮೂಲಕ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರ ಜನಪರ ಯೋಜನೇಗಳ ಕುರಿತ 30ನಿಮಿಷಗಳ ವಿಡಿಯೋ ಪ್ರದರ್ಶನ ನಡೆಯಿತು.ಕಾರ್ಯಕ್ರಮದಲ್ಲಿ ಅನೇಕ ಸಾರ್ವಜನಿಕರು,ವಿಧ್ಯಾರ್ಥೀಗಳು,ಯುವಕರ ಗುಂಪುಗಳು ಮತ್ತಿತರ ರಾಜಕೀಯ ಸಂಘಟನೇಗಳು ಸಾಥ್ ನೀಡಿದ್ದವು.
ಯಾತ್ರೆಯು ಪಟ್ಣಣಕ್ಕೆ ಬಂದಾಗ ಮೋದಿಜಿಯವರ ಟ್ಯಾಬ್ಲು ಹೊಂದಿದ ಗಾಡಿಗೆ ಹೂವನ್ನು ಚೆಲ್ಲುವ ಮೂಲಕ ಯುವಕರು ಸ್ವಾಗತ ಕೋರಿದ್ದರು ಕಾರ್ಯಕ್ರಮದಲ್ಲಿ “ಟೀಮ್ ಮೋದಿ” ಸಂಚಾಲಕಿ ಕುಮಾರಿ ಶಾರದ ಮತ್ತು ಕಾರ್ತಿಕ್ ಮೋದಿ,ಜಿ.ಪಂ.ಸದಸ್ಯ ಬಿಎಂ ವಾಗೀಶ್ ಸ್ವಾಮಿ. ತಾಪಂ.ಮಾಜಿ ಸದಸ್ಯ ಐರಣಿ ಅಣ್ಣಪ್ಪ, ಹಾಲಿವಾಣ ಗ್ರಾಮದ ಮನೋಜ್ ಕೆ ಎಸ್ ಮತ್ತಿತರ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು